ಅ.28ರಂದು ಮೈಸೂರಿನಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

ಅ.28ರಂದು ಮೈಸೂರಿನಲ್ಲಿ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ  World Newspaper Distributors Day celebrated in Mysore on October 28

ಹಾವೇರಿ 30: ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ 5ನೇ ರಾಜ್ಯ ಸಮ್ಮೇಳನ ಅ.28ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಹೇಳಿದರು. 

ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಿದ ಮೈಸೂರಿನಲ್ಲಿ ಜರುಗುವ 5ನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 

ಕಳೆದ ಭಾರಿ ನಡೆದ ಕಹಿ ಘಟನೆಗಳು ಈ ಬಾರಿ ನಡೆಯದಂತೆ ಎಲ್ಲ ಪದಾಧಿಕಾರಿಗಳು ಸ್ವಯಂ ಪ್ರೇರಿತರಾಗಿ ಯಶಸ್ವಿಗೆ ಸಹಕರಿಸಬೇಕು. ಪದಾಧಿಕಾರಿಗಳಲ್ಲಿ ಶಿಸ್ತು ಇರಬೇಕು. ಸರಕಾರದ ಗಮನವನ್ನು ಅಚ್ಚುಕಟ್ಟಾಗಿ ಸೆಳೆಯುವಲ್ಲಿ ಸಂಘ ಮುಂದಾಗಿದೆ. ವರ್ಷ ವರ್ಷ ಹೆಚ್ಚು ಸಂಘಟನೆ ಆಗುತ್ತಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಪದಾಧಿಕಾರಿಗಳು ಜುಲೈ 20ರ ಒಳಗಾಗಿ ಪಟ್ಟಿ ನೀಡಬೇಕು.  ಸರಕಾರದ ಅರ್ಧ ಭಾಗವೇ ಒಕ್ಕೂಟದ ಜತೆಗೆ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಲೋಪ ಆಗದಂತೆ ಸೂಚನೆ ನೀಡಿದ್ದಾರೆ.5ಸಾವಿರಕ್ಕೂ ಹೆಚ್ಚು ಜನ ಉಳಿದುಕೊಳ್ಳುವ ವ್ಯವಸ್ಥೆ ಇರುತ್ತದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಕೂತು ಆಲಿಸಿ ಯಶಸ್ವಿಗೊಳಿಸಬೇಕು.ರಾಜ್ಯ ಒಕ್ಕೂಟಕ್ಕೆ ಕಚೇರಿ ನೀಡಬೇಕು.ಪತ್ರಿಕಾ ವಿತರಕರಿಗಾಗಿ ಸಮುದಾಯ ಭವನ ನಿರ್ಮಾಣ ಆಗಬೇಕಿದೆ. ಪತ್ರಿಕಾ ವಿತರಕರಿಗೆ ಅಕಾಡೆಮಿಯಲ್ಲಿ ಅವಕಾಶ ಕೊಡಬೇಕು. 65-70 ಮೇಲ್ಪಟ್ಟ ವಿತರಕರಿಗೆ ತಿಂಗಳಿಗೆ 2 ಸಾವಿರ ಪಿಂಚಣಿ ಸೌಲಭ್ಯ ಸಿಗಬೇಕು.ಎಲ್ಲ ಪತ್ರಿಕೆಗಳಿಗೆ ಒಂದೇ ದರ ಇರಬೇಕು. ಒಂದು ಪತ್ರಿಕೆ ಮಾರಾಟ ಮಾಡಿದರೆ ವಿತರಕರಿಗೆ ಕನಿಷ್ಠ 3 ರೂಪಾಯಿ ಕಮಿಷನ್ ಸಿಗಬೇಕು.80 ವರ್ಷ ಮೇಲ್ಪಟ್ಟ ವಿತರಕರಿಗೆ 5 ಸಾವಿರ, ವಿತರಕರಿಗೆ 5 ಲಕ್ಷ ಆರೋಗ್ಯ ವಿಮೆ ಮೀಸಲು ಇಡಬೇಕು.ವಿತರಕರ ಸಂಘದ ಪದಾಧಿಕಾರಿಗಳು ಕುಟುಂಬ ಸಮೇತರಾಗಿ ಬರಬೇಕು. ಪತ್ರಿಕಾ ವಿತರಕರು ತಮ್ಮ ವ್ಯಾಪ್ತಿಯ ಪತ್ರಿಕೆ ಹಾಕುವ ಹುಡುಗರನ್ನು ಕರೆದುಕೊಂಡು ಬರಬೇಕು.ಸಂಘಟನೆ ಇದ್ದರೆ ಎನ್ ಬೇಕಾದರೂ ಮಾಡಬಹುದು. ಪದಾಧಿಕಾರಿಗಳು ಒಗ್ಗಟ್ಟಾಗಿ ಸಂಘಟನೆ ಮಾಡಿಕೊಳ್ಳಬೇಕು. ಸಂಘಟನೆಯಾದ ಮಾತ್ರ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ ಸಮ್ಮೇಳನ ಹಾಗೂ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. 

