ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬು : ಮಾಕಪ್ಪನವರ
Workers are the backbone of our country: Makappa
ಶಿಗ್ಗಾವಿ 01 : ಕಾರ್ಮಿಕರು ನಮ್ಮ ದೇಶದ ಬೆನ್ನೆಲುಬಾಗಿದ್ದು ದೇಶದ ಸವಾಂರ್ಗೀಣ ಅಭಿವೃದ್ಧಿಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದು ಡಾ. ಶರೀಫ ಮಾಕಪ್ಪನವರ ಹೇಳಿದರು ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ತಾಲೂಕಿನ ಚಲವಾದಿ ಮಹಾಸಭಾ ಹಾಗೂ ಹಡಪದ ಅಪ್ಪಣ್ಣ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದ ಅವರು ಸ್ವಾತಂತ್ರ್ಯಾ ನಂತರ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಕಾರ್ಮಿಕರಿಗಾಗಿ ಹಲವಾರು ಕಾನೂನುಗಳನ್ನು ಮಾಡಿ ಯೋಜನೆಗಳನ್ನು ಜಾರಿಗೆ ತಂದರು.
ಎಲ್ಲ ಕಾರ್ಮಿಕರು ದಿನದಲ್ಲಿ 8 ಗಂಟೆಗಳ ಕಾಲ ಕೆಲಸ ಮಾಡುವ ಕಾಯ್ದೆ ಜಾರಿಮಾಡಿದರು. ಮಹಿಳಾ ಕಾರ್ಮಿಕರಿಗೆ ಪ್ರಸುತಿ ರಜೆ ಮತ್ತು ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಿದರು.ಕಾರ್ಮಿಕರಿಗಾಗಿ ಅನೇಕ ಸೌಲಭ್ಯಗಳನ್ನು ಯೋಜನೆಗಳ ಮೂಲಕ ಕಲ್ಪಿಸಿ ಅವರ ಜೀವನಮಟ್ಟ ಹಾಗೂ ಕೌಟುಂಬಿಕ ಪರಿಸ್ಥಿತಿ ಸುಧಾರಿಸಲು ಕಾರಣರಾದವರು ಎಂದರು. ಚಲವಾದಿ ಸಮಾಜ ಅಧ್ಯಕ್ಷ ಪ್ರಮೋದ ಚಲವಾದಿ ಮಾತನಾಡಿ ಯಾವುದೇ ಕಾರ್ಮಿಕರಾಗಲಿ ಈ ಸಮಾಜದ ಶ್ರೇಯೋಭಿರುದ್ಧಿಗೆ ಹಗಲಿರುಳೆನ್ನದೆ ದುಡಿಯುತ್ತಾರೆ. ವಲಸೆ ಕಾರ್ಮಿಕರು ಸುಮಾರು ತಿಂಗಳು ಕೆಲಸವಿಲ್ಲದೆ ಕಷ್ಟ ಪಡುತ್ತಾರೆ ಇಂತಹ ಕಾರ್ಮಿಕರ ಮಕ್ಕಳು ಶಿಕ್ಷಣ ಹಾಗೂ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಇಂತಹ ಕಾರ್ಮಿಕರ ಮಕ್ಕಳು ಹಾಗೂ ಕುಟುಂಬಕ್ಕೆ ಸರ್ಕಾರ ಸಂಘ ಸಂಸ್ಥೆಗಳು ಸಹಾಯ ಸಹಕಾರ ಮಾಡಬೇಕು ಎಂದರು.
ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ಮಾಂಜುನಾಥ ಕ್ಷೌರದ ಎಲ್ಲ ಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ಹಂಚಿ ನಂತರ ಮಾತನಾಡಿದ ಅವರು ಕಾರ್ಮಿಕರ ಮಕ್ಕಳು ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದರು.ಪುರಸಭೆ ಮುಖ್ಯಧಿಕಾರಿ ಮಲ್ಲೇಶ್ ಆರ್ ಮಾತನಾಡಿದರು. ಈ ಸಂದರ್ಭದಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಚಂದ್ರ್ಪ ಸೊಬಟಿ, ತಾಲೂಕು ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಮಹೇಶ ಕಳಸದ, ಪ್ರಕಾಶ ಹರಿಗೊಂಡ,ಪ್ರಕಾಶ ಮೇಧಾರ ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಪೌರ ಕಾರ್ಮಿಕರು ಹಾಜರಿದ್ದರು
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 