ಶಿವನನ್ನು ಪೂಜಿಸಿದರೆ ಪಾಪ ಕಳೆದು ಪುಣ್ಯ ಪ್ರಾಪ್ತಿ: ಬ್ರ.ಕು.ಗೀತಕ್ಕ
Worshipping Shiva removes sins and attains virtue: Br.K.Geetaka
ಲೋಕದರ್ಶನ ವರದಿ
ಯಲಬುರ್ಗಾ 16: ಶಿವ ಹಾಗೂ ಶಕ್ತಿಯ ಸಮ್ಮೀಲನವೇ ಶಿವರಾತ್ರಿಯಾಗಿದೆ . ಶಿವರಾತ್ರಿಯಂದು ಉಪವಾಸ ಮಾಡಿ ಶಿವನನ್ನು ಪೂಜಿಸಿದರೆ ಪಾಪಗಳು ಕಳೆದು ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಬ್ರ.ಕು.ಗೀತಕ್ಕನವರು ಹೇಳಿದರು.
ಪಟ್ಟಣದ ಈಶ್ವರಿ ವಿಶ್ವ ವಿದ್ಯಾಲಯದಲ್ಲಿ ಶಿವರಾತ್ರಿ ನಿಮಿತ್ಯ ಆಯೋಜಿಸಿದ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಜ್ಞಾನವನ್ನು ಕಳೆದು ಜ್ಞಾನ ಪ್ರಕಾಶವನ್ನು ಬೆಳುಗವ ಅತ್ಯಂತ ಪವಿತ್ರ ಹಬ್ಬ ಇದಾಗಿದೆ . ವಿಷಕಂಠನಾಗಿ ಎಲ್ಲವನ್ನು ನುಂಗಿ ಜಗವನ್ನು ರಕ್ಷಿಸಿದ ಶಿವನ ಜನ್ಮದಿನವಾದ ಇಂದು ಶಿವನನ್ನು ಆರಾಧಿಸುವ ಮೂಲಕ ಆತನ ಕ್ರಪೆಗೆ ಪಾತ್ರರಾಗಬೇಕಾಗಿದೆ .ಹಿಂದೂಗಳಿಗೆ ಈ ಹಬ್ಬ ಶ್ರೇಷ್ಠವಾಗಿದೆ ಎಂದರು. ಪರಿಶುದ್ಧ ಮಾನವನಾಗಲು ಸಪ್ತ ಸೂತ್ರಗಳನ್ನು ಅಳವಡಿಸಿಕೊಳ್ಳಲು ಹೇಳುತ್ತಾ ಮೋಕ್ಷ ಹಾಗೂ ಆಧ್ಯಾತ್ಮಿಕ ಜಾಗ್ರತೆಗಾಗಿ ಪ್ರಾರ್ಥಿಸುತ್ತಾ ಜೀವನವನ್ನು ಪಾವನ ಮಾಡಿಕೊಳ್ಳೋಣ ಎಂದು ಕರೆ ನೀಡಿದರು. ಮೂಲತಃ 64 ಜ್ಯೋತಿರ್ಲಿಂಗಳು ಇದ್ದರೂ ಅತ್ಯಂತ ಶಕ್ತಿಶಾಲಿ ಹಾಗೂ ದಿವ್ಯತೆಯನ್ನು ಪಡೆದಂತಹ 12 ಜ್ಯೋತಿರ್ಲಿಂಗಗಳಾದ ಸೋಮನಾಥ ಮಲ್ಲಿಕಾರ್ಜುನ ಮಹಾಕಾಳೇಶ್ವರ ಓಂಕಾರೇಶ್ವರ, ಕೇದಾರನಾಥ ಭೀಮಶಂಕರ , ಕಾಶಿ ವಿಶ್ವನಾಥ, ತ್ರ್ಯಂಬಕೇಶ್ವರ , ಬೈದ್ಯನಾಥ ನಾಗೇಶ್ವರ , ರಾಮೇಶ್ವರ ಹಾಗೂ ಘ್ರಷ್ಣೇಶ್ವರ ಎಂಬ 12 ಜ್ಯೋತಿರ್ಲಿಂಗಗಳನ್ನು ಜೀವನದಲ್ಲಿ ದರ್ಶನ ಮಾಡಿದರೆ ಪಾಪ ಕಳೆದು ಮೋಕ್ಷಪ್ರಾಪ್ತಿ ಆಗುತ್ತದೆ ಎನ್ನುವ ಭಕ್ತರ ನಂಬಿಕೆ ಬಹುತೇಕ ಹುಸಿಯಾಗಿಲ್ಲ . ಆರ್ಥಿಕ ಪರಸ್ಥಿತಿ ದುಸ್ತರ ಇದ್ದವರೂ ಎಲ್ಲರೂ ಆ ಲಿಂಗಗಳನ್ನು ನೋಡಲು ಸಾಧ್ಯವಾಗದೆ ಇರಬಹುದು ಎನ್ನುವ ಕಾರಣಕ್ಕಾಗಿ 12 ಜ್ಯೋತಿರ್ಲಿಂಗಗಳ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾಡಲಾಯಿತು. ಬೆಳಿಗ್ಗೆ ಶಿವಧ್ವಜಾರೋಹಣವನ್ನು ಶಿವಕುಮಾರ ಭೂತೆ ಹಾಗೂ ಪ.ಪಂ.ಮಾಜಿ ಅಧ್ಯಕ್ಷ ಸುರೇಶಗೌಡ ಶಿವನಗೌಡರ ನೇರವೇರಿಸಿದರು. ಜ್ಯೋತಿರ್ಲಿಂಗ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು.
ಈ ವೇಳೆ ಸಿದ್ದಯ್ಯ ಕೊಣ್ಣೂರು , ಸಂಗಣ್ಣ ಟೆಂಗಿನಕಾಯಿ , ಸಂಗಣ್ಣ ಕರಂಡಿ ,ಮಲ್ಲಿಕಾರ್ಜುನ ತೊಂಡಿಹಾಳ , ಫಕೀರ್ಪ ಗಾಣಗೇರ , ವೀರಯ್ಯ ಹಿರೇಮಠ , ನಿಂಗಪ್ಪ ಯರಾಶಿ , ಕನಕಪ್ಪ ಕಂಬಳಿ ,ಜಗದೀಶ ಅಂಗಡಿ , ರುದ್ರಗೌಡ ಗೋಣಿ, ವೀರನಗೌಡ ಪಾಟೀಲ , ಆದೇಶ ಹುಬ್ಬಳ್ಳಿ , ಬಸನಗೌಡ ಪಾಟೀಲ , ಶರಣಪ್ಪ ದಾನಕೈ , ಶಿವು ಎಚ್. , ಮಂಜು ಕೊಣ್ಣೂರು , ಹಾಗೂ ಇನ್ನು ಹಲವಾರು ಜನರು ಪಾಲ್ಗೊಂಡಿದ್ದರು ನೂರಾರು ಅಕ್ಕಂದಿರು ಜ್ಯೋತಿರ್ಲಿಂಗಗಳ ಮೆರವೆಣಗೆಯಲ್ಲಿ ಭಾಗಿ ಆಗಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 