ಯಡೂರ ವೀರಭದ್ರೇಶ್ವರ ದೇವಸ್ಥಾನ ಜಲಾವೃತ
Yadoor Veerabhadreshwara Temple flooded
ಮಾಂಜರಿ 23: ದಕ್ಷಿಣದ ಕಾಶೀ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ವೀರಭದ್ರೇಶ್ವರ ದೇವಸ್ಥಾನ ಜಲಾವೃತ ಹಿನ್ನೆಲೆಯಲ್ಲಿ ಭಕ್ತರು ಬಾಗಿಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ಇವತ್ತು ಶ್ರಾವಣ ಮಾಸದ ಕೊನೆಯ ಅಮವಾಸ್ಯೆ ಹಿನ್ನೆಲೆಯಲ್ಲಿ ವೀರಭದ್ರೇಶ್ವರ ದೇವರ ದರ್ಶನ ಪಡೆಯಲು ಕರ್ನಾಟಕ, ಮಹಾರಾಷ್ಟ್ರದ, ಆಂದ್ರ್ರದೇಶದ ಸೇರಿದಂತೆ ವಿವಿಧ ಭಾಗಗಳಿಂದ ದರ್ಶನ ಪಡೆಯಲು ಆಗಮಿಸುತ್ತಾರೆ. ದೇವಸ್ಥಾನ ಜಲಾವೃತಗೊಂಡ ಹಿನ್ನೆಲೆಯಲ್ಲಿ ಭಕ್ತರು ಪೂರ್ವ, ಉತ್ತರದ ಬಾಗಿಲು ಹಾಗೂ ದೇವಸ್ಥಾನ ಹಿಂಭಾಗದಲ್ಲಿ ನಿಂತು ದರ್ಶನವನ್ನು ಪಡೆಯುತ್ತಿದ್ದಾರೆ. ಮಂಜಾಗೃತಾ ಕ್ರಮವಾಗಿ ಭಕ್ತರು ದೇವಸ್ಥಾನದ ಒಳಗಡೆ ಪ್ರವೇಶಿಸಬಾರದೆಂದು ಎಲ್ಲ ಬಾಗಿಲುಗಳನ್ನು ಬಂದ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ದೇವಸ್ಥಾನದ ಕಟ್ಟಡಗಳ ಸೈಟ್ ಇನಚಾರ್ಜ ಸುನೀಲ ಬಿರದೆ ಮಾತನಾಡಿ ನಿನ್ನೆ ಸಾಯಂಕಾಲ ಈ ದೇವಸ್ಥಾನ ಜಲಾವೃತಗೊಂಡಿದೆ. ಭಕ್ತರು ಸಾಕಷ್ಟು ಪ್ರಮಾಣದಲ್ಲಿ ಆಗಮಿಸುತ್ತಿದ್ದಾರೆ. ವೀರಭದ್ರೇಶ್ವರ ದೇವರಿಗೆ ಜಲಾಭಿಷೇಕ ಆಗಿರುವುದು ಸಂತಸದ ಸುದ್ದಿ. ಭಕ್ತರು ದೂರದಿಂದ ನಿಂತು ದರ್ಶನ ಪಡೆಯಬೇಕೆಂದು ಮನವಿಯನ್ನು ಮಾಡಿಕೊಂಡರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 