ಪ್ರಾಕ್ಟಿಕಲ್ ಅಪ್ಲಿಕೇಶನ್ಸ್ ಫಾರ್ ಹೆಲ್ತ್‌ಕೇರ್ ಎಜ್ಯುಕೇಟರ್ಸ” ಶೀರ್ಷಿಕೆಯ ಕಾರ್ಯಾಗಾರ
Workshop titled “Practical Applications for Healthcare Educators”
“ಎನ್ಹಾನ್ಸಿಂಗ್ ಪೆಡಗಜಿ ವಿತ್ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಎಐ:
ಬೆಳಗಾವಿ 19: “ಎನ್ಹಾನ್ಸಿಂಗ್ ಪೆಡಗಜಿ ವಿತ್ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಎಐ: ಪ್ರಾಕ್ಟಿಕಲ್ ಅಪ್ಲಿಕೇಶನ್ಸ್ ಫಾರ್ ಹೆಲ್ತ್‌ಕೇರ್ ಎಜ್ಯುಕೇಟರ್ಸ” ಶೀರ್ಷಿಕೆಯ ಕಾರ್ಯಾಗಾರವನ್ನು, ಫಾರ್ಮಕೊಲೋಜಿ ವಿಭಾಗ, ಕೆಎಲ್‌ಇ ಫಾರ್ಮಸಿ ಕಾಲೇಜು, ಬೆಳಗಾವಿ, ಕೆಎಲ್‌ಇ ಎಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅಂಡ್ ರಿಸರ್ಚ್ (ಏಂಊಇಖ), ಬೆಳಗಾವಿ ಇವರ ಯೂನಿವರ್ಸಿಟಿ ಡಿಪಾರ್ಟ್‌ಮೆಂಟ್ ಆಫ್ ಎಜ್ಯುಕೇಶನ್ ಫಾರ್ ಹೆಲ್ತ್ ಪ್ರೊಫೆಷನಲ್ಸ್ (ಗಆಇಊಕ) ಘಟಕದ ಅಧೀನದಲ್ಲಿ 19 ಆಗಸ್ಟ್ 2025 ರಂದು ಆಯೋಜಿಸಿತು. ಕಾರ್ಯಕ್ರಮವನ್ನು ಶ್ರೀ ಶಾದಾಬ್, ಸಹ-ಸ್ಥಾಪಕರು, ನ್ಟೂರಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ ಅವರ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.
ಡಾ. ಎನ್. ಎ. ಖತೀಬ್ ಅತಿಥಿಗಳಿಗೆ ಸ್ವಾಗತ ಕೋರಿದರು ಮತ್ತು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಡಾ. ಅನುಪಮಾ ಜಿ, ಸಹ-ಸಂಯೋಜಕಿ, ಗಆಇಊಕ, ಏಂಊಇಖ, ಬೆಳಗಾವಿ ಅವರು ಶಿಕ್ಷಣ ಹಾಗೂ ಅಧ್ಯಯನದಲ್ಲಿ ಕೃತಕ ಬುದ್ಧಿಮತ್ತೆಯ (ಂಋ) ಪರಿವರ್ತನಾತ್ಮಕ ಪಾತ್ರವನ್ನು ವಿವರಿಸಿ, ಗಆಇಊಕ ಕಾರ್ಯಕ್ರಮದ ಉದ್ದೇಶ ಮತ್ತು ವಿನ್ಯಾಸವನ್ನು ವಿವರಿಸಿದರು.
ಮುಖ್ಯ ಅತಿಥಿ ಶ್ರೀ ಶಾದಾಬ್ ಅವರು, ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಂಋ ಬೋಧನೆ ಮತ್ತು ಕಲಿಕೆಯನ್ನು ಹೇಗೆ ಬದಲಾಯಿಸಬಲ್ಲದು ಎಂಬುದರ ಕುರಿತು ವಿವರಿಸಿದರು. ಅವರು ಂಋ ಆಧಾರಿತ ಸಾಧನಗಳು ಸಂಕೀರ್ಣ ವೈದ್ಯಕೀಯ ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥಮಾಡಿಸಬಲ್ಲವು, ವಿದ್ಯಾರ್ಥಿಗಳ ತೊಡಗಿಸಿಕೊಂಡು ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸಬಲ್ಲವು ಮತ್ತು ಶಿಕ್ಷಕರಿಗೆ ಹೆಚ್ಚು ಪರಿಣಾಮಕಾರಿ ಅಧ್ಯಯನ ಅನುಭವಗಳನ್ನು ರೂಪಿಸಲು ನೆರವಾಗಬಲ್ಲವು ಎಂದು ಹೇಳಿದರು. ಜೊತೆಗೆ, ಶಿಕ್ಷಣದಲ್ಲಿ ಂಋ ಅಳವಡಿಸಿಕೊಳ್ಳುವುದರಿಂದ ಭವಿಷ್ಯದ ಆರೋಗ್ಯ ವೃತ್ತಿಪರರು ವೈಯಕ್ತಿಕ ಜ್ಞಾನ, ವಿಮರ್ಶಾತ್ಮಕ ಚಿಂತನೆ ಹಾಗೂ ಸಮಾಜಸೇವೆಗಾಗಿ ಅಗತ್ಯ ಕೌಶಲ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಒತ್ತಿಹೇಳಿದರು.
