ಸಾಮಾನ್ಯನನ್ನೂ ಸಂತನಾಗಿಸುವ ಶಕ್ತಿ ಸ್ತ್ರೀಗಿದೆ: ಪ್ರಕಾಶ ಮಲ್ಫೆ

ಸಾಮಾನ್ಯನನ್ನೂ ಸಂತನಾಗಿಸುವ ಶಕ್ತಿ ಸ್ತ್ರೀಗಿದೆ: ಪ್ರಕಾಶ ಮಲ್ಫೆ Women have the power to make even ordinary people saints: Prakash Malfe

ಮಹಾಲಿಂಗಪುರ 30 : ಮಹಾಲಕ್ಷ್ಮಿಯಾಗಿ ಬಂದು ಬಡತನವನ್ನು, ಸರಸ್ವತಿಯಾಗಿ ಬಂದು ಅಜ್ಞಾನವನ್ನು, ದುರ್ಗೆಯಾಗಿ ಬಂದು ದುಷ್ಟರ ಸಂಹಾರವನ್ನು ಮಾಡುವ ಮಹಾಕಾಳಿ, ಮಹಾಸರಸ್ವತಿಯರ ಅಪರಾವತಾರವೇ ನಮ್ಮ ಸ್ತ್ರೀಯರು, ಸರ್ವ ಸ್ತ್ರೀಯರು ಮಹಾಕಾಳಿಯ ಅವತಾರವಾಗಿದ್ದಾರೆ, ಕಾಳಿಯ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಬೇಕು  ಎಂದು ಉಡುಪಿಯ ಖ್ಯಾತ ವಾಗ್ಮಿ ಪ್ರಕಾಶ ಮಲ್ಪೆ ಹೇಳಿದರು. 

ಸ್ಥಳೀಯ ಬನಶಂಕರಿ ಸಾಂಸ್ಕೃತಿಕ ಭವನದಲ್ಲಿ ಶ್ರೀ ಬನಶಂಕರಿ ದೇವಸ್ಥಾನ ಆಡಳಿತ ಮಂಡಳಿ, ದೇವಾಂಗ ಹಟಗಾರ ಯುವಕ ಸಂಘ, ಸಾಂಸ್ಕೃತಿಕ ಉತ್ಸವ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆಯುತ್ತಿರುವ ಶ್ರೀ ದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಭಾರತೀಯ ನಾರಿ ನಮ್ಮ ಸಂಸ್ಕೃತಿಯ ರಾಯಭಾರಿ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, ಇಡೀ ಬ್ರಹ್ಮಾಂಡವನ್ನೇ ಅರ್ಥ ಮಾಡಿಕೊಳ್ಳುವ ಶಕ್ತಿ ಸಾಮರ್ಥ್ಯ ನಮ್ಮ ತಾಯಂದಿರಿಗೆ ಮಾತ್ರವಿದೆ ಹಾಗಾಗಿ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸ್ತ್ರೀಗೆ ಉನ್ನತ ಸ್ಥಾನಮಾನಗಳಿದ್ದವು ಆದರೆ ಪರಕೀಯರು ಭಾರತದಲ್ಲಿ ಸ್ತ್ರೀಗೆ ಸ್ವಾತಂತ್ರ್ಯವಿಲ್ಲವೆಂದು ಅಪಪ್ರಚಾರ ಮಾಡಿ ಆ ಮೂಲಕ ಭಾರತದ ಶಕ್ತಿಯನ್ನು ಕುಂದಿಸುವ ಷಡ್ಯಂತ ಪ್ರಾಚೀನ ಕಾಲದಿಂದಲೂ ಇಂದಿನವರೆಗೂ ನಡೆಯುತ್ತಿದೆ ಆದರೂ ಭಾರತ ಭಾರತವಾಗಿಯೇ ಉಳಿದಿದೆ.ಮೂರು ಸಾವಿರಕ್ಕೂ ಅಧಿಕ ವರ್ಷ ಪರಕೀಯರ ಆಕ್ರಮಣವಾದರೂ ಭಾರತ ಅಲುಗಾಡದೆ ಉಳಿದಿದೆಯೆಂದರೆ ಇದಕ್ಕೆ ನಮ್ಮ ದೇಶದ ಸ್ತ್ರೀಶಕ್ತಿ ಕಾರಣ, ವೇದ ಜ್ಞಾನಕ್ಕಿಂತ ಸ್ತ್ರೀಯ ಅನುಭಾವ ಶಕ್ತಿ ಅಸಾಮಾನ್ಯ, ಸಾಮಾನ್ಯ ಗಂಡನನ್ನೂ ಸಂತನನ್ನಾಗಿಸುವ ಶಕ್ತಿ ಸ್ತ್ರೀಗಿದೆ ಎಂದರು. 

