ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಫ್ರೀ ಏಕ್ಲಾಂಪಿಸಿಯಾ ದಿನಾಚರಣೆ ಉದ್ಘಾಟನೆ
World Free Eclampsia Day celebration inaugurated at Vijayapura District Hospital
ಲೋಕದರ್ಶನ ವರದಿ
ವಿಜಯಪುರ 22 : ಜಿಲ್ಲಾ ಆಸ್ಪತ್ರೆಯ ತಾಯಿ ಮಗುವಿನ ಆಸ್ಪತ್ರೆಯ ವಿಭಾಗದಲ್ಲಿ ಬಿ.ಎಂ ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಲ್ಲಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ಫ್ರೀ ಏಕ್ಲಾಂಪಿಸಿಯಾ ದಿನಾಚರಣೆಯ ನಿಮಿತ್ಯ ಉಪನ್ಯಾಸ ಹಾಗೂ ಅದರ ಕುರಿತು ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸೆಕ ಡಾ. ಶಿವಾನಂದ ಮಾಸ್ತಿಹೊಳಿ ಅವರು ಉದ್ಘಾಟಿಸಿ ಮಾತನಾಡಿ, ಈ ಕಾಯಿಲೆಯು ಗರ್ಭವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಕಾಣಿಸಿಕೊಳ್ಳುವ ಅತ್ಯಂತ ಗಂಭೀರವಾದ ಕಾಯಿಲೆ ಜೀವಕ್ಕೆ ಅಪಾಯಕಾರಿಯಾದ ವೈದ್ಯಕೀಯ ಸ್ಥಿತಿಯಾಗಿದೆ ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಅತಿಯಾದ ರಕ್ತದೊತ್ತಡ ಹಾಗೂ ಇನ್ನುಳಿದ ಲಕ್ಷಣಗಳನ್ನು ಹೊಂದಿದೆ. ತೀವ್ರ ತರವಾದ ತಲೆನೋವು ಕಣ್ಣು ಮಂಜ ಆಗುವುದು ಮತ್ತು ದೃಷ್ಟಿ ದೋಷ ದೇಹದಲ್ಲಿ ಅತಿಯಾದ ಸೇಳೆತ ಮತ್ತು ಪ್ರಜ್ಞೆ ತಪ್ಪುವುದು, ವಾಕರಿಕೆ, ಹೊಟ್ಟೆ ನೋವು ಹೀಗೆ ಹಲವಾರು ಲಕ್ಷಣಗಳನ್ನು ಆದಕಾರಣ ಗರ್ಭಿಣಿ ತಾಯಂದಿರು ಪ್ರತಿ ತಿಂಗಳು ತಪಾಸಣೆ, ಸರಿಯಾದ ಪಾಲೊ ಅಪ್ ಜೊತೆಗೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಎಲ್ಡಿ ಆಸ್ಪತ್ರೆಯ ಒಬಿಜಿ ವಿಭಾಗದ ಮುಖ್ಯಸ್ಥರಾದ ಡಾ. ಶೈಲಜಾ ಬಿದರಿ ಅವರು ಮಾತನಾಡಿ ಈ ಕಾಯಿಲೆಯ ಸೂಕ್ಷ್ಮತೆಯನ್ನು ಅರಿತುಕೊಂಡು ಸದೃಢ ಆರೋಗ್ಯವನ್ನು ಹೊಂದುವ ಕೆಲಸ ಆಗಬೇಕಾಗಿದೆ ಇದರ ಬಗ್ಗೆ ನಮ್ಮ ಆಸ್ಪತ್ರೆಯಿಂದ ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಡಾ.ಎಂ ಆರ್ ಗುಡದಿನ್ನಿ ಡಾ.ಸಂತೋಷ್ ಡಾ. ಅನುರಾಧಾ ಡಾ. ಥೌಪಿಕ್ ಹಾಗೂ ಜಿಲ್ಲಾ ಆಸ್ಪತ್ರೆಯ ಓಬಿ ಜಿ ವಿಭಾಗದ ಮುಖ್ಯಸ್ಥರಾದ ಆಸ್ಪತ್ರೆಯ ಡಾ. ಅನಿಲ್ ರಾಟೋಡ್ ಡಾ. ಸಂಗಮೇಶ್ವರಿ ಎಸ್. ಎ ಮೋಮಿನ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು ಕಾರ್ಯಕ್ರಮದ ನಿರ್ವಹಣೆಯನ್ನು ಹಾಗೂ ಸ್ವಾಗತ ಕಾರ್ಯವನ್ನು ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕ ರವಿ ಕಿತ್ತೂರ ನಿರ್ವಹಿಸಿದರು. ಎಲ್ಲ ನಸಿಂರ್ಗ್ ಸೂಪರ್ವೈಸರ್ಸ್ ಸುನೀತಾ ಕೌಜಲಗಿ ಇನ್ನುಳಿದ ಎಲ್ಲಾ ಸಿಬ್ಬಂದಿಗಳೂ ಉಪಸ್ಥಿತರಿದ್ದರು ಈ ಕಾರ್ಯಕ್ರಮಕ್ಕೆ ಸೇರಿದ ಗರ್ಭಿಣಿ ಮಹಿಳೆಯರಿಗೆ ಬಿಎಲ್ಡಿ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಬೀದಿ ನಾಟಕ ಮುಖಾಂತರ ಜಾಗೃತಿ ಮೂಡಿಸಿದರು ವಂದನಾರೆ್ಣಯನ್ನು ಸಂಶೋಧನಾ ಅಧಿಕಾರಿ ಪರಶುರಾಮ್ ಮಾಡಿದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 