ಮಹಿಳೆ ಕುಟುಂಬದ ಆಧಾರ ಸ್ತಂಭ: ಡಾ.ಅಮೃತಾ

Women are the pillars of the family: Dr. Amrita

ತಾಳಿಕೋಟಿ  2 : ಇಂದು ಭಾರತದ ಸಂಸ್ಕೃತಿ ಹಾಗೂ ಪರಂಪರೆ ಕುರಿತು ಇಡೀ ವಿಶ್ವದಲ್ಲಿ ಚರ್ಚೆಗಳು ನಡೆಯುತ್ತಿವೆ ನಮ್ಮ ಪರಂಪರೆಯಲ್ಲಿ ಮಹಿಳೆಗೆ ಉನ್ನತ ಸ್ಥಾನವನ್ನು ನೀಡಲಾಗಿದೆ ಅವಳನ್ನು ದೇವತಾ ಸ್ವರೂಪಿ ಎಂದು ಕರೆಯಲಾಗಿದೆ, ಒಂದು ಸದೃಢ ಸಮಾಜದ ನಿರ್ಮಾಣದಲ್ಲಿ ಅವಳ ಪಾತ್ರ ಮಹತ್ವಪೂರ್ಣವಾಗಿದೆ ಎಂದು ಸೇಡಂ ಪಿಯು ಕಾಲೇಜ ಪ್ರಾಚಾರ್ಯ  ಡಾ. ಅಮೃತಾ ಎಸ್ ಮಾಮಾಜಿ ಹೇಳಿದರು.

ತಾಲೂಕಿನ ನಾವದಗಿ ಬ್ರಹನ್ಮಠದ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರವರ ಗುರು ಪಟ್ಟಾಧಿಕಾರ ಮಹೋತ್ಸವದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಹಮ್ಮಿಕೊಂಡ ಮಹಿಳಾ ಗೋಷ್ಠಿಯಲ್ಲಿ ಉಪನ್ಯಾಸಕಿ ಯಾಗಿ ಆಗಮಿಸಿ ಮಾತನಾಡಿದ ಅವರು ಮಹಿಳೆ ಇಲ್ಲದ ಸಮಾಜದ ಪರಿಕಲ್ಪನೆ ಅಸಾಧ್ಯ, ಅವಳಿಗೆ ಬಹಳಷ್ಟು ಜವಾಬ್ದಾರಿಗಳಿವೆ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ನೀಡುವುದು ಅವಳ ಕರ್ತವ್ಯವಾಗಿದೆ, ಇವತ್ತು ಪಾಶ್ಚಾತ್ಯ ದೇಶಗಳ ಪ್ರಭಾವದಿಂದಾಗಿ ನಾವು ನಮ್ಮಮೂಲ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಇಡೀ ವಿಶ್ವ ನಮ್ಮ ಕಡೆಗೆ ನೊಡುತ್ತಿದೆ ಎಂಬುದನ್ನು ನಾವ್ಯಾರೂ ಮರೆಯಬಾರದು ಎಂದ ಅವರು ಇಂಥಹ ಕಾರ್ಯಕ್ರಮವನ್ನು ಆಯೋಜಿಸಿರುವ ಮಠದ ಕಾರ್ಯ ಶ್ಲಾಘನೀಯವಾದದ್ದು ಎಂದರು. ಇಂಗಳೇಶ್ವರ ವಚನಶಿಲಾ ಮಂಟಪದ ಪರಮ ಪೂಜ್ಯ ಚನ್ನಬಸವ ಮಹಾಸ್ವಾಮಿಗಳು ಹಾಗೂ ಪಡೇಕನೂರದ ಪೂಜ್ಯಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ತಮ್ಮ ಆಶೀರ್ವಚನದಲ್ಲಿ ನಮ್ಮ ತಾಯಿಂದಿರು ತಮ್ಮ ಸ್ಥಾನ ಹಾಗೂ ಜವಾಬ್ದಾರಿಯನ್ನು ಎಂದೂ ಮರೆಯಬಾರದು ಏಕೆಂದರೆ ಸಮಾಜಕ್ಕೆ ಶ್ರೇಷ್ಠ ವ್ಯಕ್ತಿಗಳು ಸಿಗುವುದು ಅವರ ಉದರಗಳಿಂದಲೇ ನಾವದಗಿ ಪೂಜ್ಯರು ಭಕ್ತರನ್ನು ಸಂಸ್ಕರಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಅವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.ಬಳಗಾನೂರದ ಶರಣೆ ಮಂಜುಳಾ ಅಮ್ಮನವರು ಹಾಗೂ ಕೊಡಗಾನೂರು ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಮಲಕನಗೌಡ ಪಾಟೀಲ ಸಮಯೋಚಿತವಾಗಿ ಮಾತನಾಡಿದರು. ಮಠದ ಪೀಠಾಧಿಪತಿ ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

ವೇದಿಕೆಯಲ್ಲಿ ವಡವಡಗಿಯ ಪೂಜ್ಯ ವೀರಸಿದ್ದ ಮಹಾಸ್ವಾಮಿಗಳು ಗುಂಡಲಗೇರಿಯ ರೇಣುಕಾ ಅಮ್ಮನವರು, ನಾವದಗಿ ಗ್ರಾಮದ ಗಣ್ಯರು ಹಿರಿಯರು ಇದ್ದರು. ಹುಣಸಗಿ ಸಂಗೀತ ಪಾಠಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಡಾ.ಸೋಮಶೇಖರ ಹಿರೇಮಠ ಸ್ವಾಗತಿಸಿ ನಿರೂಪಿಸಿದರು. ವಿರೇಶ ಹಿರೇಮಠ ವಂದಿಸಿದರು.