ವಿಶ್ವ ಚದುರಂಗ ದಿನಾಚರಣೆ: ಡಾ. ವಿಶ್ವನಾಥ ಬಳಿಗಾರ್ಗೆ ಸನ್ಮಾನ

ವಿಶ್ವ ಚದುರಂಗ ದಿನಾಚರಣೆ: ಡಾ. ವಿಶ್ವನಾಥ ಬಳಿಗಾರ್ಗೆ ಸನ್ಮಾನ  World Chess Day Celebration: Dr. Vishwanath Baligar Honoured

ಲೋಕದರ್ಶನ ವರದಿ 

ಹುಬ್ಬಳ್ಳಿ ಜು.29: ವಿಶ್ವ ಚದುರಂಗ ದಿನಾಚರಣೆ ಅಂಗವಾಗಿ ವಚನ ಚದುರಂಗ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಚದುರಂಗ ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಾಧ್ಯಾಪಕರಾದ ಡಾ. ವಿಶ್ವನಾಥ ಪಿ. ಬಳಿಗಾರ್ ಅವರನ್ನು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿ ಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.  

ಸಮಿತಿಯ ಸದಸ್ಯರು ಡಾ. ಬಳಿಗಾರ್ ಅವರಿಗೆ ಮಾಲಾರೆ​‍್ಣ ಮಾಡಿ ವಿಶ್ವ ಚದುರಂಗ ದಿನದ ಶುಭಾಶಯಗಳನ್ನು ಕೋರಿದರು. ಪರಮಾತ್ಮನು ಅವರಿಗೆ ಉತ್ತಮ ಆರೋಗ್ಯ ಹಾಗೂ ದೀರ್ಘಾಯುಷ್ಯ ಕರುಣಿಸಲಿ ಎಂದು ಹಾರೈಸಿ ಆಶೀರ್ವಾದ ಪಡೆದರು.  

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಲಿಂಗೈಕ್ಯರಾದ ಬಸವರಾಜ್ (ರಾಜು) ಶಿವಪ್ಪ ಬಳಿಗಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ​‍್ಿಸಲಾಯಿತು. ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಗ್ರಂಥಪಾಲಕರಾದ ಡಾ. ಸುರೇಶ ಡಿ. ಹೊರಕೇರಿ ಅವರು ಬಸವರಾಜ್ ಬಳಿಗಾರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.  

ಕಾರ್ಯಕ್ರಮದಲ್ಲಿ ಸೋಹನ ಸುರೇಶ ಹೊರಕೇರಿ, ಬಸವರಾಜ್ ಪಾಟೀಲ, ಸುನೀತಾ ಮಾಳವದೆಕರ್, ಪ್ರಭು ರೋಣದ್, ಪವನಕುಮಾರ ಸರದೇಸಾಯಿ, ಮಲ್ಲಮ್ಮ ವಫಾಸೈಯದಾ ಅಂಜುಮ್, ಪ್ರೊ. ತಬೀಬ, ಗೀರೀಶ್ ಕೊಪ್ಪಳ, ಮೃತ್ಯುಂಜಯ್ ಮಟ್ಟಿ, ಕಿರಣ್ ಮಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.