ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕಾಲಿಟ್ಟ ಚಳಿಗಾಲ: ಆರೋಗ್ಯ ಕಾಳಜಿ ಅಗತ್ಯ
Winter sets in villages : Health care is essential
ವರದಿ: ಸಂತೋಷಕುಮಾರ ಕಾಮತ್
ಮಾಂಜರಿ 17: ಸತತ ಆರೂವರೆ ತಿಂಗಳಿಂದ ಮಳೆಗಾಲದ ತಂಪು ಆವರಿಸಿಕೊಂಡಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಎರಡು ದಿನಗಳಿಂದ ಚಳಿಗಾಲದ ತಂಗಾಳಿ ಬೀಸಲು ಶುರುವಾಗಿದೆ. ಈ ಹಸಿ, ಬಿಸಿ ಬೆಚ್ಚನೆ ವಾತಾವರಣದ ಜತೆಯಲ್ಲಿಯೇ ನೆಗಡಿ, ಕೆಮ್ಮು ಕಾಲಿಟ್ಟಿದೆ.
ಕೃಷ್ಣ ನದಿ ತೀರದ ಗ್ರಾಮಗಳಲ್ಲಿ ಸದ್ಯ ಗರಿಷ್ಠ ತಾಪಮಾನ 33.8 ಡಿಗ್ರಿ ಸೆಲ್ಸಿಯಸ್ ಇದೆ. ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ಆಗಿದೆ. ವಾಡಿಕೆಗಿಂತ ಐದು ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಾಲೂಕಿನಲ್ಲಿ ಕೆಲ ಮಡ್ಡಿ ಭಾಗದ ಗ್ರಾಮಗಳಲ್ಲಿ ಮಾತ್ರ ಗರಿಷ್ಠ ಕನಿಷ್ಠ ತಾಪಮಾನ ಒಂದೆರಡು ಡಿಗ್ರಿ ಸೆಲ್ಸಿಯಸ್ ಅಧಿಕವಾಗಿದೆ. ಆದರೆ, ಮಳೆಗಾಲದ ಇತರ ದಿನಗಳಿಗೆ ಹೋಲಿಸಿದರೆ, ಎಲ್ಲೆಡೆ ಕನಿಷ್ಠ ತಾಪಮಾನ ವಾಡಿಕೆಗಿಂತ ಇಳಿಕೆಯಾಗಿದೆ. ಚಳಿಗಾಲದ ಆರಂಭದ ಲಕ್ಷಣಗಳು ಶುರುವಾಗಿವೆ.
ಬೆಳಗ್ಗೆ ಮತ್ತು ಸಂಜೆ ತಂಪನೆ ವಾತಾವರಣ ಹೆಚ್ಚಾಗುತ್ತಿದ್ದು, ಒಣ ಹವೆಯ ಅನುಭವ ಆಗುತ್ತಿದೆ. ಈ ತಂಪು ಗಾಳಿಯಲ್ಲಿ ಮನೆಯೊಳಗಿನ ಬಿಸಿ ಬೆಚ್ಚನೆಯ ಅನುಭವ ಕೊಡುತ್ತಿದೆ. ವಾತಾವರಣ ಬದಲಾಗುತ್ತಿ ರುವ ಸಂದರ್ಭದಲ್ಲಿ ಸಹಜವಾಗಿ ಅನಾರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಕಫ, ಗಂಟಲು ನೋವು, ನೆಗಡಿ, ಚರ್ಮ ಸುಕ್ಕುಗಟ್ಟುವ ತೊಂದರೆ ಸಾಮಾನ್ಯವಾಗುತ್ತಿದೆ. ಈಗಷ್ಟೇ ತಣ್ಣನೆಹವಾಮಾನ ಶುರುವಾಗಿದ್ದರಿಂದ ಸಮಸ್ಯೆ ತೀವ್ರವಾಗಿಲ್ಲ.ಮೇ ತಿಂಗಳಿಂದ ಶುರುವಾದ ಮಳೆ ಬಿಟ್ಟು
ಬಿಡದೆ ನವೆಂಬರ್ ಮೊದಲ ವಾರದ ವರೆಗೆ ಜನ ಕಿರಿಕಿರಿಗೆ ಒಳಗಾಗುವಂತಾಗಿತ್ತು. ಕಳೆದ ವರ್ಷ ಸುರಿಯುತ್ತಿದ್ದರಿಂದ ನವೆಂಬರ್ ತಿಂಗಳಲ್ಲಿಯೂ ಮಳೆ ಆವರಿಸಿ ಭತ್ತದ ಬೆಳೆ ನಾಶ ಆಗಿದ್ದವು. ಈ ವರ್ಷವೂ ಹಾಗೆ ಆಗಬಹುದೇನೋ ಎನ್ನುವ ಚಿಂತೆ ರೈತರನ್ನು ಕಾಡಿತ್ತು. ಎರಡು ದಿನಗಳಿಂದ ಚಳಿಗಾಳಿ ಬೀಸಲು ಶುರುವಾಗಿದ್ದರಿಂದ ಇನ್ನೇನು ಚಳಿಗಾಲ ಶುರುವಾಗುತ್ತಿದೆ ಎನ್ನುವ ಲಕ್ಷಣ ಗೋಚರಿಸುತ್ತಿದೆ.
