ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿ : ಪಟೇಲ್
Work for the all-round development of the Sangh: Patel
ಕೊಪ್ಪಳ 08: ಸಂಘದ ಸದಸ್ಯರ ಸಮಸ್ಯೆಗಳಿಗೆ ನೇರ ಸ್ಪಂದನೆ ನೀಡುವುದರ ಜೊತೆಗೆ ಅವರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಪ್ರಮಾಣಿಕವಾಗಿ ಕೆಲಸ ಮಾಡಿ ಹಾಗೂ ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಪಣ ತೊಟ್ಟು ಶ್ರಮಿಸಿ ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಸಲಹೆ ನೀಡಿದರು, ಕೊಪ್ಪಳ ಹಮಾಲರ ಬಂಡಿ ಬಸವೇಶ್ವರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡ ಖಾದರ್ ಸಾಬ್ ಪೈಮಾಶಿ ರವರನ್ನು ಸನ್ಮಾನಿಸಿ ಶುಭ ಕೋರಿ ಸಲಹೆ ನೀಡಿದರು, ಮುಂದುವರೆದು ಮಾತನಾಡಿ ಸಂಘದ ಸದಸ್ಯರಿಗೆ ಸಿಗಬಹುದಾದ ನ್ಯಾಯ ಸಮ್ಮತವಾದಂತ ಸಹಾಯ ಸಹಕಾರ ಮತ್ತು ಸರ್ಕಾರದ ಯೋಜನೆ ಗಳ ಲಾಭ, ಪರಿಹಾರ ಇತ್ಯಾದಿ ಅಗತ್ಯ ಸೌಕರ್ಯಗಳನ್ನು ಸಂಘದ ಸದಸ್ಯರಿಗೆ ಒದಗಿಸಿ ಕೊಡುವ ನಿಟ್ಟಿನಲ್ಲಿ ಸಂಘದ ಮುಖ್ಯಸ್ಥರಾಗಿರುವ ಅಧ್ಯಕ್ಷರು ಶ್ರಮಿಸಬೇಕು ಎಂದು ಹಮಾಲರ ಬಂಡಿ ಬಸವೇಶ್ವರ ಸಂಘದ ನೂತನ ಅಧ್ಯಕ್ಷ ಖಾದರ್ ಸಾಬ್ ಪೈಮಾಶಿ ರವರಿಗೆ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಕೊಪ್ಪಳದ ಹಿರಿಯ ಮುಖಂಡ ಅಮ್ಜದ್ ಪಟೇಲ್ ಸಲಹೆ ನೀಡಿದರು,ಈ ಸಂದರ್ಭದಲ್ಲಿ ನಗರದ ಶ್ರೀಶೈಲ್ ಪಂಚ್ ಕಮಿಟಿ ಅಧ್ಯಕ್ಷರಾದ ಅಕ್ಬರ್ ಸಾಬ್ ಪೋಲಿಸ್ ಮನಿ, ಸೈಯದ್ ಬಶೀರ್ ಅಹ್ಮದ್ ಅತ್ತಾರ್, ನಾಗರಾಜ್ ಮೇಟಿ, ರಫೀಕ್ ಜೆಸಿಬಿ ಸುಹೇಲ್ ಪಟೇಲ್ ಸೇರಿದಂತೆ ಪಟೇಲ್ ಅಭಿಮಾನಿ ಬಳಗದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು,
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 