ಕ್ಷೇತ್ರದ ಪ್ರತಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಕೆಲಸ ನಡೆದಿದೆ: ಪ್ರಕಾಶ ಹುಕ್ಕೇರಿ

ಕ್ಷೇತ್ರದ ಪ್ರತಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಕೆಲಸ ನಡೆದಿದೆ: ಪ್ರಕಾಶ ಹುಕ್ಕೇರಿ Work has been done to elevate every school in the constituency to a higher standard: Prakash Hukkeri

ಕ್ಷೇತ್ರದ ಪ್ರತಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಏರಿಸುವ ಕೆಲಸ ನಡೆದಿದೆ: ಪ್ರಕಾಶ ಹುಕ್ಕೇರಿ 

ಚಿಕ್ಕೋಡಿ 05: ಗುಣಮಟ್ಟದ ಶಿಕ್ಷಣವೇ ಸಮಾಜದ ಸಮಗ್ರ ಪ್ರಗತಿಗೆ ಆಧಾರ. ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಲಾಗಿದೆ. ಕ್ಷೇತ್ರದ ಪ್ರತಿಯೊಂದು ಶಾಲೆಯನ್ನೂ ಉತ್ತಮ ಸೌಕರ್ಯಗಳೊಂದಿಗೆ ಉನ್ನತ ಮಟ್ಟಕ್ಕೆ ಏರಿಸುವ ಕೆಲಸ ನಡೆದಿದೆ ಎಂದು ಕರ್ನಾಟಕದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು. 

ಪಟ್ಟಣದ ಪರಟಿ ನಾಗಲಿಂಗೇಶ್ವರ ಸಭಾಭವನದಲ್ಲಿ ನಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶಿಕ್ಷಣದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸಮರ​‍್ಕ ಅನುದಾನ ಒದಗಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರು ವಿಶೇಷ ಆಧ್ಯತೆ ನೀಡಿ ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಆಧ್ಯತೆ ನೀಡಿದ್ದಾರೆ ಎಂದರು. 

ಕ್ಷೇತ್ರದ ಅಭಿವೃದ್ಧಿಗೆ ಪ್ರತಿ ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಕೋಟಿ ರೂ ಅನುದಾನ ಶಾಸಕ ಗಣೇಶ ಹುಕ್ಕೇರಿ ಅವರಿಗೆ ಕೊಟ್ಟಿದ್ದಾರೆ. ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ-ಸದಲಗಾ ಕ್ಷೇತ್ರದ ಐದು ಶಾಲೆಗಳು ಉನ್ನತ್ತಿಕರಿಸಲಾಗಿದೆ. ಅವುಗಳ ಮೂಲಭೂತ ಸೌಕರ್ಯಕ್ಕಾಗಿ ಪ್ರತಿ ಶಾಲೆಗೆ 25 ಲಕ್ಷ ರೂ ಅನುದಾನ ಒದಗಿಸಿದ್ದಾರೆ ಎಂದರು. 

ಚಿಕ್ಕೋಡಿ-ಸದಲಗಾ ಕ್ಷೇತ್ರದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಜೊತೆಗೆ ಕ್ಷೇತ್ರದಲ್ಲಿ ಎರಡು ಕೇದ್ರೀಯ ವಿದ್ಯಾಲಯ ಮತ್ತು ಆರು ಮೋರಾರ್ಜಿ ವಸತಿ ಶಾಲೆ ಆರಂಭಿಸಲಾಗಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯಾಗಲಿದೆ. ಶಿಕ್ಷಕರ ಬೇಡಿಕೆಗೆ ಸರ್ಕಾರ ಬದ್ಧವಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಗಣೇಶ ಹುಕ್ಕೇರಿ ವಹಿಸಿ ಮಾತನಾಡಿ, ಶಿಕ್ಷಕರ ಸೇವೆ ಅಮೂಲ್ಯವಾದದ್ದು. ಅವರು ರೂಪಿಸುವ ಪೀಳಿಗೆ ಭವಿಷ್ಯದಲ್ಲಿ ದೇಶ ಕಟ್ಟುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು. 

ದಿವ್ಯ ಸಾನಿಧ್ಯವನ್ನು ಚರಮೂರ್ತಿಮಠದ ಸಂಪಾದನ ಸ್ವಾಮೀಜಿ ವಹಿಸಿದ್ದರು. 

ಈ ಸಂದರ್ಭದಲ್ಲಿ ಶೈಕ್ಷಣಿಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. 

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ತಹಶೀಲ್ದಾರ ರಾಜೇಶ್ ಬುರ್ಲಿ, ಡಿಡಿಪಿಯು ಪಿ.ಐ.ಭಂಡಾರಿ, ಡಯಟ ಪ್ರಾಚಾರ್ಯ ಸಂಜು ಹುಲ್ಲೋಳ್ಳಿ, ಬಿಇಒ ಪ್ರಭಾವತಿ ಪಾಟೀಲ,ಪುರಸಭೆ ಸದಸ್ಯರಾದ ರಾಮಾ ಮಾನೆ, ಗುಲಾಬ ಬಾಗವಾನ, ವರ್ತಕ ರವಿಂದ್ರ ಹಂಪನ್ನವರ, ಜಿಪಂ ಮಾಜಿ ಸದಸ್ಯ ಸುದರ್ಶನ ಖೋತ, ಬಾಬಣ್ಣ ಖೋತ, ನೌಕರರ ಸಂಘದ ನಿರ್ದೇಶಕ ಎ.ಎಸ್‌.ಸೊಲ್ಲಾಪೂರೆ, ಎಸ್‌.ಎನ್‌.ಬೆಳಗಾವಿ,  ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್‌.ಎಂ.ಲೋಕನ್ನವರ, ಶಿಕ್ಷಕರ ಸಂಘದ ಎನ್‌.ಜಿ.ಪಾಟೀಲ, ಜಿ.ಎಂ.ಕಾಂಬಳೆ, ವೈ.ಎಸ್‌.ಬುಡ್ಡಗೊಳ, ಎಸ್‌.ಎಸ್‌.ಧುಪದಾಳ, ಆರ್‌.ಕೆ.ಕಾಂಬಳೆ, ಡಿ.ಎಸ್‌.ಚಲವಾದಿ, ದಯಾನಂದ ಹಿರೇಮಠ, ಕಾವೇರಿ ಹಿಪ್ಪರಗಿ ಮುಂತಾದವರು ಇದ್ದರು. 

ಉಪನಿರ್ದೇಶಕ ಆರ್‌.ಎಸ್‌.ಸೀತಾರಾಮ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.