ಹಿಂದುಳಿದ ಸಮಾಜದವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕು: ಬಿ.ಡಿ.ಪಾಟೀಲ್

ಹಿಂದುಳಿದ ಸಮಾಜದವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಆಗಬೇಕು: ಬಿ.ಡಿ.ಪಾಟೀಲ್ Work should be done to bring the backward communities into the mainstream: B.D. Patil

ತಾಂಬಾ 19: ಹಿಂದುಳಿದ ಸಮಾಜವನ್ನು ತುಳಿಯುವ ಪ್ರಯತ್ನ ಸಲ್ಲದು ಸಣ್ಣ ಸಣ್ಣ ಸಮಾಜಗಳು ಒಕ್ಕಟ್ಟಾಗಬೇಕು ಇದರಿಂದ ಸಮಾಜಕ್ಕೆ ಶಕ್ತಿ ಬರುವುದರ ಜೊತೆಗೆ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಸುಲಭವಾಗುತ್ತದೆ ಹಿಂದುಳಿದ ಸಮಾಜದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಎಲ್ಲರಿಂದಲೂ ಆಗಬೇಕು ಎಂದು ಜೆಡಿಎಸ್ ಮುಖಂಡ ಬಿ.ಡಿ.ಪಾಟೀಲ್ ಹೇಳಿದರು.  

ಬೆನಕನಹಳ್ಳಿ ಗ್ರಾಮದ ಶ್ರೀ ಲಕ್ಷ್ಮಿ ಹಾಗೂ ದುರ್ಗಾದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಕಲ್ಲು ಜಗ್ಗುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು ಆಧುನಿಕ ಯುಗದಲ್ಲಿ ಒತ್ತಡದಲ್ಲಿ ಬದುಕುತ್ತಿರುವವರಿಗೆ ಮಾನಸಿಕ ನೆಮ್ಮದಿ ಬೇಕಿದ್ದರಿಂದ ಇಂಥ ಜಾತ್ರೆಯಲ್ಲಿ ಪಾಲ್ಗೊಂಡು ದೈಹಿಕ ಕಸರತ್ತುಗಳನ್ನು ಮಾಡುವುದರಿಂದ ನಮ್ಮಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಜೀವನ ಪಾವನ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ ಪ್ರತಿನಿತ್ಯ ಅಧ್ಯಾತ್ಮದಲ್ಲಿ ತೊಡಗಿಕೊಳ್ಳುವುದರಿಂದ ಮನಸ್ಸು ಸುದ್ದಿಯಾಗುವುದರ ಜೊತೆಗೆ ಮನದ ಕಲ್ಮಶ ತೊಲಗಿ ಪರಿಶುದ್ಧ ಜೀವನ ನಡೆಸಲು ಸಾಧ್ಯವಾಗುತ್ತದೆ ನೆಮ್ಮದಿ ಮನುಷ್ಯನಿಗೆ ಅಮೃತಕ್ಕೆ ಸಮಾನವಾಗಿದ್ದು ಅದನ್ನು ಗಿಟ್ಟಿಸಲು ನಿತ್ಯ ಒಳ್ಳೆಯವರ ಸಂಘ ದೇವರ ಸ್ಮರಣೆಯಲ್ಲಿ ಹಾಗೂ ಅಧ್ಯಾತ್ಮದ ಅಗತ್ಯವಾಗಿದೆ ಒತ್ತಡದ ಬದುಕಿನಲ್ಲಿ ಮನುಷ್ಯ ತನ್ನ ನೆಮ್ಮದಿ ಕಳೆದುಕೊಂಡಿದ್ದಾನೆ ನೆಮ್ಮದಿ ಹಣ ಕೊಟ್ಟು ಕೊಂಡುಕೊಳ್ಳಲಿಕ್ಕೆ ಸಾಧ್ಯವಿಲ್ಲ ಅದಕ್ಕೆ ಬೆಲೆ ಕಟ್ಟಲಿಕ್ಕೆ ಸಾಧ್ಯವಿಲ್ಲ ಆಧ್ಯಾತ್ಮಿಕ ದಿಂದ ಮನುಷ್ಯ ಮಾನಸಿಕವಾಗಿ ಬಲಿಷ್ಠನಾಗಬಲ್ಲನು ಎಂದರು. 

ಹಾಲುಮತ ಸಮಾಜದ ಮುಖಂಡರಾದ ಮಹದೇವ ಪೂಜಾರಿ ಮಾತನಾಡಿ ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರವಾದದ್ದು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ರಾಜಕೀಯವಾಗಿ ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ ನಮ್ಮ ಸಮಾಜದ ಜೊತೆಗೆ ಸಣ್ಣ ಸಣ್ಣ ಸಮಾಜಗಳನ್ನು ಒಟ್ಟುಗೂಡಿಸಿಕೊಂಡು ಹಿಂದುಳಿದವರು ಅಲ್ಪಸಂಖ್ಯಾತರರು ದಲಿತರನ್ನು ನಮ್ಮ ಜೊತೆ ಕೂಡಿಸಿಕೊಂಡು ನಾವು ಎಲ್ಲರಿಗೂ ಸಮಾನವಾದ ನ್ಯಾಯ ಒದಗಿಸಲು ಪ್ರಯತ್ನಿಸಬೇಕು ಇದಕ್ಕೆ ಎಲ್ಲ ಯುವಕರು ಕೈಜೋಡಿಸಬೇಕೆಂದು ಕರೆ ನೀಡಿದರು ಗ್ರಾಮದ ಹಿರಿಯ ಮುಖಂಡರಾದ ಶಂಕರ್ ಮೇತ್ರಿ ಮಾತನಾಡಿದರು ಸಂಗಪ್ಪ ಅಂಕಲಿಗೆ ಕಾಸು ಹತಡದ ಶಾಮ್ ಪೂಜಾರಿ ಮಾಡುವ ಹೊಸಮನಿ ಜಗು ಸೋಮಾಗೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು ಡೊಳ್ಳಿನ ಪದಗಳ ಸ್ಪರ್ಧೆ ಹಾಗೂ ಗುಂಡು ಎತ್ತುವ ಸ್ಪರ್ಧೆಗಳನ್ನು ಏರಿ​‍್ಡಸಲಾಗಿತ್ತು ಅಂದೇ ರಾತ್ರಿ ಮಾತು ಕೇಳದ ಮಕ್ಕಳು ನೀತಿಗೆಟ್ಟ ಸೊಸೆ ಎಂಬ ನಾಟಕವನ್ನು ಏರಿ​‍್ಡಸಲಾಗಿತ್ತು ಹಾಗೂ ಕಲಾ ಸಿಂಚನ ಮೆಲೋಡಿಯಸ್ ಅವರಿಂದ ರಸಮಂಜರಿ ಕಾರ್ಯಕ್ರಮಗಳು ಜರುಗಿದವು ಇದಕ್ಕೂ ಮೊದಲು ರುದ್ರಾಭಿಷೇಕ ಉಡಿ ತುಂಬುವ ಕಾರ್ಯಕ್ರಮ ಹಾಗೂ ಅನೇಕ ವಾದ್ಯ ವೈಭವಗಳೊಂದಿಗೆ ಗ್ರಾಮದಲ್ಲಿ ದೇವಿಯ ಭವ್ಯ ಮೆರವಣಿಗೆ ಮಾಡಲಾಯಿತು.