ಮಹಿಳೆ ಅಬಲೆ ಅಲ್ಲ ಸಬಲೇ: ಸಚಿವ ಶಿವಾನಂದ್ ಪಾಟೀಲ

ಮಹಿಳೆ ಅಬಲೆ ಅಲ್ಲ ಸಬಲೇ: ಸಚಿವ ಶಿವಾನಂದ್ ಪಾಟೀಲ Women are not helpless, they are capable: Minister Shivanand Patil

ಬ್ಯಾಡಗಿ  03: ಮಹಿಳೆ ಅಬಲೆ ಅಲ್ಲ, ಸಬಲೆ, ಅಷ್ಟೇ ಅಲ್ಲ ಪ್ರಭಲೆ ಕೂಡ ಎಂಬುದನ್ನು ಇಂದಿನ ಮಹಿಳೆ ಸಾಧಿಸಿ ತೋರಿಸಿದ್ದಾಳೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜವಳಿ ಕಬ್ಬು ಅಭಿವೃದ್ಧಿ ಸಕ್ಕರೆ  ಕೃಷಿ  ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ  ಹೇಳಿದರು.ತಾಲೂಕಿನ ಚಿಕ್ಕಬಾಸುರು ಗ್ರಾಮದ ಸರ್ಕಾರಿ ಪದವಿ ದರ್ಜೆ ಮಹಾವಿದ್ಯಾಲಯದಲ್ಲಿ 1.5 ಕೋಟಿ ವೆಚ್ಚದಲ್ಲಿ ನೂತನ ಅಡಿಟೋರಿಯಂ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿವರು .ಇಂದಿನ ಮಹಿಳೆಯರು ಭವ್ಯ ಭಾರತವನ್ನು ಬೆಳಗು ಅಡಿಪಾಯಗಳಾಗಿ, ಪ್ರತಿಯೊಬ್ಬರು ಸಾಕ್ಷರರಾಗಬೇಕು. ಸಾಕ್ಷರರನ್ನಾಗಿಸೋಣ. ಆ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ನಿರಂತರವಾಗಿರಲಿ, ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಹೆಚ್ಚು ಒತ್ತು ನೀಡಲಾಗುವುದು. 

ಗ್ರಾಮೀಣ ಭಾಗದ ಮಕ್ಕಳಿಗೆ ಸುಲಭವಾಗಿ ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಹೆಚ್ಚು  ಒತ್ತು ನೀಡಲಾಗುವುದು ಪ್ರತಿಯೊಂದು ವರ್ಗದವರಿಗೂ ಶಿಕ್ಷಣ ಸಿಗುವ ಕೆಲಸ ಆಗಬೇಕು ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ತಾವು ಕಲಿತು ತಾವು ಕಲಿತ ವಿದ್ಯೆಯನ್ನು ಮುಂದಿನವರಿಗೆ ಧಾರೆ ಎರೆಯುವ ಕೆಲಸ ಆಗಬೇಕು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜಿಸುವ ಕೆಲಸ ನಮ್ಮ ಸರ್ಕಾರ ಮಾಡಲಿದೆ ಎಂದರು. ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ವಿದ್ಯೆಯನ್ನು ಕಲೆತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ವಿದ್ಯಾಲಯ ಇದಾಗಿದ್ದು ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆ ಯಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯವ ಮೂಲಕ ಕಾಲೇಜುಗಳ ಉಳಿಸುವ ಕೆಲಸ ಆಗಬೇಕು. 

ಮತ್ತು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಲು ಸೂಚಿಸುವರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಪ್ಪನವರ್‌. ಅಸಿಸ್ಟೆಂಟ್ ಕಮಿಷನರ್ ಕಾಂಬಳೆ. ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ .ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ. ಗ್ಯಾರಂಟಿ ಅಧ್ಯಕ್ಷ ಶಂಭನಗೌಡ ಪಾಟೀಲ.ರುದ್ರಣ್ಣ ಹೊಂಕಣದ. ವೀರಭದ್ರ​‍್ಪ ಗೊಡಚಿ.ಜಗದೀಶ ಕಣಗಿಲಬಾವಿ. ಗುತ್ತಿಗೆದಾರರಾದ ಸಂದೇಶ ಪಾಟೀಲ್ ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಗ್ರಾಮದ ಮುಖಂಡರು ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಉಪನ್ಯಾಸಗಳು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.