ಜಕಾತರ್ಾ 20: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಬಾರತದ ಮಹಿಳಾ ಕುಸ್ತಿ ಪಟು ವಿನೇಶ್ ಪೋಗಟ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ನಿಮರ್ಿಸಿದ್ದಾರೆ.
ಏಷ್ಯನ್ ಗೇಮ್ಸ್ ಮಹಿಳೆಯರ ಫ್ರೀಸ್ಟೈಲ್ 50 ಕೆಜಿ ಕುಸ್ತಿ ವಿಭಾಗದಲ್ಲಿ ವಿನೇಶ್ ಚಿನ್ನದ ಪದಕ ಗಳಿಸಿದ್ದಾರೆ.
ಜಪಾನ್ ನ ಯೂಕಿ ಐರೀ ವಿರುದ್ಧ ವಿನೇಶ್ ಪೋಗಟ್ ಮೊದಲ ಸುತ್ತಿನಲ್ಲಿ 4-0 ಮುನ್ನಡೆ ಸಾಧಿಸಿದರೆ ಅಂತಿಮವಾಗಿ 6-2 ಅಂತರದ ಗೆಲುವು ಸಾಧಿಸಿದ್ದಾರೆ.
ಈ ಮುಖೇನ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ ಮೊದಲ ಮಹಿಳಾ ಕುಸ್ತಿಪಟುವಾಗಿ ವಿನೇಶ್ ಪೋಗಟ್ ದಾಖಲೆ ಬರೆದರು.
ಇನ್ನು ಇದೇ ವಿಬಾಗದಲ್ಲಿ ಸಾಕ್ಷಿ ಮಲಿಕ್, ಪೂಜಾ ಧಂಡಾ ಮತ್ತು ಸುಮಿತ್ ಮಲಿಕ್ ಅವರು ಕಂಚಿನ ಪದಕಕ್ಕಾಗಿ ಸ್ಪಧರ್ಿಸಲಿದ್ದಾರೆ.
ಕ್ರೀಡಾಕೂಟದಲ್ಲಿ ಭಾರತ ಒಟ್ಟಾರೆ ಐದು ಪದಕ ಗಳಿಸಿದ್ದು ಇದರಲ್ಲಿ ಎರಡು ಚಿನ್ನ, ಎರಡು ಬೆಳ್ಳಿ ಹಾಗೂ ಒಂದು ಕಂಚು ಸೇರಿದೆ.