ಪ್ರೊ. (ಡಾ.) ಸುನಿಲ್ ಎಸ್. ಜಲಾಲಪುರೆ, ಪ್ರಾಂಶುಪಾಲರು, ಂಋ ಅನ್ನು ಶಿಕ್ಷಕರ ಸಹಯೋಗಿ ಪಾಲುದಾರರಂತೆ ನೋಡಬೇಕು ಎಂದು ಅಭಿಪ್ರಾಯಪಟ್ಟರು. ಇದರಿಂದ ವೈಯಕ್ತಿಕ, ಸಾಕ್ಷ್ಯಾಧಾರಿತ ಮತ್ತು ಪರಿಣಾಮಕಾರಿಯಾದ ಬೋಧನಾ ವಿಧಾನಗಳು ಸಾಧ್ಯವಾಗುತ್ತವೆ ಎಂದು ಹೇಳಿದರು. ಜೊತೆಗೆ, ಅಧ್ಯಾಪಕರ ಸಾಮರ್ಥ್ಯ ವೃದ್ಧಿಗೆ ಹಾಗೂ ನಿರಂತರ ಕಲಿಕೆಗೆ ನೆರವಾಗುವಂತಹ ಕಾರ್ಯಾಗಾರಗಳನ್ನು ಆಯೋಜಿಸಿರುವ ಗಆಇಊಕ ಯ ಕಾರ್ಯವನ್ನು ಅವರು ಮೆಚ್ಚಿದರು.
ಈ ಕಾರ್ಯಾಗಾರದಲ್ಲಿ ಂಋ ಯ ಮೂಲಭೂತ ಜ್ಞಾನ, ಅಳವಡಿಕೆ ಸವಾಲುಗಳು, ಸಂಶೋಧನೆಯನ್ನು ಉಪಯುಕ್ತ ಮಾಹಿತಿಯಾಗಿ ರೂಪಿಸುವುದು, ನೇರ ಸಾಧನಗಳ ಪ್ರದರ್ಶನ, ಂಋ ಕುರಿತು ಇರುವ ತಪ್ಪು ಕಲ್ಪನೆಗಳ ನಿವಾರಣೆ ಹಾಗೂ ಆರೋಗ್ಯ ವೃತ್ತಿಪರರಿಗೆ ಅನುಗುಣವಾದ ಪ್ರಾಯೋಗಿಕ ಸಮಸ್ಯೆ ಪರಿಹಾರ ವಿಧಾನಗಳು ಚರ್ಚಿಸಲ್ಪಟ್ಟವು. ಭಾಗವಹಿಸಿದವರು ಡೇಟಾಸೆಟ್ ವಿಶ್ಲೇಷಣೆ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಂಋ ಬಳಕೆಗೆ ಸಂಬಂಧಿಸಿದ ಆಲೋಚನೆಗಳ ರೂಪಣೆ ಸೇರಿದಂತೆ ಸಂವಾದಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು.
ಈ ಸಂದರ್ಭದಲ್ಲಿ ಡಾ. ಅನುಪಮಾ ಜಿ (ಸಹ ಸಂಯೋಜಕಿ, ಗಆಇಊಕ, ಏಂಊಇಖ, ಬೆಳಗಾವಿ), ಪ್ರೊ. (ಡಾ.) ಸುನಿಲ್ ಎಸ್. ಜಲಾಲಪುರೇ (ಪ್ರಾಂಶುಪಾಲರು), ಡಾ. ವಿ. ಎಸ್. ಮಸ್ತಿಹೊಳಿಮಠ (ಡೀನ್), ಡಾ. ನಯೀಮ್ ಎ. ಖತೀಬ್, ಡಾ. ಗೀತಾಂಜಲಿ ಸಾಲಿಮಠ ಹಾಗೂ ಎಲ್ಲಾ ಅಧ್ಯಾಪಕರು ಉಪಸ್ಥಿತರಿದ್ದರು. ಸುಮಾರು 40 ಅಧ್ಯಾಪಕರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶ್ರೀ ಪ್ರಕಾಶ್ ಬಿರಾದರ್ ಧನ್ಯವಾದಗಳನ್ನು ಅರ್ಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 