ಮಹಿಳೆ ತಮ್ಮ ಜ್ಞಾನ ಮತ್ತು ಕೌಶಲ್ಯಗಳ ಮೂಲಕ ಮುಂಚೂಣಿಗೆ ಬರಬೇಕು : ಪರಿಮಳ ಜೈನ್
Women should come to the forefront through their knowledge and skills: Parima Jain
ಶಿಗ್ಗಾವಿ 18 : ಮಹಿಳೆಯರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅಳವಡಿಸಿಕೊಂಡು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕು ಎಂದು ಬೆಂಗಳೂರ ಅಲ್ಪಸಂಖ್ಯಾತ ಆಯೋಗದ ಸದಸ್ಯೆ ಪರಿಮಳ ಜೈನ್ ಹೇಳಿದರು. ಪಟ್ಟಣದ ಶಂಕರಗೌಡ್ರ ಕಲ್ಯಾಣ ಮಂಟಪದಲ್ಲಿ ಜೆಸಿಐ ಶಿಗ್ಗಾವಿ ಸಂಸ್ಥೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪುರುಷ ಸಮಾಜ ಮಹಿಳೆಯರನ್ನು ಗೌರವಿಸಬೇಕು ಅಲ್ಲದೇ ಪ್ರತಿಯೊಂದು ರಂಗದಲ್ಲಿ ಮಹಿಳೆಯರಿಗೆ ಸಹಕಾರಿಯಾಗಿ ಪ್ರೋತ್ಸಾಹಿಸುವ ಕೆಲಸವಾಗ ಬೇಕು ಮತ್ತು ಮಹಿಳೆಯರಿಗೆ ಯಾವುದೇ ಸವಾಲುಗಳ ಎದುರಾದರೆ ಅವುಗಳನ್ನು ಆತ್ಮವಿಶ್ವಾಸದಿಂದ ಧೈರ್ಯವಾಗಿ ಎದುರಿಸಬೇಕು ಎಂದರು.
ವಚನ ನಿಧಿ ವನಿತಾ ಸಂಘದ ಅಧ್ಯಕ್ಷೆ ಜೆಸಿ ಡಾ ಲತಾ ನಿಡಗುಂದಿ ಮಾತನಾಡಿ ಮಹಿಳೆಯರ ಆರೋಗ್ಯ ಸದೃಡವಾದರೆ ಇಡಿ ಕುಟುಂಬವೇ ಸದೃಡವಾಗಿರುತ್ತದೆ ಅಲ್ಲದೇ ಹಲವಾರು ಸೂಕ್ಷ್ಮ ವಿಚಾರಗಳನ್ನು ಅರ್ಥೈಸಿ ಆರೋಗ್ಯ ಕಾಳಜಿವಹಿಸುವಂತೆ ಕಿವಿಮಾತು ಹೇಳಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಘಟಕದ ಸದಸ್ಯೆ ಸರೋಜಾ.ಎಂ. ಹರಿಜನ ಮಾತನಾಡಿದರು.
ಜೆಸಿಐ ಶಿಗ್ಗಾವಿ ಘಟಕದ ಅಧ್ಯಕ್ಷೆ ಜೆಸಿ ಅನುಪಮಾ ಡಿ ತೋಟಿಗೇರ ಮಾತನಾಡಿ ಮಹಿಳೆ ಕೇವಲ ಅಡುಗೆ ಮನೆಗೆ ಸೀಮಿತವಾಗಿರದೆ ಪ್ರಪಂಚದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನುತಾವುತೊಡಗಿಸಿಕೊಂಡು ಮುಂಚೂಣೆಯಲ್ಲಿ ಇರಬೇಕೆಂದು ಎಂದರು. ಜೆಸಿ ಡಾ. ಚಂದ್ರಿಕಾ ಪಾಟೀಲ ಜೆಸಿ ವಾಣಿ ಹೇಳಿದರು, ಜೆಸಿ ರಂಜನಾ ಓಂಧಕರ ಸ್ವಾಗತಿಸಿದರು, ಜೆಸಿ ಪೂರ್ಣಿಮಾ ಬಳೆಗಾರ ವಂದಿಸಿದರು. ಈ ಸಂದರ್ಭದಲ್ಲಿ ಜೆಸಿಐ ಶಿಗ್ಗಾವಿ ಘಟಕದ ಎಲ್ಲಾ ಪೂರ್ವ ಅಧ್ಯಕ್ಷರು, ಸದಸ್ಯರು, ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 