ವಿಶ್ವ ಪರಿಸರ ದಿನಾಚರಣೆಯ ಆಚರಣೆ

ವಿಶ್ವ ಪರಿಸರ ದಿನಾಚರಣೆಯ ಆಚರಣೆ  World Environment Day celebration

ಲೋಕದರ್ಶನ ವರದಿ 

ಗದಗ  05: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗದಗ ಜಿಲ್ಲೆ, ಮುಂಡರಗಿ ತಾಲ್ಲೂಕಿನ ಬೆಣ್ಣಿಹಳ್ಳಿ ಗ್ರಾಮದಲ್ಲಿ ಇಂದು ವಿಶ್ವ ಪರಿಸರ ದಿನಾಚರಣೆಯನ್ನು ಗ್ರಾಮಸ್ಥರ/ರೈತರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ವಿಶ್ವ ಪರಿಸರ ದಿನಾಚರಣೆಯ ಉದ್ದೇಶ, ಮಹತ್ವ ಹಾಗೂ ಪರಿಸರ ಸಂರಕ್ಷಣೆಯ ಅಗತ್ಯತೆಯ ಕುರಿತು ಮಾಹಿತಿ ನೀಡಲಾಯಿತು. ಪರಿಸರ ಪ್ರಾಮುಖ್ಯತೆ ಬಗ್ಗೆ ಪರಿಸರ ಪ್ರೇಮಿಗಳಾಗಿರತಕ್ಕಂತ ಗುರುರಾಜ್ ಡಂಬಳ ರವರು ಸಭೆ ಉದ್ದೇಶಿಸಿ ಮಾತನಾಡಿದರು.

ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಲಾಯಿತು. ಅದರಂತೆ ಸಂಕಲ್ಪ ಸಂಸ್ಥೆಯು ಅಭಿವೃದ್ಧಿ ಮಾಡಿದ ಕಾಯ9ಗಳ ಬಗ್ಗೆ ಚಚಿ9ಸಲಾಯಿತು ಗದಗ ಜಿಲ್ಲೆಯಲ್ಲಿ ಸಂಕಲ್ಪ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಎಸ್‌ಬಿಐ ಫೌಂಡೇಶನ್ ಅವರ ಸಹಯೋಗದಲ್ಲಿ ಎಸ್‌ಬಿಐ ಗ್ರಾಮ ಸಕ್ಷಮ್ ಕಾಯ9ಕ್ರಮದಡಿ ಎಸ್‌ಬಿಐ ರೈತ ಬಂಧು ಯೋಜನೆಯ ಅಡಿಯಲ್ಲಿ ರೈತರ ಅಭಿವೃದ್ಧಿಗೆ ಹಾಗೂ ಜಲ ಸಂರಕ್ಷಣೆಗೆ ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. 

 ಈ ಯೋಜನೆಯಡಿ ರೈತರಿಗಾಗಿ 2 ಚೆಕ್ ಡ್ಯಾಂಗಳು ಹಾಗೂ 400 ಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಜೊತೆಗೆ 32 ಗ್ರಾಮದ ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಎಲ್ಲಾ ಜಲ ಸಂರಕ್ಷಣಾ ಕಾರ್ಯಗಳಿಂದ ಒಟ್ಟು 564 ಮಿಲಿಯನ್ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯ ನಿರ್ಮಾಣವಾಗಿದ್ದು, ಇದರಿಂದ ಪ್ರದೇಶದ ಅಂತರ್ಜಲ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಇದರೊಂದಿಗೆ, 40 ರೈತರಿಗೆ ಟ್ರೀ-ಬೇಸ್‌ಡ್ ಫಾರ್ಮಿಂಗ್ (ಮರ ಆಧಾರಿತ ಕೃಷಿ) ಪದ್ಧತಿಯನ್ನು ಅಳವಡಿಸಿಕೊಳ್ಳಲು ಅಗತ್ಯ ಸಹಾಯ ಮತ್ತು ಮಾರ್ಗದರ್ಶನ ನೀಡಲಾಗಿದೆ. ಮತ್ತು ಇವರಲ್ಲಿ 50ಅ ಕ್ಕೂ ಹೆಚ್ಚು ರೈತರು ಅಭಿವೃದ್ಧಿಯಾಗಿದ್ದಾರೆ. ಎಂದು ಚಚಿ9ಸುತ್ತ ಸಂಕಲ್ಪ ಮತ್ತು ಎಸ್‌ಬಿಐ ಫೌಂಡೇಶನ್ ಗೆ ಧನ್ಯವಾದಗಳನ್ನು ತಿಳಿಸಿದರು.