ಪ್ರತಿಯೊಬ್ಬರ ಬದುಕನ್ನು ರೂಪಿಸುವ ಶಕ್ತಿ ಮಹಿಳೆಗಿದೆ: ಬಿ.ಗೀರೀಶಾನಂದ
Women's contribution to independence is immense
ಸ್ವಾತಂತ್ರ್ಯಗೊಳಿಸುವಲ್ಲಿಯೂ ಮಹಿಳೆಯರ ಕೊಡುಗೆ ಅಪಾರಽ
ಕೊಪ್ಪಳ 23 : ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಸಕ್ರೀಯ ಮತ್ತು ನಿರ್ಣಾಯಕ ಪಾತ್ರವಹಿಸಿ ಸಮಾಜ ಸುಧಾರಣೆ ಮೂಲಕ ರಾಷ್ಟ್ರವನ್ನು ಒಗ್ಗೂಡಿಸಿದರು ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಹೇಳಿದರು.
ಅವರು ಮಂಗಳವಾರದಂದು ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಸಭೆಯ ನೇತೃತ್ವವಹಿಸಿ ಮಾತನಾಡಿದರು.ಸಮಾಜದಲ್ಲಿ ಹಲವು ಪಾತ್ರಗಳನ್ನು ನಿಭಾಯಿಸಿ ಕುಟುಂಬವನ್ನು ಮುನ್ನೆಡೆಸುವ ಶಕ್ತಿ ಮಹಿಳೆಗಿದೆ. ದೇಶವನ್ನು ಸ್ವಾತಂತ್ರ್ಯಗೊಳಿಸುವಲ್ಲಿಯೂ ಹಲವಾರು ಮಹನೀಯ ಮಹಿಳೆಯರ ಕೊಡುಗೆ ಅಪಾರವಾಗಿದೆ. ರಾಣಿ ಲಕ್ಷ್ಮೀಬಾಯಿ, ಸರೋಜಿನಿ ನಾಯ್ಡು, ಸಾವಿತ್ರಿಬಾಯಿ ಪುಲೆ, ದುರ್ಗಾಬಾಯಿ ದೇಶಮುಖ್, ಕಮಲಾದೇವಿ ಚಟ್ಟೋಪಾಧ್ಯಯ, ಅನ್ನಿ ಬೆಸೆಂಟ್, ಕರುನಾಡಿನ ಹೋರಾಟಗಾರರಾದ ಕಿತ್ತೂರು ರಾಣಿ ಚನ್ನಮ್ಮ, ಗೌರಮ್ಮ ವೆಂಕಟರಾಮಯ್ಯ, ಯಶೋಧರ ದಾಸಪ್ಪ, ಉಮಾಬಾಯಿ ಕುಂದಾಪೂರ, ಲೀಲಾವತಿ ಮಾಗಡಿ, ಶಕುಂತಲಾ ಕುರ್ತಕೋಟಿ ನಾಗಮ್ಮ ಪಾಟೀಲ ಅವರಂತಹ ಸಾಮನ್ಯ ಮಹಿಳೆಯರು ತೆರಿಗೆ ಆಂದೋಲನ, ದ್ವಜ ಸತ್ಯಾಗ್ರಹದಲ್ಲಿ ಸಕ್ರೀಯರಾಗಿದ್ದರು. ಸಾರ್ವಜನಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಹಿಂಸೆ ಮತ್ತು ತ್ಯಾಗದ ಮೂಲಕ ನಾಡ ಸೇವೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ ಎಂದರು.ಕರವೇ ತತ್ವ ಸಿದಾಂತಗಳನ್ನು ಮೆಚ್ಚಿ ಬಂದಂತಹ ಮಹಿಳಾ ಕಾರ್ಯಕರ್ತರಿಗೆ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಭುವನೇಶ್ವರಿ ಮೊಟಗಿ ಅವರು ಕನ್ನಡದ ಶಾಲು ನೀಡಿ ಬಾವುಟ ನೀಡುವ ಮುಖಾಂತರ ಸೆರೆ್ಡಗೊಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ತಾಲೂಕಾಧ್ಯಕ್ಷ ಗವಿಸಿದ್ದಪ್ಪ ಚಕ್ಕಡಿ, ನಗರ ಅಧ್ಯಕ್ಷ ಪ್ರಫುಲ್‌ಕುಮಾರ ಪಾಟೀಲ, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ತಾಲೂಕಾ ಮಹಿಳಾ ಅಧ್ಯಕ್ಷೆ ಶಂಕ್ರಮ್ಮ ಮ್ಯಾಗಳಮನಿ, ಕನಕಗಿರಿ ತಾಲೂಕಾಧ್ಯಕ್ಷೆ ಹುಲಿಗೆಮ್ಮ ನಾಯಕ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 