ಕುಡಿಯುವ ನೀರಿಗಾಗಿ ಹಾಹಾಕಾರ ಖಾಲಿ ಕೊಡದೊಂದಿಗೆ ಮಹಿಳೆಯರ ಆಕ್ರೋಶ
Women's anger with empty pots crying for drinking water
ಲಕ್ಷ್ಮೇಶ್ವರ 30 : "ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಖಾಲಿ ಕೊಡದೊಂದಿಗೆ 17ನೇ ವಾರ್ಡಿನ ಮಹಿಳೆಯರು ಪುರಸಭೆಗೆ ಆಗಮಿಸಿ ನೀರು ಬಿಡುವಂತೆ ಆಕ್ರೋಶ ವ್ಯಕ್ತಪಡಿಸಿದರು ಕಳೆದ ಒಂದುವರೆ ತಿಂಗಳಿನಿಂದ ನಮ್ಮ ವಾರ್ಡಿಗೆ ಕುಡಿಯುವ ನೀರು ಬಂದಿಲ್ಲ ಬೋರಿನ ನೀರು ಸಹ ಬಂದಿಲ್ಲ ಏನು ಮಾಡಬೇಕು ನಾವು ನಮ್ಮ ಓಣಿಯಲ್ಲಿ ದನಕರುಗಳ ರೈತರ ಮನೆತನವೇ ಹೆಚ್ಚಾಗಿದ್ದು ಯಾವ ನೀರು ಬಾರದೆ ತುಂಬಾ ಸಮಸ್ಯೆ ಆಗಿದೆ ಯಾರ ಮುಂದೆ ಹೇಳಬೇಕು ನಮ್ಮ ಗೋಳು ಪುರಸಭೆಗೆ ಈಗಾಗಲೇ ಹಲವಾರು ಬಾರಿ ಮನವಿ ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದರು ಈ ಸಮಯದಲ್ಲಿ 17ನೆಯ ವಾರ್ಡಿನ ಮಹಿಳೆಯರಾದ ರತ್ನವ್ವ ಸುತಾರ ಸುಶಲವ್ವ ಬಣಗಾರ ಪಾರವ್ವ ಲಿಂಗ ಶೆಟ್ಟಿ ರೇಣವ್ವ ಲಿಂಗ ಶೆಟ್ಟಿ ಸಾವಮ್ಮ ಓದನವರ ಜಯವ್ವ ಹಾದಿಮನಿ ಶಂಕ್ರವ್ವ ಮೆಣಸಿನಕಾಯಿ ದೇವಕ್ಕ ಶರಶೂರಿ ಸೇರಿದಂತೆ ಇನ್ನೂ ಅನೇಕ ಮಹಿಳೆಯರು ಇದ್ದರು
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 