ಬುಧವಾರದೊಳಗಾಗಿ ಸರ್ವಸಮ್ಮತದ ಅಭ್ಯಥರ್ಿ ಆಯ್ಕೆ: ಯಡಿಯೂರಪ್ಪ

ಬೆಂಗಳೂರು 08: ನಾಳೆ ಅಥವಾ ಬುಧವಾರ ಸಭೆ ನಡೆಸಿ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯಥರ್ಿಗಳ ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ

            ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಜಮಖಂಡಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ  ಸ್ಥಳೀಯ ಅಭ್ಯಥರ್ಿಗಳ ಜೊತೆ ಮಾತುಕತೆ ನಡೆಸಿ ಅಭಿಪ್ರಾಯಗಳನ್ನು ಪಡೆಯಲಾಗಿದೆ.

            ಮತ್ತೊಮ್ಮೆ ನಾಳೆ ಅಥವಾ ಬುಧವಾರ ಮುಖಂಡರೆಲ್ಲರೂ ಸಭೆ ಸೇರಿ ಐದು ಕ್ಷೇತ್ರಗಳಿಗೆ ಸರ್ವಸಮ್ಮತದ ಅಭ್ಯಥರ್ಿಯನ್ನು ಆಯ್ಕೆ ಮಾಡುವುದಾಗಿ ತಿಳಿಸಿದರು

            ಐದು ಕ್ಷೇತ್ರಗಳಿಗೆ ಆಕಾಂಕ್ಷಿಗಳು ಸಾಕಷ್ಟಿದ್ದಾರೆ. ಪ್ರತಿಯೊಂದು ಕ್ಷೇತ್ರಕ್ಕೂ ಎರಡರಿಂದ ಮೂವರು ಅಭ್ಯಥರ್ಿಗಳು ಸ್ಪಧರ್ಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಅಭಿಪ್ರಾಯ ಪಡೆದು ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ಕೋರ್  ಕಮಿಟಿಯಲ್ಲಿ ತೀಮರ್ಾನಿಸಲಾಗುವುದು ಎಂದರು. ಯಾವುದೇ ರೀತಿಯ ಭಿನ್ನಮತ, ಅಸಮಾಧಾನಕ್ಕೆ ಆಸ್ಪದ ನೀಡದೆ ಅಭ್ಯಥರ್ಿಯನ್ನು ಆಯ್ಕೆ ಮಾಡುತ್ತೇವೆ. ಐದು ಕ್ಷೇತ್ರಗಳನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು

            ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಶ್ರೀಕಾಂತ್ ಕುಲಕಣರ್ಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಬಗ್ಗೆ ಚಚರ್ಿಸಲಾಗುವುದು. ನನಗೂ ಕೂಡ ಅವರ ಬೆಂಬಲಿಗರ ಮನವಿ ಮನವರಿಕೆಯಾಗಿದೆ. ಅಂತಿಮವಾಗಿ ಪಕ್ಷ ಕೈಗೊಳ್ಳುವ ತೀಮರ್ಾನಕ್ಕೆ ಎಲ್ಲರೂ ಬದ್ಧರಾಗಬೇಕೆಂದು ಸೂಚಿಸಿದರು

            ಇನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ  ಉಪಚುನಾವಣೆಯ ಹೊಣೆಗಾರಿಕೆಯನ್ನು ಶಾಸಕ ಶ್ರೀರಾಮುಲುಗೆ ನೀಡಲಾಗಿದೆ. ಜಿಲ್ಲೆಯಿಂದ ಯಾರು ಅಭ್ಯಥರ್ಿಯಾಗಬೇಕು ಎಂಬುದನ್ನು ರಾಮುಲು ಸೂಚಿಸಿದವರಿಗೆ ಟಿಕೆಟ್ ನೀಡಲು ಯಡಿಯೂರಪ್ಪ ತೀಮರ್ಾನಿಸಿದ್ದಾರೆ

            ಬಿಜೆಪಿಯಿಂದ ಸ್ಪಧರ್ಿಸಲು ಹಲವಾರು ಹೆಸರುಗಳು ಕೇಳಿ ಬರುತ್ತಿರುವುದರಿಂದ ಅಂತಿಮವಾಗಿ ರಾಮುಲು  ಸೂಚಿಸಿದವರನ್ನೇ ಅಭ್ಯಥರ್ಿ ಮಾಡಲು ಪಕ್ಷ ತೀಮರ್ಾನಿಸಿದೆ

            ಇನ್ನು ಉಪಚುನಾವಣೆಯ ಉಸ್ತುವಾರಿಯನ್ನು ರಾಮುಲು ಹೆಗಲಿಗೆ ನೀಡಲು ಬಿಜೆಪಿ ತೀಮರ್ಾನಿಸಿದೆ ಎಂದು ತಿಳಿದುಬಂದಿದೆ.