ವಿಶ್ವಧ್ಯಾನ ದಿನಾಚರಣೆ: ಕೆಪಿಎಸ್ ಶಾಲೆಯಲ್ಲಿ ಆನಾಪಾನಸತಿ ಧ್ಯಾನ ಕಾರ್ಯಕ್ರಮ

ವಿಶ್ವಧ್ಯಾನ ದಿನಾಚರಣೆ: ಕೆಪಿಎಸ್ ಶಾಲೆಯಲ್ಲಿ ಆನಾಪಾನಸತಿ ಧ್ಯಾನ ಕಾರ್ಯಕ್ರಮ World Meditation Day: Anapanasati meditation program at KPS School

                 ಹನುಮಸಾಗರ  23: ವಿಶ್ವಧ್ಯಾನ ದಿನಾಚರಣೆಯ ಅಂಗವಾಗಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಆನಾಪಾನಸತಿ ಧ್ಯಾನ . ಕಾರ್ಯಕ್ರಮವನ್ನು ಮೆದಿಕೇರಿ ಆರ್ಟ್‌ ಗ್ಯಾಲರಿ, ರಾಯಲ್ ಸೋಶಿಯಲ್ ಸೇವಾ ಸಂಸ್ಥೆ, ಹನುಮಸಾಗರ ಪತ್ರಿಕಾ ಬಳಗ, ಆದಿತ್ಯ ಯೋಗ ಮತ್ತು ಸಾಂಸ್ಕೃತಿಕ ಕ್ರೀಡಾ ಸಂಸ್ಥೆಗಳು ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಧ್ಯಾನ ಪ್ರಚಾರಕ ಏಕನಾಥ ಮೆದಿಕೇರಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಆನಾಪಾನಸತಿ ಧ್ಯಾನದ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಿ ಮಾತನಾಡಿ. ಸುಖಾಸನದಲ್ಲಿ ಕುಳಿತು ಸಹಜವಾಗಿ ನಡೆಯುವ ಉಸಿರಾಟವನ್ನು ಗಮನಿಸುವ ಮೂಲಕ ಯಾವುದೇ ಮಂತ್ರಜಪ, ನಾಮಸ್ಮರಣೆ ಅಥವಾ ದೈವಿಕ ಕಲ್ಪನೆಗಳಿಲ್ಲದೆ ಧ್ಯಾನ ಸ್ಥಿತಿಗೆ ತಲುಪಬಹುದು ಎಂದು ತಿಳಿಸಿದರು.

                      ಧ್ಯಾನದಿಂದ ದೇಹದಲ್ಲಿ ವಿಶ್ವಮಯ ಪ್ರಾಣಶಕ್ತಿ ಪ್ರವೇಶಿಸಿ ನಾಡೀಮಂಡಲ ಶುದ್ಧಿಯಾಗಿ ಸಂಪೂರ್ಣ ಆರೋಗ್ಯ ದೊರೆಯುವುದರ ಜೊತೆಗೆ, ಏಕಾಗ್ರತೆ, ನೆನಪಿನ ಶಕ್ತಿ, ಆತ್ಮವಿಶ್ವಾಸ, ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಜ್ಞಾನ ವೃದ್ಧಿಯಾಗುತ್ತದೆ ಎಂದು ಅವರು ಹೇಳಿದರು. ನಿಯಮಿತ ಧ್ಯಾನದಿಂದ ಸೂಪ್ತ ಚೇತನಗಳು ಜಾಗೃತಿಯಾಗಿ ಬುದ್ಧಿ ಸೂಕ್ಷ್ಮತೆ ಹೆಚ್ಚಾಗುತ್ತದೆ ಎಂಬ ಮಾಹಿತಿಯನ್ನೂ ನೀಡಿದರು.ಯಾವ ವಯಸ್ಸಿನವರಾದರೂ, ಯಾವ ಸಮಯದಲ್ಲಾದರೂ ಮತ್ತು ಯಾವುದೇ ಸ್ಥಳದಲ್ಲಿಯೂ ಧ್ಯಾನ ಮಾಡಬಹುದಾಗಿದೆ. ಧ್ಯಾನದಿಂದ ಮಾನಸಿಕ ಒತ್ತಡ ನಿವಾರಣೆ, ಜೀವನದ ಗುರಿಯ ಸ್ಪಷ್ಟತೆ ಹಾಗೂ ಮಾನವೀಯ ಸಂಬಂಧಗಳ ಸುಧಾರಣೆ ಸಾಧ್ಯವಾಗುತ್ತದೆ ಎಂದರು.  

ಮುಖ್ಯ ಶಿಕ್ಷಕ ಶರಣಪ್ಪ ಗುಳೇದ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಧ್ಯಾನ ಅತ್ಯಂತ ಅವಶ್ಯಕವಾಗಿದ್ದು, ಏಕಾಗ್ರತೆ ಹಾಗೂ ಶಿಸ್ತನ್ನು ಬೆಳೆಸಲು ಧ್ಯಾನ ಸಹಕಾರಿಯಾಗಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.ಇದೇ ಸಂದರ್ಭದಲ್ಲಿ ಕೆಪಿಎಸ್ ಉಪಾಧ್ಯಕ್ಷ ಬಸವರಾಜ ದೆವಣ್ಣನವರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾನಸಿಕ ಶಾಂತಿ, ಆತ್ಮವಿಶ್ವಾಸ ಮತ್ತು ಮೌಲ್ಯಾಧಾರಿತ ಜೀವನಕ್ಕೆ ಧ್ಯಾನ ನೆರವಾಗುತ್ತದೆ. ಶಾಲಾ ಹಂತದಲ್ಲೇ ಧ್ಯಾನ ಸಂಸ್ಕಾರ ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.

                 ಕಾರ್ಯಕ್ರಮದಲ್ಲಿ ಅಮರೇಶ ತಮ್ಮಣ್ಣವರ, ಭಾರತಿ ಕುರುಮನಾಳ, ಶಂಕ್ರ​‍್ಪ ತಳವಾರ, ಈರಣ್ಣ ಪರಸಾಪುರ, ಸವಿತಾ ಕಂದಗಲ, ವಿಜಯಕುಮಾರ ಚೆಲ್ಲಾಳ, ಬೀರ​‍್ಪ ಕಡ್ಲಿಮಟ್ಟಿ, ಷಣ್ಮುಖಪ್ಪ ಕರಡಿ, ಎಲ್ಲಮ್ಮ, ಶ್ರೀಕಾಂತ್ ಗೌಡ, ಬಾಲಕರ ಶಾಲೆಯ ಮುಖ್ಯ ಶಿಕ್ಷಕ ಎಚ್‌.ಎಚ್‌. ಇಲಕಲ್, ರಾಮಚಂದ್ರ ಬಡಿಗೇರ, ಕಿಶನರಾವ್ ಕುಲಕರ್ಣಿ, ಶರಣಪ್ಪ ಬೋದುರ, ಚಂದಪ್ಪ ಕುಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು