ಭಾರತೀಯ ಜ್ಞಾನ ವ್ಯವಸ್ಥೆ ಕುರಿತು ಕಾರ್ಯಾಗಾರ
Workshop on Indian Knowledge System
ಬೆಳಗಾವಿ 18: ನಗರದ ಕೆಎಲ್‌ಎಸ್ ಆಯ್‌ಎಮ್‌ಇಆರ್ ವತಿಯಿಂದ ಎಮ್‌ಬಿಎ 2ನೇ ಸೆಮೆಸ್ಟರ್ ವಿದ್ಯಾರ್ಥಿಗಳಿಗಾಗಿ ದಿ. 17ರಂದು ಭಾರತೀಯ ಜ್ಞಾನ ವ್ಯವಸ್ಥೆಯ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕೆಎಲ್‌ಎಸ್ ಆಯ್‌ಎಮ್‌ಇಆರ್‌ನ ನಿರ್ದೇಶಕ ಡಾ. ಆರೀಫ್ ಶೇಖ್ ಸ್ವಾಗತಿಸಿ, ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ನಿರ್ವಹಣಾ ಶಿಕ್ಷಣವನ್ನು ಸಂಯೋಜಿಸುವದರ ಮಹತ್ವವನ್ನು ಒತ್ತಿ ಹೇಳಿ, ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಜ್ಞಾನದ ಕುರಿತು ಜಾಗೃತಿ ಮೂಡಿಸುವ ಉಪಕ್ರಮವನ್ನು ಅವರು ಶ್ಲಾಘೀಸಿದರು.
ಕಾರ‌್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪ್ರುನಿಕ್ ಎಚ್‌ಆರ್ ಸಲಹಾ ಸಂಸ್ಥೆ ನಡೆಸುತ್ತಿರುವ ಉದ್ಯಮಿ ಹಾಗೂ ಬೆಳಗಾವಿ ಆರ್‌ಪಿಡಿ ಕಾಲೇಜಿನ ಸಮಾಜಶಾಸ್ತ್ರದ ಮಾಜಿ ಅಧ್ಯಾಪಕಿ ರುತುಜಾ ಕಾಮತ್ ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿ ಭಾರತೀಯ ಜ್ಞಾನದ ಶ್ರೀಮಂತಿಕೆ ಹಾಗೂ ವೈವಿಧ್ಯತೆಯ ಕುರಿತು ವಿವರಿಸಿದರು. ಅವರ ಮಾತುಗಳು ಇಂದಿನ ಕ್ರಿಯಾತ್ಮಕ ವ್ಯವಹಾರ ಪರಿಸರದಲ್ಲಿ ಸ್ಥಳೀಯ ಬುದ್ಧಿವಂತಿಕೆಯ ಅನ್ವಯಿಕತೆಯ ಬಗ್ಗೆ ಪ್ರತಿಬಿಂಬಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿತು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಾಗಾರವನ್ನು ಡಾ. ಜಾರ್ಜ್, ಬೌದ್ಧಿಕ ಶಿಕ್ಷಣ ನಿರ್ದೇಶಕ ಟಿ. ರೊಡ್ರಿಗ್ಸ್ ಅವರು ರಾಧಿಕಾ ಇಟಗಿಕೆ, ಗಿರಿ ರಟ್ಟು ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಏರ್ಪಡಿಸಲಾಗಿತ್ತು.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 