ಆರೋಗ್ಯ ಕಾಳಜಿ ಅಗತ್ಯ: ಚಳಿಗಾಲದಲ್ಲಿ
ಒಣ ಹವೆ ಇರುವುದರಿಂದ ಅಲರ್ಜಿ, ವೈರಸ್ ಸೋಂಕಿನ ಅನಾರೋಗ್ಯಗಳು ಹೆಚ್ಚಾಗುತ್ತವೆ. ತುಟಿ ಒಣಗುವುದು, ಚರ್ಮ ಒಣಗಿದಂತಾಗಿ ಒಡೆಯುವುದು ಇನ್ನಿತರ ಸಮಸ್ಯೆ ಕಾಡುತ್ತವೆ. ವೃದ್ಧರು, ಮಕ್ಕಳ ಲ್ಲಿಯೂ ಅನಾರೋಗ್ಯ ಸಾಮಾನ್ಯವಾಗುತ್ತವೆ. ಹಾಗಾಗಿ ಇಂಥ ಸಂದರ್ಭದಲ್ಲಿ ಬಿಸಿ ನೀರು ಕುಡಿಯಬೇಕು. ರಾತ್ರಿ ಮತ್ತು ಮುಂಜಾನೆ ವಾಯು ವಿಹಾರವನ್ನು ಕಡಿಮೆ ಮಾಡಬೇಕು ಎನ್ನುವುದು ಆರೋಗ್ಯ ಇಲಾಖೆ ಸಲಹೆ. ರಾಜ್ಯದಲ್ಲಿ ಚಳಿ ವಾತಾವರಣ ಇನ್ನೂ ಗರಿಷ್ಠ ಮಟ್ಟಕ್ಕೆ ಹೋಗಿಲ್ಲ. ಹಾಗಾಗಿ ಈ ಬಗ್ಗೆ ಸದ್ಯ ರಾಜ್ಯದಲ್ಲಿ ಯಾವುದೇ ಮುನ್ನೆಚ್ಚರಿಕೆ ಮಾರ್ಗಸೂಚಿ ಬಿಡುಗಡೆ ಆಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಚಳಿಗಾಲದಲ್ಲಿ ಹೇಗಿರಬೇಕು?
* ವಯಸ್ಸಾದವರು, ಮಕ್ಕಳು, ರೋಗಿಗಳ ಕಾಳಜಿ ಅಗತ್ಯ
* ಬಿಪಿ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ರೋಗಿಗಳು ಬೆಚ್ಚಗಿರಬೇಕು
* ಬಿಸಿಯಾದ ಊಟ, ಉಪಾಹಾರವನ್ನೇ ಸೇವಿಸಬೇಕು
* ಚಳಿ ವಾತಾವರಣದಲ್ಲಿ ಹೊರಗಡೆ ಹೋಗಬಾರದು.
* ಐಸ್‌ಕ್ರೀಮ್, ತಂಪು ಪಾನೀಯಗಳಿಂದ ದೂರ ಇರಬೇಕು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 