ಕುರಿ ಸಾಕಾಣಿಕೆ ಮತ್ತು ಉದ್ದಿಮೆ ಬೆಳೆಸಲು ಮಹಿಳೆಯರು ಮುಂದಾಗಬೇಕು ಹಿ ಡಾ. ಬಾಲು ಅಥಣಿ

ಕುರಿ ಸಾಕಾಣಿಕೆ ಮತ್ತು ಉದ್ದಿಮೆ ಬೆಳೆಸಲು ಮಹಿಳೆಯರು ಮುಂದಾಗಬೇಕು ಹಿ ಡಾ. ಬಾಲು ಅಥಣಿ  Women should take the initiative to grow sheep farming and business, says Dr. Balu Athani

ಕುರಿ ಸಾಕಾಣಿಕೆ ಮತ್ತು ಉದ್ದಿಮೆ ಬೆಳೆಸಲು ಮಹಿಳೆಯರು ಮುಂದಾಗಬೇಕು ಹಿ ಡಾ. ಬಾಲು ಅಥಣಿ  

ರಾಣೆಬೆನ್ನೂರು 09: ಕುರಿ ಸಾಕಾಣಿಕೆ ಉದ್ದಿಮೆ ಹೆಚ್ಚು ಬೆಳೆಯುತ್ತಿದೆ. ಗ್ರಾಮೀಣ ಮಹಿಳೆಯರು ಉಣ್ಣೆಯಿಂದ 5 ನೂಲು ತೆಗೆದು ಕಂಬಳಿ ನೇಯ್ದೆ, ಇತರೆ ಉಪವಸ್ತುಗಳನ್ನು ತಯಾರಿಸುವುದು, ಈ ಮಾರುಕಟ್ಟೆ ತೊಂದರೆ, ಕಚ್ಚಾ ವಸ್ತುಗಳು ಕೊರತೆಯಿಂದಾಗಿ ಈ ಕುರಿ ಉಣ್ಣೆ ಮೂಲಕ ಮೌಲ್ಯವರ್ಧನೆ ವಸ್ತುಗಳನ್ನು ತಯಾರಿಸುವುದನ್ನೇ ನಿಲ್ಲಿಸಿದ್ದು, ಇದರಿಂದ ಉದ್ಯೋಗ ವಂಚಿತರಾಗಿ ದ್ದಾರೆ ಎಂದು ಬಾಗಲಕೋಟೆಯ ಪ್ಯೂಚರ್ ಗ್ರೀನ್ ಸಂಸ್ಥೆ ನಿರ್ದೇಶಕ ಡಾ.ಬಾಲು ಅಥಣಿ ಹೇಳಿದರು.  

ಯರೆಕುಪ್ಪಿ ರಸ್ತೆಯ ಬಳಿ ವಾಣಿಜ್ಯ ಮಳಿಗೆಯಲ್ಲಿ ಈಚೆಗೆ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಭೂಮಿಕಾ ರೈತ ಉತ್ಪಾದಕರ ಸಂಘದಿಂದ ಕುರಿ  ಉಣ್ಣೆಯಿಂದ ಮೌಲ್ಯವರ್ಧನೆ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ ಮತ್ತು ವಿಚಾರ ಸಂಕಿರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

ಬ್ಯಾಡಗಿಯ ಪಶು ಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ನೀಲಕಂಠ ಅಂಗಡಿ ಮಾತನಾಡಿ, ರೈತ ಉತ್ಪಾದಕರ ಸಂಘದಲ್ಲಿ ಕುರಿ ಸಾಕಾಣಿಕೆದಾರರು ಹಾಗೂ ನೂಲುವವರು ಷೇರುದಾರರಾಗಿ ಒಳ್ಳೆಯ ರೈತ ಉತ್ಪಾದಕ ಸಂಘದ ಮೂಲಕ ಪ್ರಯೋಜನ ಪಡೆಯಬೇಕು ಎಂದರು.  

ಬಂಕಾಪುರದ ತಳಿಸಂವರ್ಧನಾ ಕೇಂದ್ರದ ಸಹಾಯಕ ನಿರ್ದೇಶಕ ಪಶು ವೈದ್ಯ ಡಾ. ಎನ್‌. ಎಸ್‌. ಚೌಡಾಳ ಅವರು ಮಾತನಾಡಿ, ಕುರಿ ಸಾಕಾಣಿಕೆದಾರರನ್ನು ಒಂದು ಸಂಘಟನೆ ಮಾಡಿ, ಅವರಿಗೆ ವಿವಿಧ ತರಬೇತಿ ನೀಡಬೇಕು. ಡಕಣಿ ತಳಿ ಕುರಿಗಳನ್ನು ಸಾಕಾಣಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದರು.  

ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಎಸ್‌.ಡಿ.ಬಳಿಗಾರ ಮಾತನಾಡಿ, ಸಹಭಾಗಿ ಸಂಘ ಸಂಸ್ಥೆಗಳ ಮೂಲಕ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಕುರಿ., ಆಡು, ಕೋಳಿ ಸಾಕಾಣಿಕೆ ಹಾಗೂ ಉಪಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಿ ಸಂಘವು ತನ್ನ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ವನಸಿರಿ ಸಂಸ್ಥೆಯು ಭೂಮಿಕಾ ಹಾಗೂ ಕಾಂತೇಶ ರೈತ ಉತ್ಪಾದಕರ ಕಂಪನಿ ಕಟ್ಟಿದೆ. ಇದಕ್ಕೆ ಬೆಂಬಲ ನೀಡುತ್ತದೆ ಎಂದರು. ಭೂಮಿಕಾ ಸಂಘದ ಅಧ್ಯಕ್ಷ ಬಸವರಾಜ ಐರಣಿ, ಹನುಮಂತಪ್ಪ ಮಣ್ಣಮ್ಮನವರ, ಮಲ್ಲಮ್ಮ ಹಾಗೂ ವಿವಿಧ ಗ್ರಾಮಗಳ ನೂಲು ನೇಯುವ  ಮಹಿಳೆಯರು ಪಾಲ್ಗೊಂಡಿದ್ದರು.