ಶ್ರಾವಣದಲ್ಲಿ ಶಿವನ ಆರಾಧನೆ ಶ್ರೇಷ್ಠ ಭಕ್ತಿ ಮಾರ್ಗ : ಚಿಕ್ಕರಾಮಲಿಂಗ ಸ್ವಾಮೀಜಿ
Worshipping Lord Shiva during the month of Shravana is a supreme path of devotion: Chikkaramalinga S
ಲೋಕದರ್ಶನ ವರದಿ
ಮಹಾಲಿಂಗಪುರ 17 : ಶಿವನು ಭಕ್ತರ ಪಾಲಿನ ಕಾಮಧೇನು ಹಾಗೂ ಕಲ್ಪವೃಕ್ಷದಂತೆ. ನಿರ್ಮಲ ಭಕ್ತಿಯಿಂದ ಶಿವನನ್ನು ಆರಾಧಿಸಿದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾರ್ಥಕತೆ ದೊರೆಯುತ್ತದೆ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವವಿದ್ದು, ಜಲಾಭಿಷೇಕ, ಬಿಲ್ವಪತ್ರೆ ಅರ್ಿಸಿ ‘ಓಂ ನಮಃ ಶಿವಾಯ’ ಮಂತ್ರ ಜಪಿಸುವುದು ಅತ್ಯಂತ ಶ್ರೇಷ್ಠವಾದ ಭಕ್ತಿ ಮಾರ್ಗವಾಗಿದೆ ಎಂದು ಅಕ್ಕಲಕೋಟದ ಷ.ಬ್ರ. ಚಿಕ್ಕರಾಮಲಿಂಗ ಶಿವಶರಣ ಸ್ವಾಮೀಜಿ ಹೇಳಿದರು. ನಗರದ ಶಕ್ತಿ ದೇವತೆ ಬನಶಂಕರಿ ದೇವಸ್ಥಾನದಲ್ಲಿ ನೂತನ ಶಿವಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಪರಶಿವನು ಉದಾರ ಮನಸ್ಸಿನವನಾಗಿದ್ದು, ಆತನನ್ನು ಒಲಿಸಿಕೊಳ್ಳಲು ಕಠಿಣ ಆಚರಣೆಗಳಿಗಿಂತ ಪರಿಶುದ್ಧವಾದ ಭಕ್ತಿಯೇ ಮುಖ್ಯ. ಭಕ್ತನು ಮನಃಪೂರ್ವಕವಾಗಿ ಶಿವನನ್ನು ಸ್ಮರಿಸಿದರೆ ಆತನ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ. ಶಿವನ ಆರಾಧನೆಯು ಮನಸ್ಸಿನ ಚಂಚಲತೆಯನ್ನು ದೂರ ಮಾಡಿ ಆತ್ಮಶಾಂತಿಯನ್ನು ನೀಡುತ್ತದೆ ಎಂದರು. ತಪ್ಪನ್ನು ಅರಿತು ಸರಿಪಡಿಸಿಕೊಳ್ಳುವುದೇ ಜೀವನದ ಸಾರ್ಥಕತೆ: ನೀರುಪಾಧಿಶ್ವರ ಸ್ವಾಮೀಜಿ ಮರೆಗುದ್ದಿಯ ಪರಮಪೂಜ್ಯ ಡಾ. ನೀರುಪಾಧಿಶ್ವರ ಸ್ವಾಮೀಜಿ ಶಿವಮೂರ್ತಿಗೆ ಪ್ರಾಣಪ್ರತಿಷ್ಠೆ ನೆರವೇರಿಸಿ ಮಾತನಾಡಿ, ಶಿವನು ಶಾಂತಚಿತ್ತನಾಗಿದ್ದರೂ ಅಧರ್ಮ ಹಾಗೂ ದುಷ್ಟಶಕ್ತಿಗಳ ವಿರುದ್ಧ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ.
ನ್ಯಾಯಹಿಅನ್ಯಾಯದ ತೀರ್ಮಾನದಲ್ಲಿ ಶಿವನ ವ್ಯಕ್ತಿತ್ವ ವಿಶಿಷ್ಟವಾಗಿದೆ. ಭಸ್ಮಧಾರಿಯಾಗಿ ವೈರಾಗ್ಯದ ಮೂರ್ತಿಯಂತೆ ಕಂಡರೂ, ಜಗತ್ತಿನ ಆಗುಹೋಗುಗಳನ್ನು ಸದಾ ಗಮನಿಸುತ್ತಿರುವ ಮಹಾಯೋಗಿಯಾಗಿದ್ದಾನೆ ಎಂದು ಹೇಳಿದರು. ಮನುಷ್ಯನ ಜೀವನದಲ್ಲಿ ತಪ್ಪುಗಳು ಸಹಜ. ಆದರೆ ಮಾಡಿದ ತಪ್ಪನ್ನು ಅರಿತುಕೊಂಡು ಒಪ್ಪಿಕೊಳ್ಳುವುದರ ಜೊತೆಗೆ, ಅದನ್ನು ತಾನೇ ಸರಿಪಡಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಶಿವನ ತತ್ವ ಹಾಗೂ ಸಂದೇಶವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 