ವಿಶ್ವ ಮಧುಮೇಹ ದಿನಾಚರಣೆ: ಜಾಗೃತಿ ರ್ಯಾಲಿ
World Diabetes Day: Awareness Rally
ಲೋಕದರ್ಶನ ವರದಿ
ಕಾಗವಾಡ 25: ಮಹಾರಾಷ್ಟ್ರದ ಸಾಂಗಲಿ ನಗರದಲ್ಲಿ ರವಿವಾರ ದಿ. 16 ರಂದು ವಿಶ್ವ ಮಧುಮೇಹ (ಡೈಯಾಬೆಟಿಕ್) ದಿನದಂದು ಮಧುಮೇಹದಿಂದ ಉಂಟಾಗುವ ಕಣ್ಣಿನ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಸಾಂಗಲಿ ಅಫ್ತಾಮ್ಲೊಲಾಜಿಸ್ಟ್ ಅಸೊಶಿಯೇಶಿಯನ್ ವತಿಯಿಂದ ಪ್ರಭಾತ ರ್ಯಾಲಿ ಹಮ್ಮಿಕೊಳ್ಳಲಾಯಿತು.
ರಾ್ಯಲಿಯನ್ನು ಸಾಂಗಲಿಯ ಭಾರತಿ ವಿದ್ಯಾಪೀಠದ ವೈದ್ಯಕೀಯ ಮಹಾವಿದ್ಯಾಲಯ, ಮಿರಜನ ಶಾಂತಿಸರೋಜ ನೇತ್ರಾಲಯ, ಅನುರಾಧಾ ಕಣ್ಣಿನ ಆಸ್ಪತ್ರೆ, ನಂದಾದೀಪ ಕಣ್ಣಿನ ಆಸ್ಪತ್ರೆ, ಸೇವಾ ಸದನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಟೆಕೆ ಕಣ್ಣಿನ ಚಿಕಿತ್ಸಾಲಯ, ಬಿರಾದಾರ ಕಣ್ಣಿನ ಆಸ್ಪತ್ರೆ, ಅನೀಲ ಕುಲಕರ್ಣಿ ಕಣ್ಣಿನ ಆಸ್ಪತ್ರೆ, ಲಿಮಾಯೆ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಈ ಎಲ್ಲ ಆಸ್ಪತ್ರೆಯ ವೈದ್ಯರು, ಆಸ್ಪತ್ರೆಗಳ ಸಿಬ್ಬಂದಿಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ರಾ್ಯಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಸಾಂಗಲಿ ಅಫ್ತಾಮ್ಲೊಲಾಜಿಸ್ಟ್ ಅಸೊಶಿಯೇಶಿಯನ್‌ನ ಅಧ್ಯಕ್ಷ ಡಾ. ಶರದ ಭೋಮಜ ಮತ್ತು ಡಾ. ಅನೀಲ ಕುಲಕರ್ಣಿ ಮಾತನಾಡಿ, ಮಧುಮೇಹದಿಂದ ಉಂಟಾಗುವ ಕಣ್ಣಿನ ಕಾಯಿಲೆಗಳಾದ ಡಯಾಬಿಟಿಕ್ ರೆಟಿನೋಪತಿ ಮತ್ತು ಅದರಿಂದ ಉಂಟಾಗುವ ಸಂಭಾವ್ಯ ಕುರುಡುತನಕ್ಕೆ ತೆಗೆದುಕೊಳ್ಳಬೇಕಾದ ಆರೈಕೆಯ ಕುರಿತು ಮಾರ್ಗದರ್ಶನ ನೀಡಿದರು.
ಅಫ್ತಾಮ್ಲೊಲಾಜಿಸ್ಟ್ ಅಸೊಶಿಯೇಶಿಯನ್‌ನ ಉಪಾಧ್ಯಕ್ಷ ಡಾ. ಸುಹಾಸ ಜೋಶಿ ಸ್ವಾಗತಿಸಿದರು. ಖಜಾಂಚಿ ಡಾ. ಅಭಿನಂದನ ಪಾಟೀಲ ನಿರೂಪಿಸಿದರು. ಕಾರ್ಯದರ್ಶಿ ಡಾ. ಅರ್ಚನಾ ಬಿರಾದಾರ ವಂದಿಸಿದರು.
ರಾ್ಯಲಿಯು ನಗರದ ರಾಮ ಮಂದಿರ ಚೌಕ್‌ದಿಂದ ವಿಶ್ರಾಮಬಾಗ ವರೆಗೆ ಸಾಗಿತು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 