ಯರಗಟ್ಟಿ ಮೊಹರಂ ಭಾವೈಕ್ಯತೆಯ ಪ್ರತೀಕ: ಪ್ರಮುಖ ವಾರ್ಡುಗಳಲ್ಲಿ ಗರಿಗೆದರಿದೆ ಮೊಹರಂ ಸಂಭ್ರಮ

ಯರಗಟ್ಟಿ ಮೊಹರಂ ಭಾವೈಕ್ಯತೆಯ ಪ್ರತೀಕ: ಪ್ರಮುಖ ವಾರ್ಡುಗಳಲ್ಲಿ ಗರಿಗೆದರಿದೆ ಮೊಹರಂ ಸಂಭ್ರಮ  Yaragati Muharram is a symbol of unity

ವರದಿ: ಈರಣ್ಣಾ ಹುಲ್ಲೂರ ಯರಗಟ್ಟಿ 

ಯರಗಟ್ಟಿ ಪಟ್ಟಣದಲ್ಲಿ  ನಡೆಯುವ ಮೊಹರಂ ಆಚರಣೆ ವೀಕ್ಷಣೆಗೆ ರಾಜ್ಯ, ನೆರೆ ರಾಜ್ಯಗಳ ಸಹಸ್ರಾರು ಭಕ್ತರು ಸೇರುವುದು ವಿಶೇಷವಾಗಿದೆ ಸಂಭ್ರಮ ಚಟುವಟಿಕೆ ಚುರುಕು ಗೊಂಡಿದೆ... 

ಯರಗಟ್ಟಿ ಪಟ್ಟಣದ ಮೊಹರಂ ಭಾವೈಕ್ಯದ ಪ್ರತೀಕವಾಗಿದೆ. ಜೊತೆಗೆ ಮೊಹರಂ ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ಆದಿಲ್ಶಾಹಿ ಯುದ್ಧದಲ್ಲಿ  ವಶಪಡಿಸಿಕೊಂಡ ನಂತರ ತನ್ನೊಂದಿಗೆ ತಂದಿದ್ದ ಆಲಂ (ದೇವರು) ಗಳನ್ನು ಇಲ್ಲಿ ಸ್ಥಾಪಿಸಿ ಪೂಜಿಸಿದ್ದ ಎಂಬ ಪ್ರತೀತಿ ಇದೆ. 

ಶ್ರೀಮಂತ-ಬಡವ, ಮೇಲು-ಕೀಳು ಎಂಬ ಭೇದವಿಲ್ಲದೆ ಸರ್ವ ಧರ್ಮದವರು ಇದರಲ್ಲಿ ಭಾಗಿಯಾಗುವುದು ವಿಶೇಷ. ಇಲ್ಲಿರುವ ಆಲಂ ದೇವರುಗಳಿಗೆ ಕಲ್ಯಾಣದ ರಾಜ ದತ್ತಿಗಳನ್ನು ಕಳಿಸುತ್ತಿದ್ದ ಎಂದು ಇತಿಹಾಸದ ದಾಖಲೆಗಳಿಂದ ತಿಳಿದು ಬರುತ್ತದೆ. 

ಮನಮೋಹಕ: ಬಿಬಿಪಾತಿಮಾ, ಬಾರಾ ಇಮಾಮ್, ಫಕ್ಕೀರ​‍್ಪ, ಆಲದಕಟ್ಟೆಪ್ಪ, ಹೂಲಿಕಟ್ಟೆಪ್ಪ, ಹಸೇನ ಹುಸೇನ, ಸವಾರಿ ವೈಭವದಿಂದ ನಡೆಯುತ್ತದೆ. ಇದನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಳ್ಳುತ್ತಾರೆ.  

ದರ್ಗಾದ ಮುಂದಿರುವ ಅಲಾವಿ ಕುಣಿ ಮುಂದೆ ಯುವಕರ ಹೆಜ್ಜೆ ಹಾಕುತ್ತಾರೆ. ನೋಡಲು ಕಣ್ಣು ಸಾಲದು ಕಾಳಗ ಯುದ್ಧದ ಘೋರ ವರ್ಣನೆ, ಅನ್ಯಾಯ, ವಂಚನೆ, ಶೌರ್ಯ-ಬಲಿದಾನಗಳ ಕಥನವನ್ನು ಹಾಡುಗಾರರು ಹಾಡಿ ವರ್ಣಿಸುತ್ತಾರೆ. 

