ವಿಶೇಷ ಚೇತನ ಮಕ್ಕಳ ಸಬಲೀಕರಣಕ್ಕೆ ಶಾಲೆ, ಸಮೂದಾಯದ ಪಾತ್ರ: ಕಾರ್ಯಾಗಾರ

ವಿಶೇಷ ಚೇತನ ಮಕ್ಕಳ ಸಬಲೀಕರಣಕ್ಕೆ ಶಾಲೆ, ಸಮೂದಾಯದ ಪಾತ್ರ: ಕಾರ್ಯಾಗಾರ Workshop on the role of school and community in empowering children with special needs

ಲೋಕದರ್ಶನ ವರದಿ 

ಧಾರವಾಡ ಗ್ರಾಮೀಣ 17: ವಿಕಲಚೇತನ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಜೊತೆಗೆ ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಮುಖ್ಯವಾಹಿನಿ ಬರಬೇಕು. ವಿಶೇಷ ತರಬೇತಿ ಹಾಗೂ ಶಿಕ್ಷಣ ದೊರೆತಾಗ ನಿಮ್ಮೆಲ್ಲರ ಅಲೋಚನ ಶಕ್ತಿಯೇ ಬದಲಾಗುತ್ತದೆ ಎಂದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ಆರ್‌.ಸದಲಗಿ ಹೇಳಿದರು. 

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಧಾರವಾಡ ಗ್ರಾಮೀಣ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡ ಎಸ್‌.ಆರ್‌.ಪಿ ಕೇಂದ್ರದಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ವಿಶೇಷ ಚೇತನ ಮಕ್ಕಳ ಸಬಲೀಕರಣಕ್ಕೆ ಶಾಲೆ ಮತ್ತು ಸಮೂದಾಯದ ಪಾತ್ರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಾ ವಿಕಲಚೇತನ ಮಕ್ಕಳಲ್ಲಿ ಬಹಳಷ್ಟು ಪ್ರತಿಭಾವಂತ ಮಕ್ಕಳು ಇದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ತಿಳಿವಳಿಕೆ ಮೂಡಿಸಿದರೆ ಎಲ್ಲಾ ರಂಗದಲ್ಲಿಯು ಯಶಸ್ಸು ಸಾಧಿಸಲಿದ್ದಾರೆ ಎಂದರು. 

ಫಿಜಿಯೋಥೆರಪಿ ವೈದ್ಯರಾದ ಸುಜಾತ ನಾಯಕ್ ಮಾತನಾಡುತ್ತಾ ಸಾಮಾನ್ಯ ಮಕ್ಕಳೊಂದಿಗೆ ಕಲಿಯುವಾಗ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಲ್ಲಿ ಅವರು ಕೆಲಸಮಸ್ಯೆ ಎದುರಿಸುತ್ತಾರೆ. ಅವುಗಳ ನಿವಾರಣೆಗೆ ನಾವು ಮುಂದಾಗಬೇಕು ಎಂದರು. 

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಕುಮಾರ್ ಕೆ ಎಫ್ ಪ್ರಸ್ಥವಿಕವಾಗಿ ಮಾತನಾಡಿ, ವಿಕಲತೆ ಶಾಪವಲ್ಲ ಅದೊಂದು ಸವಾಲಾಗಿ ಸ್ವೀಕರಿಸಿ ಮಕ್ಕಳ ಆರೋಗ್ಯದ ಜೊತೆಗೆ ಶಿಕ್ಷಣವನ್ನು ನೀಡಬೇಕಾದದ್ದು ಪಾಲಕರ ಕರ್ತವ್ಯ ಎಂದರು. ಆರೋಗ್ಯದ ಕಾಳಜಿಯ ಜೊತೆಗೆ ಅವರಿಗೆ ತಿಳಿಯುವ ರೀತಿಯಲ್ಲಿ ಶಿಕ್ಷಣ ನೀಡಿದಾಗ ಅವರು ಕೂಡ ತಮ್ಮತಮ್ಮ ಪ್ರತಿಭೆಯನ್ನು ಹೊರತರಲು ಪ್ರಯತ್ನಿಸುತ್ತಾರೆ.ಇಂತಹ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ವಿಚಾರದಲ್ಲಿ ಸರ್ಕಾರದಿಂದ ಬರುವ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ನಾವೇಲ್ಲಾ ಸಹಾಯ ಸಹಕಾರ ನೀಡುತ್ತೇವೆ ಎಂದು ಹೇಳಿದರು. 

ಫೋರ್ಥ್‌ ವೇವ್ ಫೌಂಡೇಶನ್ ಮುಖ್ಯಸ್ಥರಾದ ಬಸವರಾಜ್ ಮ್ಯಾಗೇರಿ ಅವರು ಮಾತನಾಡಿ ಸಮಾಜದಲ್ಲಿ ಎಲ್ಲರಂತೆ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಸಹಕಾರ ನೀಡಲಿದೆ ಹಾಗೂ  ಸರಕಾರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಧಾರವಾಡ ಆವರಣದಲ್ಲಿರುವ ಶಾಲಾ ಸಿದ್ಧತಾ ಕೇಂದ್ರದಲ್ಲಿ ಎಲ್ಲ ಅಗತ್ಯ ಸಾಮಗ್ರಿ ಹಾಗೂ ಜಿಲ್ಲೆಯಲ್ಲಿಯೆ ಮಾದರಿಯಾಗಿ ಪೀಜಿಯೋಥೇರಪಿ ಚಿಕಿತ್ಸೆ ಇಲಾಖೆ ಸಹಕಾರದೊಂದಿಗೆ ನಮ್ಮ ಸಂಸ್ಥೆ ಒದಗಿಸಿದೆ ಎಂದರು. 

ಬಿ ಐ ಆರ್ ಟಿ ಗೋಪಾಲ ಸೊನ್ನಹಳ್ಳಿ ಇವರು ಮಾತನಾಡುತ್ತಾ ಇಲ್ಲಿ ಯಾರು ಅಸಹಾಯಕರಲ್ಲ ಈ ಮಕ್ಕಳನ್ನು ಸವಾಲಾಗಿ ಸ್ವೀಕರಿಸಿ ಮುಖ್ಯ ವಾಹಿನಿಗೆ ತರಲು ಇಲಾಖೆಯ ಸಂಪೂರ್ಣ ಸಹಕಾರವಿದೆ ಎಂದರು.  

ಟಿ.ಸಿ.ಡಬ್ಲೂ ಪ್ರಾಚಾರ್ಯ ಡಾ. ರವಿಕುಮಾರ ಬಾರಾಟಾಕ್ಕೆ, ಬಿಐಆರ್‌ಟಿ ಲಲಿತ ಹೊನ್ನವಾಡ ವಿಶೇಷ ಚೇತನರರನ್ನು ಸಾಮಾಜಿಕವಾಗಿ ಗುರುತಿಸುವ, ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಸದುದ್ದೇಶದಿಂದ ಈ ಕಾರ್ಯಾಗಾರ ಇದೆ. ನಾವೇಲ್ಲಾ ಅವರಿಗೆ ಸಿಗುವ ಅವಕಾಶ ಒದಗಿಸೊಣಾ ಎಂದರು. 

ಫಿಜಿಯೋಥೆರಪಿ ವೈದ್ಯರಾದ ಸುಜಾತಾ ನಾಯಕ, ಗೋಪಾಲ ಸೊನ್ನಹಳ್ಳಿ, ಲಲಿತಾ ಹೊನ್ನವಾಡ, ನಬೀಸಾಬ ಮುದ್ದೇಬಿಹಾಳ ಜನಮುಖಿ ಸಂಸ್ಥೆಯ ಬಸವರಾಜ ಮ್ಯಾಗೇರಿ, ವಿದ್ಯಾ ಮ್ಯಾಗೇರಿ, ಪುಷ್ಪಾ ಮಾನೆ, ಪ್ರಭಾವತಿ ಕವಳಿ, ಅಕ್ಷತಾ ಪೂಜಾರ ಮತ್ತು ಲಕ್ಷ್ಮಿ ಮಾಳ್ಗಿಮನಿ,ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯಾಧ್ಯಾಪಕರು ಉಪಸ್ಥಿತರಿದ್ದರು. 

ನಬೀಸಾಬ ಮುದ್ದೇಬಿಹಾಳ ಬಿ.ಐ.ಆರ್‌.ಟಿ ಶಿಕ್ಷಕರು ಮೊದಲಿಗೆ ಪ್ರಾರ್ಥನೆ ಮಾಡಿದರೆ,  ಲಲಿತ ಹೊನ್ನವಾಡ ಕಾರ್ಯಕ್ರಮ ನಿರೂಪಣೆ ಮಾಡಿ ಸ್ವಾಗತಿಸಿದರು. ಕೊನೆಯಲ್ಲಿ  ಗೋಪಾಲ್ ಸೊನ್ನಹಳ್ಳಿ ವಂದಿಸಿದರು.