ರಾಜ್ಯ ಕಾರ್ಯದರ್ಶಿ ಸಂಗಂ ಸುರೇಶ ಮಾತನಾಡಿ ಸಿಎಂ ತವರೂರು ಮೈಸೂರಿನಲ್ಲಿ ಸಮ್ಮೇಳನ ನಡೆಯಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಕನಿಷ್ಠ 5000 ಜನ ಸೇರಬೇಕು.ಶಕ್ತಿ ಪ್ರದರ್ಶನ ತೋರಿಸಬೇಕು.ಆಯಾ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಎಷ್ಟು ಜನ ಬರುತ್ತಾರೆ ಎಂಬುದನ್ನು ಪಟ್ಟಿ ನೀಡಬೇಕು.ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿ ಮಾಡಬೇಕು ಎಂದು ವಿನಂತಿಸಿದರು. 

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸುದೇವ ನಾದೂರ,ಶಿವಮೊಗ್ಗ ಜಿಲ್ಲಾಧ್ಯಕ್ಷ ಮಾಲತೇಶ,ಮೈಸೂರು ಜಿಲ್ಲಾಧ್ಯಕ್ಷ ಹೋಮ್‌ದೇವ ಜೆ.ಎಸ್,ದಾವಣಗೆರೆ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಚಿತ್ರದುರ್ಗ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ,ಧಾರವಾಡ ಜಿಲ್ಲಾಧ್ಯಕ್ಷರಾದ ಶಿವು ಹಲಗಿಲ,ಹಾವೇರಿ ಜಿಲ್ಲಾ ಕಾರ್ಯದರ್ಶಿ ಜಯಪ್ಪ ಬಣಕಾರ, ಶಿಗ್ಗಾವಿ ತಾಲೂಕಾಧ್ಯಕ್ಷ ವಿರೂಪಾಕ್ಷಪ್ಪ ನೀರಲಗಿ, ಹಾವೇರಿ ತಾಲೂಕಾಧ್ಯಕ್ಷ ಕರಿಬಸಪ್ಪ ಹಳದೂರ,ಭೀರ​‍್ಪ ಕುರಗುಂದ, ವೀರೇಶ ಪೂಜಣ್ಣನವರ, ಚೇತನ ರಾಜಪುರೋಹಿತ, ಬಸವರಾಜ ಬೆನ್ನೂರ, ಪರಶುರಾಮ ಕಾಳೇರ, ರಿಂದೇಶ ಶಿವಮೊಗ್ಗ, ಮೈಸೂರು, ಬೆಳಗಾವಿ, ಯಾದಗಿರಿ, ಹುಬ್ಬಳ್ಳಿ-ಧಾರವಾಡ, ಚಿತ್ರದುರ್ಗ, ಮಂಡ್ಯ ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ವಿತರಕರು ಭಾಗವಹಿಸಿದ್ದರು.