ವಿಶ್ವ ಯೋಗ ದಿನಾಚರಣೆ; ಧನ್ವಂತರಿ ಯೋಗ ಕೇಂದ್ರದ ಮಕ್ಕಳ ಸಾಧನೆ

 ವಿಶ್ವ ಯೋಗ ದಿನಾಚರಣೆ; ಧನ್ವಂತರಿ ಯೋಗ ಕೇಂದ್ರದ ಮಕ್ಕಳ ಸಾಧನೆ  World Yoga Day; Achievements of children from Dhanvantari Yoga Center

ರಾಣೆಬೆನ್ನೂರು 01:  ಇತ್ತೀಚೆಗೆ ಬೆಂಗಳೂರಿನ ಆದಿತ್ಯ ಸಾಯಿ ಯೋಗ ಕೇಂದ್ರ ಹಾಗೂ ಶಿವಜ್ಯೋತಿ ಯೋಗ ಕೇಂದ್ರದ ಆಶ್ರಯದಲ್ಲಿ 12ನೇ ವಿಶ್ವ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.  ವಿಶ್ವ ಯೋಗ ದಿನದ ಅಂಗವಾಗಿ ಆಯೋಜಿಸಿದ್ದ ಮುಕ್ತ ರಾಷ್ಟ್ರೀಯ ವರ್ಚುವಲ್ ಯೋಗ ಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಧನ್ವಂತರಿ ಯೋಗ ಕೇಂದ್ರದ ಮಕ್ಕಳು ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆ ಹಾಗೂ ನಾಡಿಗೆ ಕೀರ್ತಿ ತಂದಿದ್ದಾರೆ.  ಈ ವರ್ಚುವಲ್ ಯೋಗ ಸ್ಪರ್ಧೆಯಲ್ಲಿ ಧನ್ವಂತರಿ ಯೋಗ ಕೇಂದ್ರದ ವಿದ್ಯಾರ್ಥಿಗಳು ವಿವಿಧ ಬಹುಮಾನಗಳು ಹಾಗೂ ಪ್ರಶಸ್ತಿಗಳನ್ನು ಪಡೆದು ಸಾಧಕ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ.  

ಸ್ಪರ್ಧೆಯಲ್ಲಿ ಭಾಗವಹಿಸಿದ ದಶಮಿ ಪ್ರಾಪ್ತಿ, ವಜ್ರೇಶ್ವರಿ ಶೆಟ್ಟರ್, ಅಪ್ಸರಾ ಸಾಕ್ಷಿ, ಭುವನ್, ಹಿತೈಷಿಣಿ ಆದಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದು ಪ್ರಮಾಣಪತ್ರ ಹಾಗೂ ಆಕರ್ಷಕ ಪಾರಿತೋಷಕಗಳನ್ನು ಸ್ವೀಕರಿಸಿದರು.  ಸಾಧಕ ವಿದ್ಯಾರ್ಥಿಗಳಿಗೆ ಮಹಿಳಾ ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯಕ್ಷೆ ಹಾಗೂ ಯೋಗ ನಿರ್ದೇಶಕಿ, ರಾಜ್ಯ ಕೋರ್ ಕಮಿಟಿ ಸದಸ್ಯೆ ಡಾ. ಜ್ಯೋತಿ ಜೆ. ಜಂಬಗಿ ಅವರು ಮಾರ್ಗದರ್ಶನ ನೀಡಿದರು.  ಬಹುಮಾನ ವಿತರಣಾ ಸಮಾರಂಭದಲ್ಲಿ ಡಾ. ಜೈರಾಮ್ ಹರಿಹರ, ಅಶೋಕ್ ಮಾರಿಹಾಳ, ಎಸ್‌.ಆರ್‌. ಪಾಟೀಲ, ಜಗದೀಶ ಜಂಬಗಿ, ಲತಾ ಮಾಕನೂರ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಹಾಗೂ ಯೋಗ ಕೇಂದ್ರದ ಆಯೋಜಕರು ಭಾಗವಹಿಸಿದ್ದರು.