ಪೂಜೆ ಬದುಕಿನ ಆನಂದಕ್ಕೆ ಕಾರಣ: ಶ್ರೀ ಮಹಾಂತ ಸ್ವಾಮೀಜಿ
ಚಿತ್ರದುರ್ಗ 22: ವಿಶ್ವಗುರು ಬಸವಣ್ಣನವರು ಸಂಶೋಧಿಸಿರುವ ಇಷ್ಟಲಿಂಗ ಪೂಜೆ ಬದುಕಿನ ಆನಂದಕ್ಕೆ ಕಾರಣವಾಗಿದೆ ಎಂದು ಶಿರಸಂಗಿ ಶ್ರೀ ಮಹಾಂತ ಸ್ವಾಮೀಜಿಯವರು ತಿಳಿಸಿದರು.
ಶ್ರೀಗಳು ಶರಣ ಸಂಸ್ಕೃತಿ ಉತ್ಸವ 2025ರ ನಿಮಿತ್ತ ಶ್ರೀಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾ ವಿಶ್ರಾಂತಿ ಸನ್ನಿಧಾನದಲ್ಲಿ ಮೂರನೇ ದಿನದ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಡುತ್ತ ಮಾತನಾಡಿ, ಶಿವಯೋಗದಿಂದಾಗುವ ಲಾಭಗಳನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಅರಿವಿಲ್ಲದೆ ಅರ್ಚನೆ ಮಾಡಿದರೆ ಆನಂದ ಪಡೆಯಲು ಸಾಧ್ಯವಿಲ್ಲ, ಅರಿವಿನ ಗುರು ಎಂಬುದನ್ನು ಹೊಂದಲು ಪ್ರೀತಿಯ ವರವನ್ನು ಪಡೆಯಬೇಕು. ನೆಮ್ಮದಿ, ಸಮಾಧಾನ, ಶಾಂತಿಯಿಂದ ಜೀವನ ಮಾಡಬೇಕೆಂದು ಎಲ್ಲರು ಬಯಸುತ್ತಾರೆ. ಸಂಪತ್ತು ಸಮಾಧಾನದ ಜೊತೆಗೆ ಅಪತ್ತನ್ನು ಒದಗಿಸುತ್ತದೆ. ಅದನ್ನು ತಿಳಿದುಕೊಂಡು ಜೀವನ ಮಾಡುವ ಅಗತ್ಯವಿದೆ. ಪೂಜೆ ಮಾಡಿ ಪಾವನವಾಗುವುದರಲ್ಲಿ ಬಯಲಾಗುವುದೆ ಅರಿವು. ಏನೇ ಕಾಯಕ ಮಾಡಿದರು ಸಂತೋಷ ಪಡೆಯಬೇಕಾದರೆ, ಈ ಮೂರು ಅಂಶಗಳನ್ನು ಮನದಲ್ಲಿಟ್ಟುಕೊಳ್ಳಬೇಕು. ಗೌರವ, ಪ್ರೀತಿ ಮತ್ತು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ಸಂತೋಷ ಪಡೆಯಬಹುದು. ಮಾಡುವ ಕಾರ್ಯ ಸಣ್ಣದು ಎಂದು ಭಾವಿಸದೇ ತಾವು ಮಾಡುವ ಕಾರ್ಯ ಶ್ರೇಷ್ಠ ಎಂದು 12 ನೇ ಶತಮಾನದಲ್ಲಿಯೇ ಶರಣರು ತಿಳಿಸಿದ್ದಾರೆ.
ಪ್ರೀತಿಯಿಂದ ಯಾವುದೇ ಕಾರ್ಯ ಮಾಡಿದರೂ ಅದು ಸಾರ್ಥಕವಾಗುತ್ತದೆ. ಸಿಟ್ಟಿನಿಂದ ಅಡುಗೆ ಮಾಡಿದರೆ ಅದು ರುಚಿಸುವುದಿಲ್ಲ. ಆದ್ದರಿಂದ ಯಾವುದೇ ಕಾರ್ಯವನ್ನು ಮಾಡಿದರು ಅದು ಅಚ್ಚುಕಟ್ಟಾಗಿರಬೇಕು, ಒಲವಿಲ್ಲದ ಪೂಜೆ ಸಾರವಿಲ್ಲದ ಮಾತು ಎರಡೂ ವ್ಯರ್ಥ. ಇಷ್ಟಲಿಂಗ ಪೂಜೆಯನ್ನು ಮಾಡುವ ಮೂಲಕ ನಾವು ಧನ್ಯರಾಗೋಣ. ಒಲವೇ ಜೀವನ ಸಾಕ್ಷತ್ಕಾರ ಎಂಬಂತೆ ಶರಣಸತಿ ಲಿಂಗಪತಿ ಎಂಬ ಅಕ್ಕಮಹಾದೇವಿಯವರ ಮಾತು ಅತ್ಯುತ್ತಮವಾದುದು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಶರಣೆ ಸತ್ಯಕ್ಕ, ಹರಗುರು ಚರಮೂರ್ತಿಗಳು, ರುದ್ರಮೂರ್ತಿ, ಸದ್ಭಕ್ತರು ಉಪಸ್ಥಿತರಿದ್ದರು.
ಜಮುರಾ ಕಲಾಲೋಕದ ಉಮೇಶ ಪತ್ತಾರ ರಿಂದ ವಚನಗೀತೆಯ ನಡೆಸಿಕೊಟ್ಟರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 