ರಾಣೆಬೆನ್ನೂರಲ್ಲಿ ವಿಶ್ವ "ಗುಬ್ಬಚ್ಚಿ"ಗಳ ದಿನಾಚರಣೆ ಪರಿಸರದಲ್ಲಿ ಸಮತೋಲನತೆಗೆ "ಗುಬ್ಬಚ್ಚಿ"ಗಳ ಉಳಿವು ಅಗತ್ಯ- ಎಚ್‌.ಎಫ್‌.ಅಕ್ಕಿ

ರಾಣೆಬೆನ್ನೂರಲ್ಲಿ ವಿಶ್ವ "ಗುಬ್ಬಚ್ಚಿ"ಗಳ ದಿನಾಚರಣೆ ಪರಿಸರದಲ್ಲಿ ಸಮತೋಲನತೆಗೆ "ಗುಬ್ಬಚ್ಚಿ"ಗಳ ಉಳಿವು ಅಗತ್ಯ- ಎಚ್‌.ಎಫ್‌.ಅಕ್ಕಿ  World Sparrow Day celebrated in Ranebennur. The survival of sparrows is essential for balance in the

  ರಾಣೆಬೆನ್ನೂರು 21: ಸಮಾಜದಲ್ಲಿ ಮಾನವ ಜೀವಿ ಸಂತೃಪ್ತಿ ನಗೆ ಬೀರಲು ಪ್ರಾಣಿ, ಪಕ್ಷಿ, ಹಕ್ಕಿ ಪಿಕ್ಕಿಗಳು, ಪರಿಸರಕ್ಕೆ ಪೂರಕವಾಗುವ" ಗುಬ್ಬಚ್ಚಿ" ಇಂದು ಆಧುನಿಕ ಜ್ಞಾನ-ವಿಜ್ಞಾನ ತಂತ್ರಜ್ಞಾನ ಬೆಳವಣಿಗೆ ಪರಿಣಾಮ ಗುಬ್ಬಚ್ಚಿ ಸಂತತಿ  ಉಳಿಯದೆ ಸುತ್ತ ಮುತ್ತಲ  ಪರಿಸರದಲ್ಲಿ ಕಾಣದಂತಾಗಿದೆ ಎಂದು ನೀಡ್ಸ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ, ಫೇವಾರ್ಡ್‌ ಕೆ.  ರಾಜ್ಯ ಸದಸ್ಯ  ಎಚ್‌.ಎಫ್‌. ಅಕ್ಕಿ ವಿಷಾದಿಸಿದರು.   ಅವರು ಶುಕ್ರವಾರ ನೀಡ್ಸ್‌ ಸಂಸ್ಥೆ ಸಭಾಭವನದಲ್ಲಿ ಆಯೋಜಿಸಲಾಗಿದ್ದ, ವಿಶ್ವ ಗುಬ್ಬಚ್ಚಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

 ಗುಬ್ಬಿ ಪ್ರಾಣಿ ಪಕ್ಷಿ ಹಕ್ಕಿಪಿಕ್ಕಿಗಳು ರೈತರ ಜೀವನಾಡಿ, ಹುಳ -ಹು  ಪ್ಪಡಿಗಳು ತನ್ನ ಜೀವನ ಬದುಕಿಗೆ ಆಹಾರವಾಗಿ ಸ್ವೀಕರಿಸಿ ರೈತರ ಫಸಲನ್ನು ಹುಳ ಹುಪ್ಪಡಿಗಳಿಂದ ರಕ್ಷಿಸಿ ರೈತರ ಬೆಳೆಗಳು ಉಳಿಸಿ ಬೆಳೆಸುವಲ್ಲಿ ತುಂಬಾ ಸಹಕಾರಿಗಳಾಗಿದ್ದವು ಎಂದರು.  

