ವಿಶ್ವ ಣಮೋಕಾರ ಮಂತ್ರ ದಿವಸ ಆಚರಣೆ
World Namokara Mantra Day Celebration
ಲೋಕದರ್ಶನ ವರದಿ
ಹಾವೇರಿ 09 : ವಿಶ್ವ ಣಮೋಕಾರ ಮಂತ್ರ ದಿವಸ ಆಚರಣೆ ಅಂಗವಾಗಿ ಹಾವೇರಿಯ ಶ್ರೀ 1008 ಶ್ರೀ ನೇಮಿನಾಥ ದಿಗಂಬರ ಜೈನ ಕಮೀಟಿ, ರತ್ನತ್ರಯ ಮಹಿಳಾ ಸಮಾಜ, ಭಾರತೀಯ ಜೈನ್ ಮೀಲನ್ ಹಾಗೂ ಸಮ್ಯಕ್ಥ-್ವ ಜ್ಞಾನ ಪ್ರಭಾವನ ಯುಕ ಸಂಘದ ಸಹಯೋಗದಲ್ಲಿ ವಿಶ್ವಶಾಂತಿಗಾಗಿ ಹಾವೇರಿ ನಗರದ ದಿಗಂಬರ ಜೈನ ಮಂದಿರದಲ್ಲಿ ಗುರುವಾರ ಬೆಳಿಗ್ಗೆ 8 ರಿಂದ 9 ಗಂಟೆವರೆಗೆ ಸತತ ಒಂದು ಗಂಟೆ ಕಾಲ ನಿರಂತರ ಣಮೋಕಾರ ಮಂತ್ರ ಪಠಣೆ ಮಾಡಲಾಯಿತು.
ಈ ದಿನವು ಕೇವಲ ಒಂದು ಧಾರ್ಮಿಕ ಆಚರಣೆಯಾಗಿರದೆ ವಿಶ್ವಕ್ಕೆ ಶಾಂತಿ, ಅಹಿಂಸೆ ಮತ್ತು ಭಾತೃತ್ವದ ಸಂದೇಶವನ್ನು ಸಾರುವ ಮಹೋನ್ನತ ದಿನವಾಗಿದೆ. ಣಮೋಕಾರ ಮಹಾಮಂತ್ರವು ಜೈನ ಧರ್ಮದ ಅತ್ಯಂತ ಶಕ್ತಿಶಾಲಿ ಮತ್ತು ಪವಿತ್ರವಾದ ಮಂತ್ರ. ಇದು ಯಾವುದೇ ಒಬ್ಬ ವ್ಯಕ್ತಿಗಾಗಲಿ ಅಥವಾ ದೇವರ ನಾಮಸ್ಮರಣೆಗೆ ಸೀಮಿತವಾಗಿಲ್ಲ. ಇದು ಪಂಚ ಪರಮೇಷ್ಠಿಳಾದ ಅಂರಿಹಂತ, ಸಿದ್ದ, ಆಚಾರ್ಯ, ಉಪಾಧ್ಯಾಯ ಮತ್ತು ಸಾಧುಗಳ ಗುಣಗಳಿಗೆ ಸಲ್ಲಿಸುವ ಗೌರವಾಗಿದೆ. ಣಮೋಕಾರ ಮಂತ್ರ ಪಠಣೆಯಲ್ಲಿ ಸಮಸ್ತ ಶ್ರಾವಕ ಮತ್ತು ಶ್ರಾವಕಿಯರು, ಮಕ್ಕಳು ಶ್ವೇತ ವರ್ಣದ ಬಟ್ಟೆ ಧರಿಸಿ ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 