ವೋಟರ್ ಐಡಿ ಇಲ್ಲದಿದ್ದರೆ ವ್ಯಕ್ತಿಯ ಅಸ್ತಿತ್ವ ಇಲ್ಲ - ಮಾಜಿ ಸಚಿವ ಪರಮೇಶ್ವರ ನಾಯ್ಕ
Without a voter ID, a person does not exist - Former Minister Parameshwara Naik
ಲೋಕದರ್ಶನ ವರದಿ
ಹೂವಿನಹಡಗಲಿ 18: ’ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಜೂನ್ 30ರಿಂದ ಕಾರ್ಯ ಆರಂಭವಾಗಲಿದ್ದು ಪ್ರತಿಯೊಂದು ಮತವೂ ಅಮೂಲ್ಯ ವಾಗಿದ್ದು, ಪಕ್ಷದ ಬೂತ ಮಟ್ಟದ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕಿದೆ’ ಎಂದು ಮಾಜಿ ಸಚಿವ ಪಿಟಿ.ಪರಮೇಶ್ವರನಾಯಕ ಹೇಳಿದರು. ಪಟ್ಟಣದ ದ್ರಾಕ್ಷಿಯಣಿ ಕಲ್ಯಾಣ ಮಂಟಪದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಡೆದ ಬಿಎಲ್ಎ- 2 ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ ’ಮುಂಬರುವ ಗ್ರಾಮ ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ’ಮತದಾರರ ಪರಿಷ್ಕರಣೆ ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ನೀಡಿದೆ. ಅಂದು ಇಲ್ಲದಿದ್ದರೆ ವ್ಯಕ್ತಿಯ ಅಸ್ತಿತ್ವವೇ ಕಳೆದುಕೊಂಡಂತಾ ಗುತ್ತದೆ. ಆದ್ದರಿಂದ ಅರ್ಹ ಮತದಾರರ ಹೆಸರನ್ನು ಉಳಿಸುವ ಜವಾಬ್ದಾರಿ
ನಮ್ಮೆಲ್ಲರ ಮೇಲಿದೆ’ ಎಂದರು. ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅದ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಾದ ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ಗೌಸ್ ಮೊಹಿದ್ದೀನ್, ಪಂಚ ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಶಾಂತನಗೌಡ, ಸದಸ್ಯ ಗುರುವಿನ ರಾಜಣ್ಣ, ಪ್ರಚಾರ ಸಮಿತಿ ಅದ್ಯಕ್ಷ ಹಾಲೇಶ ಸೋಗಿ, ಮುಖಂಡರಾದ ಬಸವನಗೌಡ ಪಾಟೀಲ್,ಜ್ಯೊತಿ ಮಲ್ಲಣ್ಣ, ಚಂದ್ರನಾಯ್ಕ, ವಸಂತ, ದೂದನಾಯ್ಕ, ಸೊನ್ನದ ಮಹೇಶ್, ಯುವ. ಕಾಂಗ್ರೆಸ್ ಅದ್ಯಕ್ಷ ಮಂಜುನಾಥ ದೇಸಾಯಿ, ಶಿವಕುಮಾರ್, ಹಕ್ಕಂಡಿ ಮಂಜುನಾಥ ಸೇರಿದಂತೆ ತಾಲ್ಲೂಕಿನ ಪಕ್ಷದ ಕಾರ್ಯಕರ್ತರು ತರಬೇತಿ ಯಲ್ಲಿ ಭಾಗವಹಿದ್ದರು. ಇದೇ ವೇಳೆ ಬಿಜೆಪಿ ಯ ಗಡಿಗಿ ಕೃಷ್ಣ ಕಾಂಗ್ರೆಸ್ ಸೇರೆ್ಡ ಯಾದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 