ಗೋವುಗಳ ಜೊತೆ ಇದ್ದರೆ ನೀವೂ ಭಗವದ್ಗೀತೆ ಬೋಧನೆ ಮಾಡಬಹುದು ಎಂದು ಶ್ರೀ ಕೃಷ್ಣ ಪರಮಾತ್ಮನ ಮಾತನ್ನು ಉಲ್ಲೇಖಿಸಿ ಗೋವಿನ ಮಹತ್ವ ಮತ್ತು ಸಂರಕ್ಷಣೆ ಬಗ್ಗೆ ತಿಳಿಸಿದರು. 

ಪುರಸಭಾ ಸದಸ್ಯರಜವಳಗಿ ಸ್ವಾಗತಿಸಿ, ಅರ್ಜುನ್ ಪವಾರ ಪರಿಚಯಿಸಿದರು. ಮೈಂದರಗಿಯ ಮೃತ್ಯುಂಜಯ ಸ್ವಾಮಿಗಳು ಆಶೀರ್ವಚನ ನೀಡಿದರು. 

ಮುಖಂಡರಾದ ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ,ಡಾ.ಬಿ.ಡಿ.ಸೊರಗಾವಿ, ಸಿದಗಿರೆಪ್ಪ ಕಾಗಿ, ಪ್ರಭು ಬೆಳಗಲಿ, ಶಂಕರ ಅಂಬಿ, ಲಕ್ಕಪ್ಪ ಚಮಕೇರಿ, ವೆಂಕಣ್ಣ ಸಂಶಿ, ರಾಜು ಚಮಕೇರಿ, ಶ್ರೀಶೈಲ ಕಿರಗಟಗಿ,  ಶ್ರೀಶೈಲ ರೊಡ್ಡಣ್ಣವರ ,ನಾರಾಯಣ ಕಿರಗಿ, ಗುರುಪಾದ ಅಂಬಿ, ಶಿವಾನಂದ ಕಿತ್ತೂರ, ಸಂಜಯ ಜಮಖಂಡಿ, ಸತೀಶ ಸೊರಗಾವಿ, ಈಶ್ವರ ವಂದಾಲ, ಶ್ರೀಶೈಲ ನುಚ್ಚಿ, ಚನ್ನಪ್ಪ ಪಟ್ಟಣಶೆಟ್ಟಿ, ಮಹಾಲಿಂಗಪ್ಪ ಜಕ್ಕಣ್ಣವರ, ಸತ್ಯಪ್ಪ ಹುದ್ದಾರ, ಮಹೇಶ ಇಟಕನ್ನವರ, ಮಹಾಲಿಂಗಪ್ಪ ಬಾಡಗಿ,ಸಿದ್ದಪ್ಪ ಕಿಶೋರಿ, ವಿಠ್ಠಲ್ ಸಂಶಿ, ಕಲ್ಲಪ್ಪ ಚಿಂಚಲಿ, ಈರಣ್ಣ ಹಲಗತ್ತಿ, ಎಂ ಆರ್ ತೇರದಾಳ ಇದ್ದರು. ಬಿ.ಸಿ.ಪೂಜಾರಿ ಜಿ.ಎಸ್‌.ಗೊಂಬಿ ನಿರೂಪಿಸಿದರು