ಕಣ್ಣು ತುಂಬಿಕೊಳ್ಳುವ ಸಿಂಗಾರ: ಮೊಹರಂ ಅಂಗವಾಗಿ ಪಟ್ಟಣದ ಮುಸ್ಲಿಂ-ಹಿಂದೂ ಸಮುದಾಯದವರು ಮನೆಗೆ ಸುಣ್ಣ ಬಣ್ಣ ಬಳಿದು ಸಿಂಗರಿಸಿ ಹಬ್ಬ ಆಚರಿಸುತ್ತಾರೆ. ಹರಕೆ ಹೊತ್ತವರು ಆಲಂಗಳಿಗೆ ಮುಡಿಪು ಅರ​‍್ಿಸುತ್ತಾರೆ. 

ಯರಗಟ್ಟಿ ಮೊಹರಂ ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಪಟ್ಟಣದ  ನಡೆಯುವ ಬಿಬಿ ಫಾತಿಮಾ, ಬಾರೆ ಮಾಮಾ, ಹಸನ್‌-ಹುಸೇನ್ ಸಹೋದರರ ಬೆಳ್ಳಿ ಪಾಂಜಾಗಳ ಮುಖಾಮುಖೀ ದೃಶ್ಯ  ಮುಂದೆ  ಕಣ್ತುಂಬಿಕೊಳ್ಳಲು ಬಹುದು .. 

5 ದಿನದ ವಿಶೇಷ: ಪಟ್ಟಣದಲ್ಲಿ ಸತತ 5 ದಿನಗಳ ಕಾಲ ಆಚರಿಸುವ ಮೊಹರಂದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. ದಿನಾಂಕ ಬುಧವಾರ ದಿ. 02 ರಿಂದ ರವಿವಾರ ದಿ. 06 ತಾರೀಖ ಮೊಹರಂ ಎಂದು ಆಚರಿಸಿದರೆ, 5ನೇ ದಿನ ಜಿಹಾಲ್ ಎಂದು, 5ನೇ ದಿನ ಪೀರಾಗಳ ಸವಾರಿ, ಬಿಬಿ ಪಾತಿಮಾ ಬಾರಾ ಇಮಾಮ್, ಫಕ್ಕೀರ​‍್ಪ, ಆಲದಕಟ್ಟೆಪ್ಪ, ಹೂಲಿಕಟ್ಟೆಪ್ಪ, ಹಸೇನ ಹುಸೇನ, (ಖತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 5ನೇ ದಿನ ದಫನ್ ಕಾರ್ಯಕ್ರಮ ನಡೆಯುತ್ತವೆ. ಆಲಂ(ದೇವರು)ಗಳ ಕೊನೆಯ ಭೇಟಿ ರೊಮಾಂಚನಕಾರಿ ಯಾಗಿರುತ್ತದೆ. 

ಮೊಹರಂ ಆಚರಣೆಗಾಗಿ ವಿಶೇಷ ಭದ್ರತೆ: ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಯರಗಟ್ಟಿ ಮೊಹರಂ ನೋಡಲು ನೇರೆಯ ಗೋವಾ, ಮಹಾರಾಷ್ಟ್ರ ರಾಜ್ಯಗಳ ಹಾಗೂ ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಜನರು ಯರಗಟ್ಟಿಗೆ ಆಗಮಿಸುತ್ತಾರೆ.  

