ಮಹಿಳೆಯರು ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು: ಶಾಸಕ ರಾಜು ಕಾಗೆ
Women should make good use of the schemes and lead a self-reliant life: MLA Raju Kage
ಕಾಗವಾಡ, 22 : ರಾಜ್ಯ ಸರಕಾರ ಮಹಿಳೆಯರು ಯಾರ ಮೇಲೂ ಅವಲಂಬಿತರಾಗದೆ ಸರ್ಕಾರದ ಯೋಜನೆಗಳು ಪಡೆದುಕೊಂಡು ಸ್ವಾವಲಂಬಿಯಾಗಿ ಬದುಕು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸದುಪಯೋಗ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಶಾಸಕ ರಾಜು ಕಾಗೆ ಹೇಳಿದರು.
ಅವರು ಶುಕ್ರವಾರ ಕಾಗವಾಡ ಪಟ್ಟಣ ಪಂಚಾಯತಿಯಲ್ಲಿ ಆಯೋಜಿಸಿದ. ಸನ್ 2024-25 ರಲ್ಲಿ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆ ಹಂತ 4ರ ಅಡಿಯಲ್ಲಿ 314 ಹೊಲಿಗೆ ಯಂತ್ರಗಳು ಹಾಗೂ ಎಸ್ ಎಫ್‌ಸಿ ಮುಕ್ತ ನಿಧಿ ಅನುದಾನ ಅಡಿಯಲ್ಲಿ ಮಂಜೂರಾದ, ಮುಕ್ತಿ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ರಾಜ್ಯ ಸರ್ಕಾರ ಪ್ರತಿಯೊಂದು ಪಟ್ಟಣಗಳಲ್ಲಿ ಶುದ್ದ ಕುಡಿಯುವ ನೀರು, ಒಳ್ಳೆಯ ರಸ್ತೆ, ಚರಂಡಿ, ವಿದ್ಯುತ ದೀಪ ವ್ಯವಸ್ಥೆ ಮೂಲಭೂತ ಸೌಕರ್ಯಗಳು ನಿರುದ್ಯೋಗ ಯುವಕರಿಗೆ ಹಾಗೂ ಮಹಿಳೆಯರಿಗೆ ಎಂದೇ ಹಲಾವರು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಸರ್ಕಾರದಿಂದ ಪಟ್ಟಣ ಪಂಚಾಯತಿಗೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಕಾಕಾ ಪಾಟೀಲ ಶಾಂತಿನಾಥ ಕರವ, ಪ್ರಕಾಶ ಪಾಟೀಲ, ಕಾಕಾ ಪಾಟೀಲರನ್ನು ಶಾಸಕ ರಾಜು ಕಾಗೆ ಸನ್ಮಾನಿಸಿದರು.ಈ ಸಂದರ್ಭದಲ್ಲಿ ತಹಶಿಲ್ದಾರ ರಾಜೇಶ ಬುರ್ಲಿ, ಪಟ್ಟಣ ಪಂಚಾಯತಿ ಮುಖ್ಯಧಿಕಾರ, ಕೆ ಕೆ ಗಾವಡೆ, ಶಂಕರ ವಾಗಮೋಡೆ ಮುಖಂಡರು ಸೌರಭಪಾಟೀಲ ಜ್ಯೋತಿಕುಮಾರ ಪಾಟೀಲ, ರಮೇಶ ಚೌಗಲಾ, ಚಿದಾನಂದ್ ಅವಟಿ, ಪ್ರಕಾಶ ಪಾಟೀಲ, ಪದ್ಮನಾಥ ಕರವ, ಪವನ ಪಾಟೀಲ, ವಿದ್ಯಾದರ್ ದೊಂಡಾರೆ, ಅಶೋಕ್ ಕಾಂಬಳೆ, ಮಹಾಂತೇಶ ಬಡಿಗೇರ, ಶಂಕರ ಕಾಂಬಳೆ,ಜಯಪಾಲ ಬಡಿಗೇರ, ಸುಭಾಷ ತುಪಳೆ ಸೇರಿದಂತೆ ಅನೇಕರು ಇದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 