ಶೀಘ್ರ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣ: ಶಾಸಕ ಕಾಗೆ

ಶೀಘ್ರ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣ: ಶಾಸಕ ಕಾಗೆ Work to fill lakes with water will be completed soon: MLA Kage

ಸಂಬರಗಿ 26: ಗಡಿ ಪ್ರದೇಶದ ಅನೇಕ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು ರಸ್ತೆ ಸಂಚಾರಕ್ಕೆ ಅನುಕೂಲವಾಗಿದೆ. ಗಡಿ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯೂ ಕೂಡ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಗಡಿ ಭಾಗದ ರೈತರಿಗೆ ಕೃಷಿಗೆ ನೀರು ಒದಗಿಸಲಾಗುವುದು. ನಾನು ಮಾತನಾಡಿದಂತೆಯೇ ನಡೆದುಕೊಳ್ಳುತ್ತೇನೆ, ಎಲ್ಲಾ ಗ್ರಾಮಗಳನ್ನು ಬರ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ನಿಗಮದ ಅಧ್ಯಕ್ಷ ರಾಜು ಕಾಗೆ ಹೇಳಿದರು. 

ಚಮಕೇರಿ ಬೇಡರಹಟ್ಟಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿಮಾತನಾಡಿದ ಅವರು ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತಿದೆ ಮತ್ತು ಮುಖ್ಯಮಂತ್ರಿಗಳು ನಮಗೆ 50 ಕೋಟಿ ವಿಶೇಷ ನಿಧಿಯನ್ನು ನೀಡಿದ್ದಾರೆ, ಅದರಲ್ಲಿ ಈ ರಸ್ತೆಗೆ ಒಂಬತ್ತು ಕೋಟಿ ಅನುದಾನವನ್ನು ಅನುಮೋದಿಸಲಾಗಿದೆ. ಕ್ಷೇತ್ರದ ಎಲ್ಲಾ ರಸ್ತೆಗಳಿಗೆ ಅಗತ್ಯ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.  

ಪ್ರಸ್ತುತ ಬರ ಪ್ರದೇಶದ ಕೆಲವು ಹಳ್ಳಿಗಳಿಗೆ ಖೀಳೀಗಾಂವ್ ಬಸವೇಶ್ವರ ಏತ ನೀರಾವರಿ ಯೋಜನೆಯ ನೀರು ತಲುಪಿದೆ. ಆದ್ದರಿಂದ ರೈತರು ಸಂತೋಷವಾಗಿದ್ದಾರೆ. ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ನಾನು ಈಡೇರಿಸಿದ್ದೇನೆ, ಆದ್ದರಿಂದ ಜನರು ನನ್ನ ಹಿಂದೆ ಬೆಂಬಲವಾಗಿ ನಿಂತಿದ್ದಾರೆ ಎಂದು ಅವರು ಸ್ಪಷ್ಟವಾಗಿ ಹೇಳಿದರು. 

ಬಸಗೌಡ ಪಾಟೀಲ, ಶಿವು ರಾಮತೀರ್ಥ, ಲಕ್ಷ್ಮಣ ಬಜಂತ್ರಿ, ವೈದ್ಯ ಸದಾಶಿವ ಬಜಂತ್ರಿ, ಬಸವರಾಜ ಮಾಳಿ, ಮಂಜುನಾಥ ಬಾಗೆ, ರಮೇಶ ಮಗದುಮ್, ಶರೀಫ್ ಮುಲ್ಲಾ, ರಫೀಕ್ ಪಟೇಲ್, ಅಭಿಯಂತರ ಮಲ್ಲಿಕಾರ್ಜುನ ಮಗದುಮ್, ಇಂಜಿನಿಯರ್ ವೀರಣ್ಣ ವಾಲಿ, ಗುತ್ತಿಗೆದಾರ ಮಗದುಮ್ ಸೇರಿದಂತೆ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.