ಎಫ್.ಪಿ.ಎ.ಐ ದಲ್ಲಿ ವಿಶ್ವ ಪ್ರಿಕ್ಲಾಂಪ್ಸಿಯಾ ದಿನ
World Preeclampsia Day at FPAI
ಲೋಕದರ್ಶನ ವರದಿ
ಧಾರವಾಡ 22 : ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ, ಧಾರವಾಡ ಶಾಖೆ, ಕೆ. ಎಲ್. ಇ. ಜೆ.ಜಿ.ಎಂ.ಎಂ.ಎಂ.ಸಿ, ಆಸ್ಪತ್ರೆ ಹುಬ್ಬಳ್ಳಿ ಹಾಗೂ ಸೋಸಾಯಿಟಿ ಫಾರ್ ಮೆಟರನಲ್ಲ್ ಪೀಟಲ್ ಮೆಡಿಶನ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪ್ರಿಕ್ಲಾಂಪ್ಸಿಯಾ ದಿನ (ಘಠಟಜ ಕಡಿಜಜಛಿಟಚಿಟಠಿಚಿ ಆಚಿಥಿ-2026) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಅನುಪ ಕಂಠಿ ವೈದ್ಯಾಧಿಕಾರಿಗಳು, ಪ್ರಿಕ್ಲಾಂಪ್ಸಿಯಾ ಎಂದರೆ ಗರ್ಭಾವಸ್ಥೆಯ 20 ವಾರಗಳ ನಂತರ ಅಥವಾ ಹೆರಿಗೆ ನಂತರ ಕೆಲವರಲ್ಲಿ ಕಂಡುಬರುವ ಗಂಭೀರ ಅಧೀಕ ರಕ್ತದೊತ್ತಡದ ಸಮಸ್ಯೆಯಾಗಿದೆ.
ಇದು ಮೂತ್ರಪಿಂಡ ಅಥವಾ ಯಕೃತ್ತಿನಂತಹ ಇತರ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಇದರ ಲಕ್ಷಣಗಳೆಂದರೆ ಮೂತ್ರದಲ್ಲಿ ಪ್ರೋಟೀನ್ ಕಾಣಿಸಿಕೊಳ್ಳುವದು, ಮುಖ, ಕೈ ಮತ್ತು ಕಾಲುಗಳಲ್ಲಿ ತೀವೃ ಭಾವು, ತೀವೃ ತಲೆನೋವು, ಕಣ್ಣು ಮಂಜಾಗುವದು ಮತ್ತು ಹೊಟ್ಟೆ ನೋವು ಕಾಣುತ್ತದೆ. ಇದರ ಪರಿಣಾಮ ತಾಯಿ ಮಗುವಿಬ್ಬರ ಆರೋಗ್ಯಕ್ಕೂ ಹಾನಿಕಾರಕವಾಗಬಹುದು. ಆದ್ದರಿಂದ ನಿಯಮಿತವಾಗಿ ವೈದ್ಯರ ಭೇಟಿಯಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಮತ್ತು ಸಲಹೆಗಳನ್ನು ಪಾಲಿಸುವದು ಅಗತ್ಯ ಎಂದು ಅಭಿಪ್ರಾಯಪಟ್ಟ್ರು.
ಎಫ್.ಪಿ.ಎ.ಐ. ಜನರಲ್ ಮ್ಯಾನೇಜರ ಡಾ. ಸುಜಾತ ಎಸ್. ಆನಿಶೆಟ್ಟರ್ ಪ್ರಾಸ್ತಾವಿಕವಾಗಿ ಮಾಡನಾಡಿ, ಪ್ರತಿಯೊಬ್ಬ ಗರ್ಭಿಣಿ ಮಚಿಹಿಳೆ ಪ್ರಿಕ್ಲಾಂಪ್ಸಿಯಾಗೆ ಗುರಿಯಾಗುತ್ತಾರೆ ಎಂದೆನಿಲ್ಲ, ಆದರೆ ಪ್ರಿಕ್ಲಾಂಪ್ಸಿಯಾ ಬರುವದು ಗರ್ಭಿಣಿ ಆಗಿರುವವರಿಗೆ ಮತ್ತು ಹೆರಿಗೆ ಆದವರಿಗೆ ಎಂಬುದನ್ನು ತಿಳಿಯುವದು ಅವಶ್ಯಕ. ಕೆಲವರಿಗೆ ಯಾವುದೆ ರೋಗಲಕ್ಷಣ ತೋರಿಸದೇ ಕೂಡ ಈ ಸಮಸ್ಯೆ ಇರಬಹುದು, ಈ ಕಾರಣಕ್ಕೆ ಗರ್ಭಿಣಿಯರ ನಿರಂತರ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಗಳನ್ನು ವೈದ್ಯರಿಂದ ಪಡೆದುಕೊಳ್ಳಬೇಕು. ಇದರಿಂದ ತಾಯಿ ಮತ್ತು ಮಗು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂಬ ಇಂಗಿತ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಎಫ್.ಪಿ.ಎ.ಐ ನ ಕಾರ್ಯಕ್ರಮ ಅಧಿಕಾರಿ ಎನ್.ಎಫ್.ಮಡಿವಾಳರ, ಮೌಲ್ಯಮಾಪನಾಧಿಕಾರಿ ಆಶಾ ಕೋರಿಶೆಟ್ಟರ ಸೇರಿದಂತೆ 50 ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 