ಮಹಿಳೆಯರ ಸಬಲೀಕರಣ ಆರ್ಥಿಕ ಸ್ವಾವಲಂಬನೆಯನ್ನು ಅವಲಂಬಿಸಿದೆ: ಉಜ್ವಲ ಎ ಸರನಾಡಗೌಡ
Women's empowerment depends on economic self-reliance: Ujwala A Saranad Gowda
ವಿಜಯಪುರ 19 : ನಗರದ ಮಹಿಳಾ ವಿಶ್ವವಿದ್ಯಾನಿಲಯದ ಸ್ನಾತಕ ಅಧ್ಯಯನ ವಿಭಾಗ 2025-26ನೇ ಶೈಕ್ಷಣಿಕ ಸಾಲಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಗೆ ಸ್ವಾಗತ ‘ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ವಿದ್ಯಾರ್ಥಿಗಳು ಕೌಟುಂಬಿಕ ಸಮಸ್ಯೆಗಳನ್ನು ನಿಭಾಯಿಸುವುದರ ಮೂಲಕ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು. ಇದರಿಂದ ಮಹಿಳಾ ಸಬಲೀಕರಣ ಮಹಿಳೆಯರ ಬದುಕಿನಲ್ಲಿ ಸೃಷ್ಟಿಯಾಗುತ್ತದೆಂದು ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀಮತಿ ಉಜ್ವಲ ಎ ಸರನಾಡಗೌಡ ಅವರು ಹೇಳಿದರು. ವಿದ್ಯಾರ್ಥಿನಿಯರು ಕಠಿಣ ಪರಿಶ್ರಮ ಮತ್ತು ನಿರಂತರತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರು ಕೀಳರಿಮೆಯನ್ನು ಬೆಳೆಸಿಕೊಳ್ಳದೆ ಬಲಿಷ್ಠವಾದ ವರ್ತನೆಯ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಬೇಕೆಂದು ಹೇಳುತ್ತ, ಮಹಿಳೆಯರು ಸದಾ ಧನಾತ್ಮಕ ಚಿಂತನೆಗಳೊಂದಿಗೆ ಬದುಕಬೇಕೆಂದು ತಿಳಿಸಿದರು. ಹೆಣ್ಣುಮಕ್ಕಳು ಸಮಾಜದ ಸಾಮಾಜಿಕ ಪರಿವರ್ತನೆಗಳನ್ನು ಸದಾ ಗಮನಿಸುತ್ತ ಇರಬೇಕೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ಶಿಸ್ತು, ತಾಳ್ಮೆ ಮತ್ತು ಸಂಯಮಗಳೊಂದಿಗೆ ಗುರಿಯನ್ನು ಸಾಧಿಸುವ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪವನ್ನು ಬೆಳೆಸಿಕೊಳ್ಳಬೇಕೆಂದು’ ವಿಶ್ಲೇಷಿಸಿದರು.
ಕುಲಸಚಿವರು ಶ್ರೀ ಶಂಕರಗೌಡ ಸೋಮನಾಳರವರು ಮಾತನಾಡಿ, ಹೆಣ್ಣುಮಕ್ಕಳ ಬದುಕು ಮಹಿಳಾ ಸಬಲೀಕರಣದ ಮೇಲೆ ನಿಂತಿದೆ. ವಿದ್ಯಾರ್ಥಿನಿಯರು ಮೊಬೈಲಗಳನ್ನು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಿ ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಬೇಕೆಂದು ಹೇಳಿದರು. ಜೀವನದಲ್ಲಿ ಬರುವ ಎಲ್ಲ ಆಕರ್ಷಣೆಗಳಿಂದ ದೂರವಿರವಿದ್ದು ಸಾಧನೆಗೆ ಒತ್ತು ಕೊಡಬೇಕೆಂದು ಹೇಳಿದರು.
ಕುಲಸಚಿವರು (ಮೌಲ್ಯಮಾಪನ) ಪ್ರೊ. ಬಸವರಾಜ ಲಕ್ಕಣ್ಣವರ ಅವರು ‘ಜೀವನದಲ್ಲಿ ಪ್ರತಿಯೊಬ್ಬರಿಗೂ ಸಮಸ್ಯೆಗಳು ಎದುರಾಗುತ್ತವೆ. ಯಾರೂ ಸಮಸ್ಯೆಗಳನ್ನು ಮೆಟ್ಟಿ ಮುಂದೆ ಸಾಗುತ್ತಾರೋ ಅವರು ಮಾತ್ರ ಗುರಿಯನ್ನು ತಲುಪುತ್ತಾರೆಂದು ಸ್ನಾತಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಾನಿಕ ಅಭಿಯಂತರರು ಶ್ರೀ ಮಾರುತಿ ಪಿ. ಕದಮ ಅವರು ವಿದ್ಯಾರ್ಥಿಗಳು ಮೊಬೈಲನ್ನು ಬಿಟ್ಟು ತಮ್ಮ ಅಧ್ಯಯನ ಗುರಿಯ ಕಡೆಗೆ ಲಕ್ಷ್ಯ ವಹಿಸಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ಸಕ್ಪಾಲ ಹೂವಣ್ಣ ಅವರು ವಿದ್ಯಾರ್ಥಿನಿಯರು ಬದುಕಿನಲ್ಲಿ ಸಾಮಾನ್ಯ ಜ್ಞಾನವನ್ನು ಹೊಂದಬೇಕೆಂದು ತಿಳಿಸಿದರು.
ಸ್ನಾತಕ ಅಧ್ಯಯನ ವಿಭಾಗದ ಸಂಯೋಜಕರು ಡಾ. ಜಿ. ಸೌಭಾಗ್ಯ, ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರು ಪ್ರೊ. ಎಂ. ಪಿ. ಬಳೆಗಾರ, ಸಾಂಸ್ಕೃತಿಕ ಸಂಯೋಜಕರು ಕು. ದೀಪಾ ಸೂರ್ಯವಂಶಿ, ವಿದ್ಯಾರ್ಥಿಗಳ ಕಾರ್ಯದರ್ಶಿ ಕು. ಲಕ್ಷ್ಮೀ ಕರ್ನಾಳ ಮತ್ತು ಬೋಧಕ-ಬೋಧಕೇತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶೃತಿ ಕುಲಕರ್ಣಿ ಅವರ ತಂಡದವರು ಮಹಿಳಾ ಗೀತೆಯನ್ನು ಪ್ರಾರ್ಥಿಸಿದರು. ಗೌತಮಿ ನಾಟೇಕರ ಸ್ವಾಗತಿಸಿದರು. ಸ್ಪಂದನಾ ಪರಿಚಯಿಸಿದರು. ರುಶ್ದಾ ಖಾನಂ ರೂಗಿ ವಂದಿಸಿದರು. ಶ್ವೇತಾ, ಗೀತಾ, ವಂದನಾ, ಸಾನಿಯಾ ಮತ್ತು ರೋಹಿಣಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 