ವಿಶ್ವ ಸ್ತನಪಾನ ಸಪ್ತಾಹ ದಿನ : ತಾಯಿಯ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ
World Breastfeeding Week: Mother's breast milk is like nectar for a baby
ವಿಶ್ವ ಸ್ತನಪಾನ ಸಪ್ತಾಹ ದಿನ : ತಾಯಿಯ ಎದೆಹಾಲು ಮಗುವಿಗೆ ಅಮೃತಕ್ಕೆ ಸಮಾನ
ಬಳ್ಳಾರಿ 7: ರಂದು ನಗರದಲ್ಲಿ ವಿಶ್ವ ಸ್ತನಪಾನ ಸಪ್ತಾಹ (ಆಗಸ್ಟ್ 1 ರಿಂದ 7) ದಿನಗಳ ಆಚರಣೆಯ ಭಾಗವಾಗಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್ ಇಂಡಿಯಾ (ಈಕಂಋ), ಬಳ್ಳಾರಿ ಶಾಖೆ, ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಸಹಯೋಗದಿಂದ ವಿವಿಧ ಜಾಗೃತಿ ಹಾಗೂ ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು.ಇಂದು ಸರ್ಕಾರಿ ಆಸ್ಪತ್ರೆ, ರಾಜ್ಯೋತ್ಸವ ನಗರ, ಬಳ್ಳಾರಿಯಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರು ಸ್ತನಪಾನ ಸಂಬಂಧಿತ ಮಾಹಿತಿ ಮತ್ತು ಆರೋಗ್ಯ ಸೇವಾ ಶಿಬಿರವನ್ನು ಆಯೋಜಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಸೌಜನ್ಯ, ವೈದ್ಯಾಧಿಕಾರಿ, “ತಾಯಿಯ ಎದೆಹಾಲು ಮಗುವಿಗೆ ಮೊದಲ 6 ತಿಂಗಳುಗಳವರೆಗೆ ಪೂರ್ಣ ಆಹಾರವಾಗಿದೆ. ಸರಿಯಾದ ವಿಧಾನದಲ್ಲಿ ಸ್ತನಪಾನ ಮಾಡುವ ಮೂಲಕ ಮಗುವಿಗೆ ಉತ್ತಮ ಆರೋಗ್ಯ ನೀಡಬಹುದು,” ಎಂದು ವಿವರಿಸಿದರು.ಈಕಂಋ ಬಳ್ಳಾರಿ ಶಾಖೆಯ ಕಾರ್ಯಕ್ರಮಾಧಿಕಾರಿ ಬಸವರಾಜ ಮಾತನಾಡುತ್ತಾ, ಸಂಸ್ಥೆಯ ಆರೋಗ್ಯ ಸೇವೆಗಳ ಬಗ್ಗೆ ಹಾಗೂ ಗರ್ಭಕೋಶದ ಕ್ಯಾನ್ಸರ್ ಮತ್ತು ಊಕಗಿ ಲಸಿಕೆಯ ಮಹತ್ವದ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಒಟ್ಟಾರೆ 67 ಫಲಾನುಭವಿಗಳು ಭಾಗವಹಿಸಿದ್ದು, ಅವರಲ್ಲಿ 24 ಮಂದಿ ಂಓಅ (ಗರ್ಭಿಣಿಯರು) ಹಾಗೂ 27 ಮಂದಿ ಕಓಅ (ಬಾಣಂತಿಯರು) ಆಗಿದ್ದರು. ಜಾಗೃತಿಯ ನಂತರ ಪಾಲನುಭವಿಗಳಿಗೆ ಐರನ್, ಕ್ಯಾಲ್ಸಿಯಂ ಮಾತ್ರೆಗಳು ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನೀಡಲಾಯಿತು.ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಲು ಪಿಎಚ್‌ಸಿ ಶುಶ್ರೂಷಕಿ ಮಾಬುನ್ನಿ ಮತ್ತು ಆಶಾ ಶಿವಕುಮಾರಿ ಹಾಗೂ ಸಿಬ್ಬಂದಿಗಳ ಸಹಕಾರ ದೊರೆಯಿತು.ಈ ಕಾರ್ಯಕ್ರಮದ ಮೂಲಕ ತಾಯಂದಿರಲ್ಲಿ ಸ್ತನಪಾನದ ಬಗ್ಗೆ ಅರಿವು ಮೂಡಿಸಿ, ತಾಯಿ ಮತ್ತು ಮಗು ಅವರ ಆರೋಗ್ಯ ರಕ್ಷಣೆಗೆ ಪೂರಕವಾದ ಸೇವೆಗಳನ್ನು ಒದಗಿಸಲಾಯಿತು ಎಂದು ವಿಜಯ ಲಕ್ಷ್ಮಿ ಯವರು ಪತ್ರಿಕೆ ಪ್ರಕಟಣಿ ಗೆ ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 