ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ದೇಶದ ಅಭಿವೃದ್ಧಿಗೆ ಕಾರ್ಯಗಳಲ್ಲಿ ಭಾಗವಹಿಸಬೇಕು

ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ದೇಶದ ಅಭಿವೃದ್ಧಿಗೆ ಕಾರ್ಯಗಳಲ್ಲಿ ಭಾಗವಹಿಸಬೇಕು Women should not be confined to the kitchen but should participate in the development of the country

ಲೋಕದರ್ಶನ ವರದಿ 

ಬ್ಯಾಡಗಿ  27: ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಸಮಾಜದ ಮುಖ್ಯ ವಾಹಿನಿಯಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾಗುವ ಕಾರ್ಯಗಳಲ್ಲಿ ಭಾಗವಹಿಸಬೇಕು ಎಂದು ನವ ಚೈತನ್ಯ ಶಿಕ್ಷಣ ಸಂಸ್ಥೆಯ ಪ್ರಿನ್ಸಿಪಾಲ ಶಿವಜ್ಯೋತಿ ಹೇಳಿದರು.ಪಟ್ಣಣದ ತಾಲೂಕ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ನಡೆದ ಬ್ಯಾಡಗಿ ಇನ್ನರ್ ವೀಲ್ ಕ್ಲಬ್ನ 5 ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಮಹಿಳೆಯರು ಸಮಾಜ ಸೇವೆಗಾಗಿ ಇಂತಹ ಉತ್ತಮ ಸಂಘಟನೆಗಳ ಮೂಲಕ ಬಡ ಜನರ ಸೇವೆ ಮಾಡುತ್ತಿರುವದು ಶ್ಲಾಘನಿಯವಾಗಿದೆ ಎಂದರು.ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಮೇಲಗಿರಿ ಮಾತನಾಡಿ ಇನ್ನರ್ ವೀಲ್ ಕ್ಲಬ್ ಪಟ್ಟಣ ಹಾಗೂ ತಾಲೂಕಿನಲ್ಲಿ ಹಲವಾರು ಕಾರ್ಯಗಳನ್ನು ಮಾಡಿದೆ. ಶಿಕ್ಷಣ ಅರೋಗ್ಯ ಪರಿಸರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದೆ