ವಿಶ್ವ ಬಸವ ಧರ್ಮ ಪ್ರವಚನ ಕಾರ್ಯಕ್ರಮ

ವಿಶ್ವ ಬಸವ ಧರ್ಮ ಪ್ರವಚನ ಕಾರ್ಯಕ್ರಮ World Basava Dharma Discourse Program

ಲೋಕದರ್ಶನ ವರದಿ 

ಹುಬ್ಬಳ್ಳಿ 06:  ಬಸವ ಕೇಂದ್ರದ ವತಿಯಿಂದ 2025 ನವೆಂಬರ್ 15 ರಿಂದ ಡಿಸೆಂಬರ್ 7 ರವರೆಗೆ ಗೋಕುಲ ರಸ್ತೆಯ ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಶ್ವ ಬಸವ ಧರ್ಮ ಪ್ರವಚನ ಆಯೋಜಿಸಲಾಗಿದೆ.  

ತಿಂಗಳ ಪರ್ಯಂತರ ಪ್ರವಚನವನ್ನು ಈ ವರ್ಷ ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಹುಣಸಿಕೊಳ್ಳಮಠ, ಶ್ರೀ ಜಗದ್ದುರು ಶೂನ್ಯಸಂಪಾದನ ಪೀಠದ ಪರಮ ಪೂಜ್ಯ ಸಿದ್ಧಬಸವ ದೇವರು ಅವರು ನೀಡಿದರು. ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಹುಣಸಿಕೊಳ್ಳಮಠ, ಜಗದ್ದುರು ಶೂನ್ಯಸಂಪಾದನ ಪೀಠದ ಪರಮ ಪೂಜ್ಯ ಸಿದ್ಧಬಸವ ದೇವರು ಅವರಿಗೆ ಶಾಲು, ಗ್ರಂಥಗಳನ್ನು ನೀಡಿ, ಮಾಲಾರೆ​‍್ಣ ಮಾಡಿ, ಹಣ್ಣುಗಳನ್ನು ನೀಡಿ, ಪುಷ್ಪವೃಷ್ಟಿಗೈದು, ಗೌರವ ಪೂರ್ವಕವಾಗಿ ಶ್ರದ್ಧಾ ಭಕ್ತಿಯಿಂದ ನಮನಗಳನ್ನು ಸಲ್ಲಿಸಲಾಯಿತು. ಭಕ್ತಿಯಿಂದ ಶುಭಾಶಯಗಳನ್ನು ಕೋರಿದರು. ಶ್ರೀಗಳ ದರ್ಶನ ಆಶೀರ್ವಾದ ಪಡೆದರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ,  ಬಸವ ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಪ್ರೊ ಎಸ್‌.ವಿ.ಪಟ್ಟಣಶೆಟ್ಟಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ ಪ್ರೊ ಎಸ್‌.ಎಂ.ಸಾತ್ಮಾರ, ಹಿರಿಯರಾದ ಚನ್ನಬಸಪ್ಪ ಧಾರವಾಡ ಶೆಟ್ಟರ, ಬಸವಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಸುಜಯ ಸುರೇಶ ಹೊರಕೇರಿ ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಕೆ.ಎಸ್‌.ಇನಾಮತಿ, ಸುಭಾಷ್ ಚವ್ಹಾಣ, ಬಸವರಾಜ ಗಣಾಚಾರಿ, ಮುಂತಾದವರು ಇದ್ದರು.  

ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಹುಣಸಿಕೊಳ್ಳಮಠ, ಜಗದ್ದುರು ಶೂನ್ಯಸಂಪಾದನ ಪೀಠದ ಪರಮ ಪೂಜ್ಯ ಸಿದ್ಧಬಸವ ದೇವರು ಮೂಲತಃ  ಬೆಳಗಾವಿ ಜಿಲ್ಲೆ ಹುಕ್ಕೇರಿ ಬೋರಗಲ್ಲ ಗ್ರಾಮದವರು. ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಧಾರವಾಡದಲ್ಲಿ ಉನ್ನತ ಶಿಕ್ಷಣ ಪಡೆದ ನಂತರ  ಹುಕ್ಕೇರಿ ತಾಲೂಕಿನ   ಹೆಬ್ಬಾಳ ಗ್ರಾಮದ ಬಸವಭವನದಲ್ಲಿ   ನಾಲ್ಕು ವರ್ಷ ಧರ್ಮೋಪದೇಶ ಮಾಡಿ   ಹನ್ನೇರಡು ಸಾವಿರಕ್ಕೂ ಹೆಚ್ಚು  ಲಿಂಗ ದೀಕ್ಷೆ   ಹಾಗೂ  ಇಪ್ಪತೈದು ಸಾವಿರಕ್ಕೂ ಹೆಚ್ಚು  ರುದ್ರಾಕ್ಷಿ ದೀಕ್ಷೆ ಭಕ್ತರಿಗೆ ನೀಡಿ ಧರ್ಮ ಸಂಚಲನ ಮೂಡಿಸಿದ್ದಾರೆ. ಪ್ರವಚನ ದಯಪಾಲಿಸಿದ ಸಂದರ್ಭದಲ್ಲಿ ಭಕ್ತರು ನೀಡಿದ ದೇಣಿಗೆಯನ್ನು 50 ವಿದ್ಯಾಥಿ9ಗಳ ಉನ್ನತ ಶಿಕ್ಷಣಕ್ಕೆ ದಾಸೋಹ ಮಾಡಿದ್ದಾರೆ. ಶ್ರೀಗಳು ಪ್ರವಚನದಿಂದ ಬಂದ ದೇಣಿಗೆಯನ್ನು ತಮ್ಮ ಸಹಪಾಠಿಗಳ ವಿದ್ಯಾಭ್ಯಾಸದ ಸಲುವಾಗಿ ಉಪಯೋಗಿಸಿದ್ದಾರೆ. ಈಗಾಗಲೇ 250ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರವಚನ ನೀಡಿ ಭಕ್ತರಿಗೆ ಸನ್ಮಾರ್ಗದಲ್ಲಿ ಜೀವನ ಸಾಗಿಸಲು ಧರ್ಮದ ಆಚಾರ ವಿಚಾರಗಳನ್ನು ಭೋದಿಸಿದ್ದಾರೆ. 23 ಅನಾಥ ಹಾಗೂ ಬಡ ಮಕ್ಕಳಿಗೆ ಆಶ್ರಯ ನೀಡಿ ಅನ್ನ ಅಕ್ಷರ ದಾಸೋಹ  ನೀಡುವಲ್ಲಿ ನಿರತರಾಗಿದ್ದಾರೆ.   

ಗಟ್ಟಿ ಧ್ವನಿ ನೇರ ಮಾತು  ವೈಚಾರಿಕ ನೆಲೆಗಟ್ಟು ನೀಳವಾದಶರೀರ,ಆಳವಾದ ಅಧ್ಯಯನ,  ಮಠಕ್ಕಾದರೂ  ಮಠದಲ್ಲಿ  ಇರಲಾರದಷ್ಟು ಕಾರ್ಯಕ್ರಮಗಳು. ಇವರ ಕಾರ್ಯಧ್ಯಕ್ಷತೆ   ಕಂಡ ಭಕ್ತರು  ಯಮಕ್ಕನಮರಡಿ  ಜಗದ್ಗುರು ಶೂನ್ಯ ಸಂಪಾದನ ಹುಣಸಿಕೊಳ್ಳಮಠಕ್ಕೆ  ಸಮರ್ಥ ಯತಿಗಳೆಂದು  ಮನಗಂಡು ಶ್ರೀ ಮಠದ 21ನೆಯ   ಜಗದ್ಗುರುಗಳಾಗಿ  ಪೀಠ ಅರಸಿ ಬಂದದ್ದು  ಹೆಮ್ಮೆಯ ವಿಷಯ.