ಪ್ರತಿ ಜಾತಿಗಣತಿಯಲ್ಲೂ ಮಾದಿಗ ಬರೆಯಿಸಿ: ಮಾಜಿ ಸಚಿವ ಎಚ್.ಆಂಜನೇಯ
Write Madiga in every caste census: Former Minister H. Anjaneya
ಚಿತ್ರದುರ್ಗ 18: ರಾಜ್ಯದಲ್ಲಿ 35 ವರ್ಷದ ಹೋರಾಟದ ಫಲ ಒಳಮೀಸಲಾತಿ ದೊರೆತಿದ್ದು, ಮಾದಿಗಸಮುದಾಯದ ಕೈಯಲ್ಲಿದ್ದ ಖಾಲಿ ತಟ್ಟೆಗೆ ಒಳಮೀಸಲಾತಿ ಹೆಸರಲ್ಲಿ ಅನ್ನವನ್ನುಸಿದ್ದರಾಮಯ್ಯ ಬಡಿಸಿದ್ದು, ಅದನ್ನು ಉಂಡು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿಪ್ರಗತಿ ಸಾಧಿಸಬೇಕಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದ್ದಾರೆ.
ರಾಜ್ಯದಲ್ಲಿ ಬಹಳಷ್ಟು ಸಂಖ್ಯೆಯಲ್ಲಿರುವ ಮಾದಿಗರು ಯಾವುದೇ ಗೊಂದಲಕ್ಕೆಒಳಗಾಗದೇ ಪ್ರತಿ ಜಾತಿಗಣತಿಯಲ್ಲೂ ಮಾದಿಗ ಎಂದು ಜಾತಿ ಕಲಂ ನಲ್ಲಿ ಬರೆಯಿಸಬೇಕು.ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕಸಮೀಕ್ಷೆ ನಡೆಸಲಿದ್ದು, ಈ ಸಂದರ್ಭ ಮಾದಿಗರು ಎಕೆ, ಎಡಿ, ಆದಿಆಂಧ್ರ ಎಂದು ಬರೆಯಿಸಿದೆಮೂಲ ಜಾತಿ ಮಾದಿಗ ಎಂದು ಬರೆಯಿಸಬೇಕು. ಇಲ್ಲದಿದ್ದರೇ ಮೀಸಲಾತಿ ಸೌಲಭ್ಯ ಕಂಟಕ ಖಚಿತ ಎಂದು ಹೆಚ್ಚಿಸಿದ್ದಾರೆ.ರಾಜ್ಯ ಸರ್ಕಾರದ ಬಳಿಕ ಕೇಂದ್ರ ಸರ್ಕಾರವೂ ಜಾತಿಗಣತಿ ನಡೆಸಲಿದೆ. ಆ ಸಂದರ್ಭದಲ್ಲೂತಮ್ಮ ಮೂಲ ಜಾತಿ ಬರೆಯಿಸಬೇಕು. ಆದ್ದರಿಂದ ಈ ಸಂಬಂಧ ಸಮುದಾಯದಲ್ಲಿ ಜಾಗೃತಿ ಮೂಡಿಸಲುಹಾಗೂ ಒಳಮೀಸಲಾತಿ ಬಡ್ತಿ ಸೇರಿ ವಿವಿಧ ಕ್ಷೇತ್ರಕ್ಕೆ ವಿಸ್ತರಿಸಬೇಕೆಂಬ ಬೇಡಿಕೆಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕಿದೆ. ಆದ್ದರಿಂದ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದ ಗೇಟ್ ನಂ-4 ಸಭಾಂಗಣದಲ್ಲಿ ಸೆ.20ರ ಶನಿವಾರ ಮಧ್ಯಾಹ್ನ2.30 ಗಂಟೆಗೆ ಊಟ ನಂತರ ಮಾದಿಗ ಮುಖಂಡರ ಸಭೆ ಕರೆಯಲಾಗಿದೆ.
