ಮಹಿಳಾ ಉದ್ಯೋಗ ಮೇಳ - 2024

Women Job Fair - 2024

ಧಾರವಾಡ 15: ಕೇವಲ ಮಹಿಳೆಯರಿಗಾಗಿ ಮೀಸಲಾದ ಈ ಉದ್ಯೋಗಮೇಳದ ವೈಶಿಷ್ಟ್ಯವೆಂದರೇ, ಯಾವುದೇ ವಿದ್ಯಾರ್ಹತೆ ಇಲ್ಲದ ಮಹಿಳೆಯರಿಂದ ಉನ್ನತ ಶಿಕ್ಷಣ ಪಡೆದ ಮಹಿಳೆಯರವರೆಗೂ ಉದ್ಯೋಗಾವಕಾಶಗಳಿವೆ. ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸಹ ಮಹಿಳೆಯರಿಗಾಗಿ ಸ್ವ-ಉದ್ಯೋಗ ಸ್ವ-ಸಹಾಯ ಗುಂಪುಗಳ ಪರಿಕಲ್ಪನೆ ಮೂಲಕ ಸ್ತ್ರೀ-ಸಬಲೀಕರಣಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಕಾರ್ಯದ ಸ್ಪೂರ್ತಿಯಿಂದ  ರಾ​‍್ಯಪಿಡ್ ಸಂಸ್ಥೆಯೊಡನೆೆ ಜಂಟಿಯಾಗಿ ಈ ಉದ್ಯೋಗಮೇಳವನ್ನು ಆಯೋಜಿಸುತ್ತಿದ್ದೇವೆ ಎಂದು ಮಹಿಳಾ ಉದ್ಯೋಗಮೇಳವನ್ನು ಉದ್ಘಾಟಿಸಿ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು.  

ಉದ್ಯೋಗ ಅವಶ್ಯವಿರುವ ಮಹಿಳೆ ಯಾವುದೇ ಸಂಕೋಚವಿಲ್ಲದೆ ಮನೆಯಿಂದ ಹೊರಬಂದು ತಮಗೆ ಸೂಕ್ತವಾದ ಉದ್ಯೋಗ ಆರಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಬೇಕು. ಈ ಮೇಳದಲ್ಲಿ 46 ಕಂಪನಿಗಳಲ್ಲಿ 5000 ಕ್ಕಿಂತಲೂ ಹೆಚ್ಚಿನ ಉದ್ಯೋಗಗಳಿಗಾಗಿ ಸಂದರ್ಶನ ನಡೆಸಲಿವೆ ಹೇಳಿದರು. ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಪದೇ ಪದೇ ಉದ್ಯೋಗ ಬದಲಿಸಬೇಡಿ ಉದ್ಯೋಗದಾತರ ವಿಶ್ವಾಸ ಬೆಳೆಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲ ಸಚಿವರಾದ ಅನುರಾಧ ವಸ್ತ್ರದವರು ಮಾತನಾಡಿ ಇಂದಿನ ದಿನಗಳಲ್ಲಿ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ. ಉದ್ಯೋಗದಲ್ಲಿ ಮಹಿಳೆ ಹಾಗೂ ಪುರುಷರಿಗೆ ಸಮಾನ ಅವಕಾಶಗಳಿವೆ. ಮನೆಯ ಕೆಲಸದ ಜೊತೆ ಜೊತೆಗೆ ಉದ್ಯೋಗವನ್ನು ಮಾಡುವ ಸವಾಲಿನ ಕೆಲಸ ಮಹಿಳೆಯರದ್ದಾಗಿದೆ. ಹಲವಾರು ಸಂಶೋಧನೆಗಳು ಪ್ರಕಾರ ಮಹಿಳೆಯರು ಪುರುಷರಿಗಿಂತ ಚೆನ್ನಾಗಿ ಕೆಲಸ ಮಾಡಬಲ್ಲರು ಎಂಬುದನ್ನು ಸಾಬೀತುಪಡಿಸಿವೆ. ಮಹಿಳೆ ಆರ್ಥಿಕವಾಗಿ ಸಬಲವಾದರೆ ಕುಟುಂಬದ ಆರ್ಥಿಕತೆಯು ಉತ್ತಮವಾಗುತ್ತದೆ. ಇಂತಹ ಉದ್ಯೋಗಮೇಳಗಳು ಜಾಣ್ಮೆ, ಕೌಶಲ್ಯ ಪ್ರತಿಭೆಯ ಅನಾವರಣ ಮಾಡಲು ಒಂದು ಸದಾವಕಾಶ. ಮಹಿಳೆ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಹಲವಾರು ಜವಾಬ್ದಾರಿಯನ್ನು ನಿಭಾಯಿಸಬೇಕಾಗುತ್ತದೆ ಉದ್ಯೋಗ ಪುರುಷ ಲಕ್ಷಣ ಎನ್ನುವ ಮಾತು ಈಗ ಸುಳ್ಳಾಗುತ್ತಿದೆ ಎಂದು ಹೇಳಿದರು. 

ನಬಾರ್ಡದ ಸಹಾಯ ನಿರ್ದೇಶಕರಾದ ಮಯೂರ್ ಕಾಂಬಳೆ ಮಾತನಾಡಿ ಧಾರವಾಡ ನಗರಗಳಲ್ಲಿ ಕೈಗಾರಿಕೆಗಳ ಬೆಳವಣಿಗೆ ಕ್ಷೀಪ್ರ ಪ್ರಗತಿಯಲ್ಲಿ ಆಗುತ್ತಿರುವದರಿಂದ ಉದ್ಯೋಗಾವಕಾಶಗಳು ಹೆಚ್ಚಾಗುತ್ತಿವೆ. ನಬಾರ್ಡ್‌ನಲ್ಲಿ ಮಹಿಳೆಯರಿಗಾಗಿ ಹಲವಾರು ಯೋಜನೆಗಳಿವೆ ಇಂತಹ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.  

ರಾಪಿಡ್ ಸಂಸ್ಥೆಯ ಕಾರ್ಯದರ್ಶಿ ವಾಣಿಶ್ರೀ ಪುರೋಹಿತ ಮಾತನಾಡಿ ಜನತಾ ಶಿಕ್ಷಣ ಸಮಿತಿ ಕೇವಲ ಶಿಕ್ಷಣ ನೀಡುವುದು ಮಾತ್ರವಲ್ಲದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಶ್ಲಾಘನೀಯವಾದುದು ಎಂದು ಅಭಿಪ್ರಾಯ ಪಟ್ಟರು  

ಈ ಉದ್ಯೋಗಮೇಳದಲ್ಲಿ 1430 ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಿದ್ದು, 170 ಅಭ್ಯರ್ಥಿಗಳು ಸ್ಥಳದಲ್ಲೆ ಆಯ್ಕೆಯಾದರು. 357 ಜನ ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ. 

ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾದ್ಯೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾ​‍್ಯಪಿಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಲವಿಕಾ ಕಡಕೋಳ ಸ್ವಾಗತಿಸಿದರು. ಪ್ರಾರಂಭದಲ್ಲಿ ಲಕ್ಷ್ಮೀ ಆಲೂರ ಪ್ರಾರ್ಥಿಸಿದರು. ಸ್ನೇಹಾದ ದೇಶಪಾಂಡೆ ನಿರೂಪಿಸಿ, ವಂದಿಸಿದರು. ಮಂಜುನಾಥ ಚಟ್ಟೇರ, ಬಿ.ಎ ತಡಕೋಡ, ವಿಜಯ ಉಪಾದ್ಯೆ ಇತರರು ಉಪಸ್ಥಿತರಿದ್ದರು.