ಧಾರವಾಡ : ಧಾರವಾಡ ಶಹರದ ದಾನು ನಗರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ತಾಲೂಕು ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಟ್ ಆಫ ಇಂಡಿಯಾ ಧಾರವಾಡ ಶಾಖೆಯವರ ಸಹಯೋಗದೊಂದಿಗೆ ದಿ. 27 ರಂದು ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಟ್ ಆಫ ಇಂಡಿಯಾದ ವ್ಯೆದ್ಯಾಧಿಕಾರಿ ಡಾ. ವಿನಯಾ ಕುಲಕಣರ್ಿ ಮಾತನಾಡಿ ಗಭರ್ಾಶಯ ಕೊರಳಿನ ಕ್ಯಾನ್ಸರ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯ ಮುಖ್ಯ ಸಮನ್ವಯಾಧಿಕಾರಿ ಸಂಗೀತಾ ಮಾತನಾಡಿ ಸಮಾಜದಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾದದ್ದು ಎಂದರು. ತಾಲೂಕು ಸಮನ್ವಯಾಧಿಕಾರಿ ವೈಷ್ಣವಿಯವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ತಿಳಿಸಿದರು.
ಕುಟುಂಬ ಯೋಜನಾ ಸಂಘದ ಅಪ್ತ ಸಮಾಲೋಚಕ ಶಿಲ್ಪಾ ಅದರಗುಂಚಿಯವರು ಕುಟುಂಬ ಯೋಜನಾ ಸಂಘದ ಕಾರ್ಯ ವಿಸ್ತಾರವನ್ನು ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆದರ್ಶ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷ ಶಾಂತಾ ಗಡಕರ ಮಾತನಾಡಿ ಜ್ಞಾನ ವಿಕಾಸ ಕಾರ್ಯಕ್ರಮದಿಂದಾಗುವ ಪ್ರಯೋಜನಗಳನ್ನು ತಿಳಿಸಿದರು.
ತಾಲೂಕು ಸಮನ್ವಯಾಧಿಕಾರಿ ಬಸಮ್ಮಾ ಹೊಂಬರಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಟುಂಬ ಯೋಜನಾ ಸಂಘದ ಸಿಬ್ಬಂದಿಗಳಾದ ಬಸಮ್ಮಾ, ಶುಭಾಂಗಿ ಹಾಗೂ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.