ಮೈಸೂರು, ಬೆಂಗಳೂರು ವಿಭಾಗಗಳಲ್ಲಿ ಆದಿಕರ್ನಾಟಕ, ಆದಿದ್ರಾವಿಡ, ಆಧಿಆಂಧ್ರ ಎಂದು ಬರೆಸದೆ ಮಾದಿಗರೆಂದೇ ಬರೆಸಲು ಅರಿವು ಮೂಡಿಸುವುದು. ರಾಜ್ಯಾದ್ಯಂತ ಮಾದಿಗ ಎಂದೇಬರೆಸುವ ಬಗ್ಗೆ ಚರ್ಚೆ.ಮಾಜಿ ದೇವದಾಸಿಯರ ಪುರ್ನವಸತಿ ಕಲ್ಪಿಸುವ ಬಗ್ಗೆ ಸೆ.15ರಂದು ಆರಂಭಗೊಂಡಿರುವ ಸಮೀಕ್ಷೆಅ.11ರ ವರೆಗೆ ನಡೆಯಲಿದ್ದು, ಅವರಲ್ಲಿ ಬಹುಸಂಖ್ಯಾತರು ಮಾದಿಗರು ಇರುವ ಕಾರಣ ಜಾಗೃತಿ ಮೂಡಿಸುವುದು.ಕಳೆದ 35 ವರ್ಷಗಳಿಂದ ಒಳಮೀಸಲಾತಿ ಹೋರಾಟದಲ್ಲಿ ತೊಡಗಿ ನಮ್ಮನ್ನು ಅಗಲಿರುವ ನಾಯಕರಾದ ಪಾರ್ಥಸಾರಥಿ ತುಮಕೂರು, ಮಾಪಣ್ಣ ಹದನೂರು ಕಲಬುರಗಿ, ಹೂಡಿ ವೆಂಕಟೇಶ್ ಬೆಂಗಳೂರು, ರವಿಹೊಸಮನಿ ಇಲಕಲ್ ಇತರರ ಹೋರಾಟವನ್ನು ಸ್ಮರಿಸಲಾಗುವುದು.
ಈ ಸಭೆಯಲ್ಲಿ ರಾಜ್ಯಸಭೆ ಮಾಜಿ ಸಂಸದ ಡಾ.ಎಲ್.ಹನುಮಂತಯ್ಯ, ಮಾಜಿ ಸಂಸದಬಿ.ಎನ್.ಚಂದ್ರ್ಪ, ಮಾಜಿ ಸಚಿವ ಎಂ.ಶಿವಣ್ಣ, ಶಾಸಕರಾದ ರೂಪಶಶಿಧರ್,ಕೆ.ಎಸ್.ಬಸವಂತಪ್ಪ, ಎನ್.ಶ್ರೀನಿವಾಸ್, ಎಂಎಲ್ಸಿಗಳಾದ ಡಾ.ತಿಮ್ಮಯ್ಯ,ಎ.ವಸಂತ್‌ಕುಮಾರ್, ಹೆಚ್.ಪಿ.ಸುಧಾಮ್‌ದಾಸ್, ಮಾಜಿ ಎಂಎಲ್ಸಿ ಆರ್.ಧರ್ಮಸೇನ,ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಮಾಜಿ ಅಧ್ಯಕ್ಷರಾದ ನಾರಾಯಣ ಮೈಸೂರು, ಎ.ಮುನಿಯಪ್ಪ, ಮಾನಯ್ಯ,ಎಸ್.ಮಾರ್ಪ,ಎಂ.ಆರ್.ವೆಂಕಟೇಶ್, ಓ.ಶಂಕರ್, ನಿವೃತ್ತ ಹಿರಿಯ ಅಧಿಕಾರಿಗಳಾದ ಗೋನಾಳ್ ಭೀಮಪ್ಪ, ಹೆಚ್.ಆರ್.ತೇಗನೂರು, ಡಾ.ಬಾಬುರಾವ್ ಮುಡಬಿ, ಭೀಮಶಂಕರ್, ರಾಜ್ಯ ಮಾದಿಗನೌಕರರ ಸಂಘದ ಅಧ್ಯಕ್ಷ ಜಿ.ಮಂಜುನಾಥ ಇತರ ಪ್ರಮುಖರು ಭಾಗವಹಿಸಲಿದ್ದಾರೆ.ಈ ಸಭೆಗೆ ಹೋರಾಟಗಾರರು, ಹಾಲಿ-ಮಾಜಿ ಜನಪ್ರತಿನಿಧಿಗಳು, ಮಾದಿಗ ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಚಿಂತಕರು, ವಿಮುಕ್ತ ದೇವದಾಸಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಜಿ ಸಚಿವ ಎಚ್. ಆಂಜನೇಯ ಕೋರಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 