ಹೃದಯ ಸಂಬಂಧಿತ ಚಿಕಿತ್ಸೆಗೆ ತಕ್ಕಂತೆ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ

ಹೃದಯ ಸಂಬಂಧಿತ ಚಿಕಿತ್ಸೆಗೆ ತಕ್ಕಂತೆ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ World Heart Day: Belagavi News

ವಿಶ್ವ ಹೃದಯ ದಿನಾಚರಣೆ    

ಬೆಳಗಾವಿ  29: ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವಲ್ಲಿ ಸದಾ ಕಂಕಣಬದ್ದವಾಗಿದ್ದು, ಹೃದಯ ರೋಗಕ್ಕೆ ಅತೀ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬರುವ 2 ತಿಂಗಳಲ್ಲಿ ಹುಬ್ಬಳ್ಳಿ ಆಸ್ಪತ್ರೆಯನ್ನು ಜನಸೇವೆಗೆ ಅರ್ಪಿಸಲಾಗುತ್ತದೆ. ಅದರಂತೆ ಬೆಂಗಳೂರಿನಲ್ಲಿಯೂ ಆಸ್ಪತ್ರೆ ನಿರ್ಮಾಣವಾಗಿದ್ದು, ಅದು ಕೂಡ ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದಿಲ್ಲಿ ಹೇಳಿದರು.   

ವಿಶ್ವ ಹೃದಯ ದಿನದ ಅಂಗವಾಗಿ ದಿ. 29 ಸಪ್ಟಂಬರ 2025 ರಂದು ನಗರದ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಹ್ರದ್ರೋಗ ವಿಭಾಗವು ಆಸ್ಪತ್ರೆಯಲ್ಲಿ ಏರಿ​‍್ಡಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಹೃದಯ ಸಂಬಂಧಿತ ಸಕಲ ಖಾಯಿಲೆಗಳಿಗೆ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೆ ತಕ್ಕಂತೆ ವೈದ್ಯಕೀಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.  

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು, ಆಸ್ಪತ್ರೆಯು ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳೊಂದಿಗೆ ಸೇವೆ ನೀಡುತ್ತಿದೆ. ಅಂತರಾಷ್ಟ್ರೀಯ ಗುಣಮಟ್ಟದ ಸೇವೆ ನೀಡುತ್ತಿರುವ ಆಸ್ಪತ್ರೆಯು ವೈದ್ಯಕೀಯ ಪ್ರವಾಸೋದ್ಯಮ ಪ್ರಾರಂಭಿಸುತ್ತಿದೆ. ಈ ಮೂಲಕ ವಿದೇಶಿಗರಿಗೂ ಕೂಡ ವ್ಯದ್ಯಕೀಯ ಸೇವೆ ನೀಡಲು ಅಣಿಯಾಗಿ ನಿಂತಿದೆ ಎಂದು ಹೇಳಿದರು.   

ವಿಭಾಗ ಮುಖ್ಯಸ್ಥರಾದ ಡಾ. ಸಂಜಯ ಪೋರವಾಲ ಅವರು ಮಾತನಾಡಿ, ಗುಣಮಟ್ಟದ ಚಿಕಿತ್ಸೆಯಿಂದಲೇ ನಾವು ರೋಗಿಗಳ ಸೇವೆ ಮಾಡುತ್ತಿದ್ದೇವೆ.  ಆಧುನಿಕತೆ ಬೆಳೆದಂತೆ ಸ್ಮಾರ್ಟ ಕೆಲಸಗಳಾಗುತ್ತಿದ್ದು, ದೈಹಿಕ ಶ್ರಮವಿಲ್ಲದ ಜೀವನ ನಡೆಯುತ್ತಿದೆ. ಅನೇಕ ಯುವಕರು ಕೆಲಸದೊತ್ತಡದಿಂದ ಹೃದಯಾಘಾತಕ್ಕೆ ಒಳಗಾಗುತ್ತಿರುವದು ಕಂಡು ಬರುತ್ತಿದೆ. ಆದ್ದರಿಂದ ದೇಹದ ಪ್ರಮುಖ ಅಂಗವಾದ ಹೃದಯವನ್ನು ಅತ್ಯಂತ ಕಾಳಜಿಪೂರ್ವಕವಾಗಿ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.  

ಹಿರಿಯ ತಜ್ಞವೈದ್ಯರಾದ ಡಾ. ಸುರೇಶ ಪಟ್ಟೇದ ಅವರು ಮಾತನಾಡಿ, ಒತ್ತಡದ ಜೀವನ, ಆಲ್ಕೊಹಾಲ ಸೇವನೆ ಹಾಗೂ ಧೂಮ್ರಪಾನವನ್ನು ಸಂಪೂರ್ಣವಾಗಿ ತ್ಯಜಿಸುವದರಿಂದ ಹೃದಯವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಬಹುದು. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಮದ್ಯ ಮತ್ತು ಧೂಮ್ರಪಾನ ಸೇವನೆಯಿಂದ ಹೃದಯಾಘಾತಕ್ಕೆ ಆಹ್ವಾನ ನೀಡಿದಂತೆ. ಅಹಾರ ಪದ್ದತಿ, ಆರೋಗ್ಯಕ್ಕೆ ಮಾರಕವಾದ ಪದಾರ್ಥಗಳು, ಪೌಷ್ಠಿಕ ಆಹಾರದ ಕೊರತೆ, ಹೃದ್ರೋಗ ಹೆಚ್ಚಲು ಕಾರಣವಾಗುತ್ತಿವೆ ಎಂದು ಎಚ್ಚರಿಸಿದರು.   

ಕಾರ್ಡಿಯಾಕ್ ಟೆಕ್ನಿಸಿಯನ್ ವಿದ್ಯಾರ್ಥಿನಿಯರು ಹೃದಯದ ಆರೋಗ್ಯ ಕುರಿತು ಕಿರುನಾಟಕ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಡಾ. ಸಮೀರ ಅಂಬರ, ಡಾ. ಪ್ರಸಾದ ಎಂ. ಆರ್‌., ಡಾ. ವಿಜಯಾನಂದ ಮೆಟಗುಡಮಠ, ಡಾ. ವಿಶ್ವನಾಥ ಹೆಸರೂರ, ಡಾ. ಸುಹಾಸಿನಿ ಅಥರ್ಗಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು