ಕೃಷಿ ಜಂಟಿ ಅಧಿಕಾರಿಗಳಿಂದ ವಿಶ್ವ ದಿನ ಆಚರಣೆ
World Agriculture Day celebrated by Joint Officers
ಲಕ್ಷ್ಮೇಶ್ವರ" 17 : ತಾಲೂಕಿನ ಹರದಗಟ್ಟಿ ಗ್ರಾಮದ ಧರ್ಮಣ್ಣ ಲಮಾಣಿ ಅವರ ಜಮೀನಿನಲ್ಲಿ ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಾಣ ವಾಗಿರುವ ಗೋಕಟ್ಟೆಯಲ್ಲಿ (ಕೆರೆ) ವಿಶ್ವ ಜಲಾನಯನ ಅಭಿವೃದ್ಧಿ ಇಲಾಖೆ ಪಿ.ಎಂ.ಕೆ.ಎಸ.ವಾಯ್.ಡಬ್ಲ್ಯೂ.ಡಿ.ಸಿ -2,0 ಯೋಜನೆ ಮರುಭೂಮಿಕರಣ ಮತ್ತು ಬರ ಎದುರಿಸುವ ವಿಶ್ವ ದಿನ ಆಚರಣೆಯನ್ನುಸಸಿ ಗಿಡ ನೆಡುವ ಮೂಲಕ ಆಚರಿಸಲಾಯಿತು ಸಸಿ ಗಿಡ ನೆಡುವ ಮೂಲಕ ಗದಗ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಉಪ ಜಂಟಿ ನಿರ್ದೇಶಕಿ ಪೂರ್ತಿ ಅವರು ಮಾತನಾಡಿ ಗ್ರಾಮೀಣ ಭಾಗದ ರೈತರ ಜಮೀನಿನಲ್ಲಿ ಗೋಕಟ್ಟೆಗಳಲ್ಲಿ ಉತ್ತಮ ಬೆಳೆ ಬರುವ ಗಿಡಗಳನ್ನು ಬೆಳೆಸುವುದರಿಂದ ರೈತರ ಬದುಕಿನ ಮಟ್ಟ ಸುಧಾರಣೆಗೆ ಸಹಕಾರಿ ಯಾಗುತ್ತದೆ ಮತ್ತು ಗೋಕಟ್ಟೆ ಸುತ್ತು ಮುತ್ತು ಗಿಡ ಮರಗಳನ್ನು ಬೆಳೆಸುವುದರಿಂದ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.
ಆ ನಿಟ್ಟಿನಲ್ಲಿ ಎಲ್ಲರೂ ಉತ್ತಮ ಪರಿಸರ ನಿರ್ಮಾಣ ಮಾಡುವುದು ಅವಶ್ಯವಾಗಿದ್ದು ನಮ್ಮ ಕೃಷಿ ಇಲಾಖೆಯಿಂದ ಜಲಾನಯನ ಅಭಿವೃದ್ಧಿ ಇಲಾಖೆಯಿಂದ ಮರುಭೂಮಿಕರಣ ಮತ್ತು ಬರ ಎದುರಿಸುವ ವಿಶ್ವ ದಿನಾಚರಣೆ ಅಂಗವಾಗಿ ಸಸಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲಾ ಗ್ರಾಮೀಣ ಭಾಗದ ಜನರು ಹೆಚ್ಚು ಗಿಡ ಮರಗಳನ್ನು ಬೆಳೆಸಿದರೆ ಮರಭೂಮಿಯಲ್ಲಿಯೂ ಸಹ ನಾವು ಉತ್ತಮ ಬೆಳೆ ಮತ್ತು ಪರಿಸರ ಕಾಣಲು ಸಾಧ್ಯವಾಗುತ್ತದೆ ಇದರಿಂದ ಬರಗಾಲ ಸಹ ನಮಗೆ ಎದುರಾಗುವುದಿಲ್ಲ ಅದಕ್ಕಾಗಿ ಎಲ್ಲ ಗ್ರಾಮೀಣ ಪ್ರದೇಶದ ರೈತ ಬಾಂಧವರು ಸುಂದರ ಪರಿಸರ ಬೆಳೆಸಲು ಮುಂದಾಗಬೇಕು ಎಂದರು ಈ ಸಮಯದಲ್ಲಿ ಕೃಷಿ ಇಲಾಖೆಯ ಎಡಿಎ ಶಿವಕುಮಾರ್ ಕಾಶಪ್ಪನವರ ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ ಕೆ ಹೊನ್ನಪ್ಪನವರ ಮಹೇಶ ನಂದೆಣ್ಣವರ ಮಾನಪ್ಪ ಲಮಾಣಿ ಧರ್ಮಣ್ಣ ಲಮಾಣಿ ಸೇರಿದಂತೆ ಹರದಗಟ್ಟೆ ಗ್ರಾಮದ ರೈತರು ಮಹಿಳೆಯರು ಇದ್ದರು
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 