ಗುರು ರಾಘವೇಂದ್ರರ ಆರಾಧನೆ ಸಂಪನ್ನ: ಅದ್ದೂರಿ ರಥೋತ್ಸವ
Worship of Guru Raghavendra: A grand chariot festival
ಮಹಾಲಿಂಗಪುರ 13: ಸ್ಥಳೀಯ ವಾಸವಿನಗರ ಮತ್ತು ಎಪಿಎಂಸಿ ರಸ್ತೆಯಲ್ಲಿರುವ ಶಾಖಾ ಮಠದ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಸಂಭ್ರಮ,ಸಡಗರದಿಂದ ಜರುಗಿದವು.
ಪೂರ್ವಾರಾಧನೆ,ಮಧ್ಯಾರಾಧನೆ ಹಾಗೂ ಉತ್ತರಾಧನೆಯು ರವಿವಾರ,ಸೋಮವಾರ, ಮಂಗಳವಾರ ನಡೆದವು.ಸೋಮವಾರ ಎಪಿಎಂಸಿಯ ರಾಘವೇಂದ್ರರ ರಥೋತ್ಸವ,ಮಂಗಳವಾರ ವಾಸವಿನಗರದ ರಾಘವೇಂದ್ರರ ರಥೋತ್ಸವ ವೈಭವದಿಂದ ನಡೆಯಿತು.
ಪಂಚಾಮೃತ ಅಭಿಷೇಕ, ಕನಕಾಭಿಷೇಕ, ನೈವೇದ್ಯ, ಅಲಂಕಾರ, ಹಸ್ತೋದಕ ಮಹಾಮಂಗಳಾರತಿ, ತೀರ್ಥ ಪ್ರಸಾದ, ಸೇವಾಕಾರ್ಯ ಮತ್ತು ಭಜನೆ ಈ ಉತ್ಸವದಲ್ಲಿ ಏರಿ್ಡಸಲಾಗಿತ್ತು. ಬೆಳ್ಳಿರಥ ನಿರ್ಮಾಣ ಮತ್ತು ದೇವಸ್ಥಾನ ಕಾರ್ಯ ಪ್ರಗತಿಗೆ ಅನೇಕ ದಾನಿಗಳು ಧನ ಸಹಾಯ ಮಾಡಿದರು. ಭಕ್ತಾದಿಗಳು ಮೂರು ದಿನಗಳ ಕಾಲ ಗುರು ರಾಘವೇಂದ್ರರ ಆಶೀರ್ವಾದ ಮತ್ತು ಮಹಾಪ್ರಸಾದ ಪಡೆದು ಸಂಪನ್ನರಾದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 