ಶಾಂತಿ ಮತ್ತು ನೆಮ್ಮದಿ ಜೀವನಕ್ಕೆ ಯೋಗ, ಧ್ಯಾನ ಮುಖ್ಯ
Yoga, meditation are important for a peaceful and tranquil life
ರಾಣೇಬೆನ್ನೂರು 18: ಆರೋಗ್ಯ ರಕ್ಷಣೆಗೆ ಯೋಗ ಧ್ಯಾನ ಪ್ರಾಣಾಯಾಮ ಇಂದಿನ ಅಗತ್ಯವಾಗಿದ್ದು ಆಯುಷ್ ಇಲಾಖೆಯು ಈ ನಿಟ್ಟಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದಾಗಿ ಆಯುಷ್ ಇಲಾಖೆಯ ಡಾ: ಜಿ.ಸಿ. ನಿಡಗುಂದಿ ಹೇಳಿದರು.
ನಗರ ಹೊರ ವಲಯದ ಆರಿ್ಟ. ಎಸ್. ಕಾಲೇಜು ಕಲಾ ಮತ್ತು ವಿಜ್ಞಾನ ವಿದ್ಯಾಲಯ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಆಯೋಜಿಸಿದ್ದ, "ಹರಿತ್" ಯೋಗ ಶ್ರಮ ಧಾನ ಮತ್ತು ಯೋಗಾಭ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ. ಸಂಜಯ್ ಸಾಹುಕಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಆಯುಷ್ ಇಲಾಖೆಯ ಯೋಗ ತರಬೇತುದಾರರಾದ ಜ್ಯೋತಿ ಜೆ.ಜಂಬಿಗಿ ಅವರು ಮಾತನಾಡಿ, ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಸಲು ನಿತ್ಯ ಯೋಗ, ಧ್ಯಾನ, ಪ್ರಾಣಯಾಮ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕರು, ಯಾವುದೇ ಜಾತಿ ಮತ ವಯಸ್ಸಿನ ಭೇದವಿಲ್ಲದೆ, ನಿತ್ಯ ಬದುಕಿನಲ್ಲಿ ಕ್ಷಣ ಕಾಲ ಯೋಗ ಅಳವಡಿಸಿಕೊಂಡರೆ, ಜೀವನ ಪರ್ಯಂತ ಆರೋಗ್ಯ ಜೀವನ ಸಾಗಿಸಬಹುದಾಗಿದೆ ಎಂದು ಕರೆ ನೀಡಿದರು. ಕಾಲೇಜು ಪ್ರಾಚಾರ್ಯ . ಸಿ. ಎ. ಹರಿಹರ, ಎನ್. ಎಸ್. ಎಸ್ ಕಾರ್ಯಕ್ರಮಾಧಿಕಾರಿ ಡಾ. ಸರಸ್ವತಿ ಬೊಮ್ಮನಾಳ, ಡಾ. ಮನೋಜಕುಮಾರ ಸವಣೂರ,ಡಾ. ಬಾಬಾ ಸಾಹೇಬ ಜಂಗಳಪ್ಪನವರ, ಜಿಲ್ಲಾ ಆಯುಷ್ ಅಧೀಕ್ಷಕ ಪ್ರಸನ್ನ ಕುಮಾರ, ಡಾ. ಎಸ್.ಎ. ಪಾಟಿಲ, ಎಸ್. ಎ. ಹೇಡಿಯಾಲ, ಸುರೇಶ ಕರಬಸಪ್ಪ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 