ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯಾ ದಿನಾಚರಣೆ: ಬಾವಡೆಕರ್

ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಜನಸಂಖ್ಯಾ ದಿನಾಚರಣೆ: ಬಾವಡೆಕರ್ World Population Day celebrated to create awareness among people: Bavadekar

ಬೆಳಗಾವಿ 12: ಜಾಗತಿಕ ಮಟ್ಟದಲ್ಲಿ ಪ್ರತಿ ವರ್ಷ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ. ಜನಸಂಖ್ಯಾ ಹೆಚ್ಚಳದಿಂದಾಗಿ ಉಂಟಾಗುತ್ತಿರುವ ಜಾಗತಿಕ ಹಾಗೂ ಆರ್ಥಿಕ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇದು ಜನಸಂಖ್ಯೆಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಒಂದು ದಿನವಾಗಿದೆ. ಇವರು ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮತ್ತು ಕುಟುಂಬ ಯೋಜನೆ, ಲಿಂಗ ಸಮಾನತೆ, ಮಾನವ ಹಕ್ಕುಗಳು ಮತ್ತು ತಾಯಿಯ ಆರೋಗ್ಯದ ಬಗ್ಗೆ ಎಫ್‌ಪಿಎಐ ಬೆಳಗಾವಿ ಶಾಖೆಯ ಅಧ್ಯಕ್ಷ ಡಾ. ವಿ. ಸಿ. ಬಾವಡೆಕರ್ ಅವರು  

ಮಾಹಿತಿ ನೀಡಿದರು.    

ದಿ. 11ರಂದು ವಿಶ್ವ ಜನ ಸಂಖ್ಯಾದಿನವನ್ನು ಎಫ್‌ಪಿಎಐ ಬೆಳಗಾವಿ ಶಾಖೆ, ಮೇರಾ ಯುವ ಭಾರತ (ಮೇರಾ ಭಾರತ) ಬೆಳಗಾವಿ, ಕೆಎಲ್‌ಇ ಸಂಸ್ಥೆಯ ಬಿ.ಎಡ್ ಕಾಲೇಜು ಇವರ  ಸಹಯೋಗದಲ್ಲಿ ಕೆಎಲ್‌ಇ ಸಂಸ್ಥೆಯ ಬಿ.ಎಡ್ ಕಾಲೇಜಿನಲ್ಲಿ ಆಚರಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೇರಾ ಯುವ ಭಾರತ ಬೆಳಗಾವಿ ಶಾಖೆ ಮಲ್ಲಯ್ಯ ಸಿ. ಕರಡಿ, ಸಹಾಯಕ ಅಧಿಕಾರಿಗಳು ಅವರು ಮಾತನಾಡುತ್ತಾ  ಜನಸಂಖ್ಯೆ ಬೆಳೆದಂತೆ ಬಡತನ, ಆರ್ಥಿಕ ಕಾಳಜಿ, ಉದ್ಯೋಗದಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿ ವಿಶ್ವ ಜನಸಂಖ್ಯಾ ದಿನವು ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ  ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.   

ಜನಸಂಖ್ಯಾ ಸ್ಫೋಟದ ಕುರಿತು ಪ್ರಬಂಧ ಹಾಗೂ ಪೋಸ್ಟರ್ ತಯಾರಿಕೆ ಸ್ಪರ್ಧೆಯನ್ನು ಏರಿ​‍್ಡಸಲಾಯಿತು. ವಿಜೇತರಿಗೆ ಗಣ್ಯರಿಂದ ಬಹುಮಾನ ನೀಡಿ ಗೌರವಿಸಲಾಯಿತು.   

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ವಿ.ಪಿ.ಕುರಿ ಅವರು ಮಾತನಾಡುತ್ತಾ  ಭಾರತ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಈ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಕಳೆದ ಹಲವು ದಶಕಗಳಿಂದ ಪ್ರಯತ್ನಿಸುತ್ತಿದೆ. ಆದರೆ ಅನಕ್ಷರತೆ ಮತ್ತು ಸಾಂಸ್ಕೃತಿಕ ವಿಭಜನೆಯಿಂದಾಗಿ ಇಲ್ಲಿಯವರೆಗೆ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿಲ್ಲ  ಎಂದು ಅಭಿಪ್ರಾಯ ಪಟ್ಟರು.   

ಉಪನ್ಯಾಸಕಿ ಎ.ಎಫ್‌. ದೊಡ್ಡಮನಿ ಸ್ವಾಗತಿಸಿದರು. ಕಾಲೇಜಿನ ಸಿಬ್ಬಂದಿ, ಎಫ್‌ಪಿಎಐ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.