 ತಮ್ಮ ನೀಡ್ಸ್‌  ಸಂಸ್ಥೆ ಗುಬ್ಬಚ್ಚಿ ಉಳಿಸುವ ಮತ್ತು ಬೆಳೆಸುವ ಹಾಗೂ ಸಂರಕ್ಷಿಸುವ ನಿಟ್ಟಿನಲ್ಲಿ ಮುಂಬೈ ಸುಜಲಾನ್ ಸಹಕಾರದೊಂದಿಗೆ ತಾಲೂಕು ಜಿಲ್ಲೆ ಮತ್ತು ರಾಜ್ಯದ ವಿವಿಧ ಜಿಲ್ಲೆ ತಾಲೂಕುಗಳಲ್ಲಿ ಗುಬ್ಬಚ್ಚಿ ಗೂಡುಗಳನ್ನು ವಿತರಿಸಲು ಮುಂದಾಗಿದ್ದೇವೆ ಎಂದರು.  

    ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ, ಪರಿಸರವಾದಿ ರವೀಂದ್ರಗೌಡ ಪಾಟೀಲ್ ಅವರು ಮಾತನಾಡಿ, ನೀಡ್ಸ್‌  ಸಂಸ್ಥೆ ತಾವು ಕಂಡಂತೆ ಕಳೆದ 40 ವರ್ಷಗಳಿಂದ ಪರಿಸರ ಸಂರಕ್ಷಣೆ ಸಂಬಂಧಿಯಾಗಿ ಅತ್ಯುತ್ತಮ ಕೆಲಸ ಕಾರ್ಯಗಳು ಮಾಡುತ್ತಾ ಬಂದಿದೆ. ಅದಕ್ಕಾಗಿ ಆ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಅಕ್ಕಿ ಅವರಿಗೆ ಜಿಲ್ಲಾಡಳಿತವು ಪರಿಸರ ಸಂರಕ್ಷಕ ಪ್ರಶಸ್ತಿ ನೀಡಿ ಗೌರವಿಸಿದ್ದು ಸಂಸ್ಥೆಗೆ ಮತ್ತು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು  ಹರ್ಷ ವ್ಯಕ್ತಪಡಿಸಿ ಅಕ್ಕಿ ಅವರಿಗೆ ಅಭಿನಂದಿಸಿದರು.   

ಅತಿಥಿಯಾಗಿದ್ದ ಸ್ವಾಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ ಅವರು, ಗುಬ್ಬಿಗಳ ಕಿಲ-ಕಿಲ ನಿನಾದವು ಮಕ್ಕಳ ಮಲಗುವಿಗೆ, ನಿದ್ರಾ ರೂಪದ ಓಷಧಿ ಇದ್ದಂತೆ.  

 ಗುಬ್ಬಚ್ಚಿಗಳು ಇಂದಿನ ವಿನಾಶದಿಂದಾಗಿ  ಪರಿಸರದಲ್ಲಿ ಸಮತೋಲನವಿಲ್ಲದೇ, ಪರಿಸರದಲ್ಲಿ ಏರುಪೇರಾಗಿದೆ, ಇದರ ಪರಿಣಾಮ ಯಾರಿಗೂ ಮಾನಸಿಕ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಪರಿಸರ ಸಂರಕ್ಷಣೆ ವಿಶೇಷವಾಗಿ ಗುಬ್ಬಚ್ಚಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದು ಕರೆ ಅವರು ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ನೀಡಿದರು.   

ಫೇವಾರ್ಡ್‌ ಕೆ. ಜಿಲ್ಲಾ ಉಪಾಧ್ಯಕ್ಷ, ಕೆ.ಎಸ್‌. ನಾಗರಾಜ್, ಸ್ವಾಕರವೇ ಜಿಲ್ಲಾ ಕಾರ್ಯದರ್ಶಿ ಪರಸಪ್ಪ ಕುರುವತ್ತಿ, ನೀಡ್ಸ್‌ ತಾಂತ್ರಿಕ ತಂತ್ರಜ್ಞಾನ ಸುಧೀರ್ ಎಚ್‌.ಎಸ್, ಸೇರಿದಂತೆ ಮತ್ತಿತರ ಗಣ್ಯರು, ಪರಿಸರವಾದಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳ ಹತ್ತಕ್ಕೂ ಹೆಚ್ಚು ಶಾಲೆಗಳಿಗೆ ನೂರಾರು ಗುಬ್ಬಚ್ಚಿ ಗೂಡುಗಳನ್ನು ವಿತರಿಸಿ ಗೌರವಿಸಿದರು.