ಹೀಗಾಗಿ ಯರಗಟ್ಟಿ ಪಟ್ಟಣದಲ್ಲಿ ಸಾವಿರಾರು ಜನರ ಓಡಾಟ ಇರುತ್ತದೆ. ಹೀಗಾಗಿ ಪೊಲೀಸ್ ಇಲಾಖೆ ಈಗಾಗಲೇ ಅಲವಾರು ಸುತ್ತಿನ ಸಭೆ ನಡೆಸಿದೆ. ಅಲ್ಲದೇ ಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗುವ ಮೊಹರಂ ಹಬ್ಬದಲ್ಲಿ ನಾಡಿನ ಭಕ್ತಾಧಿಗಳು ದೇವರುಗಳ ಭೇಟಿಯಾಗಿ ಬಂದು-ಹೋಗುವ ವೇಳೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ಹತ್ತಾರು ಮುಂಜ್ರಾಗತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 

ಜಾತಿ ಮತ ಮರೆತು ಪಂಝಾ ಪ್ರತಿಸ್ಥಾಪಿಸಿದ ಮೂರು ದಿನವರೆಗೆ ಗ್ರಾಮದ ರೈತರು ತಮ್ಮ ಜಮಿನುಗಳಲ್ಲಿ ಯಾವುದೇ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಿಲ್ಲ. ವಿವಿಧ ಕೆಲಸದ ನಿಮಿತ್ತ ಪರಸ್ಥಳಗಳಲ್ಲಿ  ಕೆಲಸದ ಮೇಲಿರುವವರು ರಜೆ ಹಾಕಿ, ಮೂಹರಂ ಆಚರಣೆಗೆ ಒಂದುಗೊಡುತ್ತಾರೆ. ಯರಗಟ್ಟಿಯ ದೇಸಾಯಿ ಮನೆತನದಿಂದ ಗಂದ ಮತ್ತು ನೈವೆದ ಬಂಧನಂತರ ನಂತರ ಎಲ್ಲಾ ಪಂಝಾಗಳಿಗೆ ಗಂದ ಏರಿಸುವುದು ಇಲ್ಲಿನ ವಿಷೇಶತೆ 

ನೀಲಪ್ಪ ಸಿದ್ದಪ್ಪ ಬಾರ್ಕಿ, ಗ್ರಾಮದ ಹಿರಿಯರು 

ಯರಗಟ್ಟಿ ಭಾವೈಕ್ಯತೆಯ ಪ್ರತೀಕವಾಗಿರುವ ಈ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮಾಜದವರು ಒಂದಾಗಿ ಆಚರಿಸುತ್ತೆವೆ. ನಮ್ಮ ಮುಸ್ಲಿಂ ಸಮಾಜಕ್ಕಿಂತ ಹೆಚ್ಚಾಗಿ ಹಿಂದೂ ಸಮಾಜದ ಬಾಂಧವರು ಈ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ ಇದು ಭಾವೈಕ್ಯತೆಯ ಪ್ರತೀಕವಾದ ಹಬ್ಬವಾಗಿದೆ, ಸರ್ವರು ಏಕತೆಯಿಂದ ಹಬ್ಬವನ್ನು ಆಚರಣೆ ಮಾಡುತ್ತೆವೆ. 

ಇಮ್ತಿಯಾಜ್ ಖಾದ್ರಿ, ಮುಸ್ಲಿಂ ಸಮಾಜದ ಮುಖಂಡರು 

ಹಬ್ಬ ವನ್ನು ಸರ್ವಧರ್ಮೀಯರು ಸೌಹಾರ್ದತೆಯಿಂದ ಆಚರಿಸಬೇಕು. ಕೋಮು-ಗಲಭೆಗಳನ್ನು ಸಷ್ಟಿಸಿಕೊಂಡು ಹಬ್ಬ ಆಚರಿಸುವುದರಿಂದ ಧಾರ್ಮಿಕ ನಂಬಿಕೆಗಳು ದೂರವಾಗುತ್ತವೆ. ಹೀಗಾಗಿ ಗ್ರಾಮಸ್ಥರೆಲ್ಲರೂ ಸಹೋದರರಂತೆ ಮೊಹರಂ ಹಬ್ಬವನ್ನು ಆಚರಿಸಬೇಕು ಎಂದರು. ಪೀರಲದೇವರುಗಳ ದಫನ್ ದಿನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ಬಂದೋಬಸ್ತ್‌ ಕಲ್ಪಿಸಲಾಗಿದೆ. 

ಐ. ಎಂ. ಮಠಪತಿ, ಸಿಪಿಐ ಮುರಗೋಡ