ಸರಕಾರಿ ಪ್ರೌಢ ಶಾಲೆ ಮನಗುಂಡಿಯಲ್ಲಿ ವಿಶ್ವ ಯೋಗ ದಿನಾಚರಣೆ

ಸರಕಾರಿ ಪ್ರೌಢ ಶಾಲೆ ಮನಗುಂಡಿಯಲ್ಲಿ ವಿಶ್ವ ಯೋಗ ದಿನಾಚರಣೆ World Yoga Day celebrated at Government High School, Managundi

ಧಾರವಾಡ 21 :  ಯೋಗ ನಮ್ಮ ಜೀವನದ ಶೈಲಿಯನ್ನು ಸಕಾರಾತ್ಮಕವಾಗಿ ಬದಲಿಸಿ ಉತ್ತಮ ಬದುಕು ನಿರ್ವಹಿಸಲು ಸಹಕಾರಿಯಾಗುವುದು ಎಂದು ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾ ಗೊರವರ ಹೇಳಿದರು.ಅವರು ತಾಲೂಕಿನ ಮನಗುಂಡಿ ಶಾಲೆಯಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಯೋಗಾಸನ ಮಾಡುವುದರಿಂದ ನಮ್ಮ ಆರೋಗ್ಯ ಸುಧಾರಣೆಯಾಗುತ್ತದೆ.

ಏಕಾಗ್ರತೆ ಹೆಚ್ವಿ ಬದುಕಿನಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಮನುಷ್ಯನಿಗೆ ದೈಹಿಕ , ಮಾನಸಿಕ ಆರೋಗ್ಯ ಎರಡು ಮುಖ್ಯ. ಈ ಎರಡರ ಆರೋಗ್ಯ ಕಾಪಾಡಲು ಸಹಕಾರಿ ಎಂದರು. ಮಕ್ಕಳಿಗೆ ವಿವಿಧ ಆಸನಗಳನ್ನು ಮಾಡುವ ವಿಧಾನ ಅವುಗಳ ಉಪಯೋಗ ತಿಳಿಸಿದರು.ಲೇಖಕ ಶಿಕ್ಷಕರಾದ ರಂಗನಾಥ ಎನ್ ವಾಲ್ಮೀಕಿ ವಿಶ್ವ ಯೋಗ ದಿನಾಚರಣೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.