2 ವರ್ಷದ ಮಗುವಿನೊಂದಿಗೆ ನದಿಗೆ ಹಾರಲು ಮಹಿಳೆ ಯತ್ನ
Woman tries to jump into river with 2-year-old child
ಲೋಕದರ್ಶನ ವರದಿ
ಜಮಖಂಡಿ 24; ತಾಲ್ಲೂಕಿನ ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರ ಕೃಷ್ಣಾ ನದಿ ಬ್ಯಾರೇಜ್‌ಗೆ ಮಹಿಳೆಯೊರ್ವಳು ತನ್ನ 2 ವರ್ಷದ ಮಗುವನ್ನು ಕರೆದುಕೊಂಡು ನದಿಗೆ ಹಾರಲು ಯತ್ನಿಸಿದ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ಮಾನಸಿಕ ಅಸ್ವಸ್ಥತೆಯಳಾದ ಸುರೇಖಾ ರಾಜು ಭಜಂತ್ರಿ (28) ಮತ್ತು 2 ವರ್ಷದ ಚಿಕ್ಕ ಮಗು ದುರ್ಗಪನನ್ನು ಕರೆದುಕೊಂಡು ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಹಾರಲು ಯತ್ನಿಸುತ್ತಿರುವ ಸಮಯದಲ್ಲಿ ಸಮಯಪ್ರಜ್ಷೆಯದಿಂದ ಸ್ಥಳೀಯರು ರಕ್ಷಣೆಯನ್ನು ಮಾಡಲಾಗಿದೆ.
ಮಾನಸಿಕ ಅಸ್ವಸ್ಥತೆಯಳಾದ ಸುರೇಖಾ ರಾಜು ಭಜಂತ್ರಿ ತನ್ನ ತವರು ಮನೆಯಾದ ವಿಜಯಪುರದಿಂದ 2 ವರ್ಷದ ಮಗನ್ನು ತೆಗೆದುಕೊಂಡು ಬಸ್ಸಿನಲ್ಲಿ ಬಂದು. ಚಿಕ್ಕಪಡಸಲಗಿ ಗ್ರಾಮಕ್ಕೆ ಇಳಿದು. ಅಲ್ಲಿಂದ ಕೃಷ್ಣಾ ನದಿಯ ಕಡೆಗೆ ಬಂದ ಬಳಿಕ ನದಿಗೆ ಹಾರಲು ಯತ್ನಿಸಿದ್ದಾಳೆಂದು ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ.
ಮಹಿಳೆ ನದಿಗೆ ಹಾರಲು ಯತ್ನಿಸುತ್ತಿರುವ ಸಮಯದಲ್ಲಿ ರಕ್ಷಣೆ ಮಾಡಲು ಮುಂದಾದ ಲಾಲಸಾಬ ಜಮಾದಾರ, ಪ್ರೇಮ ಜಂಬಗಿ ಹಾಗೂ ಸಾರ್ವಜನಿಕರು. ಸೇರಿಕೊಂಡು ರಕ್ಷಣೆ ಮಾಡಿರುವ ಘಟನೆ ಜರುಗಿದೆ. ಸ್ಥಳಕ್ಕೆ 112 ಪೋಲಿಸ್ ಇಲಾಖೆ ಎ,ಎಸ್,ಐ, ರಾಜು ಮನಗೂಳಿ, ಆರ್,ಬಿ, ಪೆಂಡಾರಿ, ಕ್ರೈಂ. ಎ,ಎಸ್, ಐ, ಆರ್,ಬಿ,ಕೋಳಿ. ಹಾಗೂ ಅಂಗನವಾಡಿ ಮೇಲ್ವಿಚಾರಕಿ ಡಿ,ಆರ್,ಚಲವಾದಿ, ಅಂಗವಾಡಿ ಕಾರ್ಯಕರ್ತೆ ಸಾವಿತ್ರಿ ಹಿರೇಮಠ, ಸಹಾಯಕಿ ಮಾದೇವಿ ತೇಲಿ ಸೇರಿಕೊಂಡು ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಐಗಳಿ ಗ್ರಾಮದ ಮಾನಸಿಕ ಅಸ್ವಸ್ಥತೆಯಳೆಯಾದ ಸುರೇಖಾಳ ಗಂಡ ರಾಜು ಭಜಂತ್ರಿ ಹಾಗೂ ಸಂಬಂಧಿಕರು ಚಿಕ್ಕಪಡಸಲಗಿ ಗ್ರಾಮಕ್ಕೆ ಬಂದ ಬಳಿಕ ಗ್ರಾಮಸ್ಥರು ಹಾಗೂ ಪೋಲಿಸರು ಸೇರಿಕೊಂಡು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 