ಇಚ್ಛಾಶಕ್ತಿಯೇ ಸಾಧನೆಗೆ ಮೆಟ್ಟಿಲಾಗಬೇಕು...
Willpower is what leads to achievement...
ವಿಜಯಪುರ 24 : ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಮತ್ತು ಅತ್ಯಂತ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿ ಜೀವನವು ಅಮೂಲ್ಯವಾದ ಘಟ್ಡವಾಗಿದ್ದು, ಉದಾತ್ತ ಗುರಿ ಹೊಂದುತ್ತಾ, ಆ ಗುರಿಯ ಸಾಧನೆಯತ್ತ ಕಠಿಣ ಪರಿಶ್ರಮ, ನಿರಂತರ ಅಧ್ಯಯನ, ಸಾಧಿಸಿಯೇ ತೀರುತ್ತೇನೆಂಬ ದೃಢ ಸಂಕಲ್ಪದೊಂದಿಗೆ ಹೆಜ್ಜೆಯಿಟ್ಟರೆ ಖಂಡಿತವಾಗಿಯೂ ಯಶಸ್ಸು ಗಳಿಸಬಹುದು ಎಂದು ಎ.ಎಸ್.ಪಿ. ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ. ಭಾರತಿ ಮಠ ಅವರು ಅಭಿಪ್ರಾಯಪಟ್ಟರು.ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ:23-09-2025 ರಂದು ವಾಣಿಜ್ಯಶಾಸ್ತ್ರ ವಿಭಾಗದಿಂದ ಆಯೋಜಿಸಿದ ಶುಭ ಹಾರೈಕೆ (ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಅವರು ಮಾತನಾಡುತ್ತಾ, ವಿದ್ಯಾರ್ಥದೆಸೆಯಲ್ಲಿ ಎದುರಾಗುವ ಸಂಕಷ್ಟಗಳನ್ನು ಮೀರಿ ತಮ್ಮ ಕನಸುಗಳನ್ನು ನನಸಾಗಿಸಲು ಹಾಗೂ ಸಾಧನೆಯ ಮೇರು ಶಿಖರವನ್ನು ಮುಟ್ಟಲು ಅದಕ್ಕೆ ಬೇಕಾದ ಪೂರ್ವ ತಯಾರಿ, ಯೋಜನೆ, ಯೋಚನೆ ಮತ್ತು ಸದಾಲೋಚನೆ ಮತ್ತು ಸಮಯ ನಿರ್ವಹಣೆ ಮಾಡಬೇಕು. ನಾನು ಸಮರ್ಥ, ಸಶಕ್ತನೆಂಬ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಅಧ್ಯಯನಶೀಲರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಉನ್ನತ ಶಿಕ್ಷಣ ಪೂರೈಸಿದ ನಂತರ ಮುಂದೇನು ಎಂಬ ಆತಂಕಪಡದೇ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶ ಪಡೆಯಲು ಬೇಕಾದ ಸಂದರ್ಶನ ಕಲೆ, ಕೌಶಲ್ಯ, ನೈಪುಣ್ಯತೆ, ವಿಶ್ಲೇಷಣೆ-ತಾರ್ಕಿಕ ಶಕ್ತಿ ಮತ್ತು ಕಾರ್ೋರೇಟ್ ಜಗತ್ತು ಅಪೇಕ್ಷಿತವಾದ ಕೌಶಲ್ಯಗಳನ್ನು ಪಡೆದುಕೊಳ್ಳಬೇಕು. ವಾಣಿಜ್ಯ ಪದವಿ ನಂತರ ಚಾರ್ಟರ್ಡ ಅಕೌಂಟಂಟ್, ಕಂಪನಿ ಸೆಕ್ರೆಟರಿ, ಐ.ಸಿ.ಡ್ಲ್ಯೂ.ಎ. ಫೈನಾನ್ಸಿಯಲ್ ಅನಾಲಿಸ್ಟ್, ಮಾರ್ಕೆಟಿಂಗ್ ಮ್ಯಾನೇಜರ್, ಐ.ಬಿ.ಪಿ.ಎಸ್. ನಂತರ ಸ್ಪರ್ಧಾತ್ಮಕ ಮತ್ತು ವೃತ್ತಿಪರ ಪರೀಕ್ಷೆಗಳಲ್ಲಿ ಸಾಫಲ್ಯ ಹೊಂದಿದರೆ ಉದ್ಯೋಗ ದೊರೆಕಲಿವೆ ಎಂದು ಕಿವಿಮಾತು ಹೇಳಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರೊ. ಎಂ.ಎಸ್.ಖೊದ್ನಾಪೂರ ಅವರು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡುತ್ತಾ, ನಿಮ್ಮಲ್ಲಿರುವ ಭರವಸೆಯೇ ಜೀವನವನ್ನು ಮುನ್ನಡೆಸುವ ಇಂಧನವಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿದ್ದು, ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತೃಷ್ಟ ಗುಣಮಟ್ಟದ ಜ್ಞಾನ ಪಡೆದುಕೊಂಡು ತಮ್ಮ ಉನ್ನತ ವ್ಯಾಸಂಗ ಕೈಕೊಂಡು ಮತ್ತು ವಿದ್ಯಾರ್ಥಿಗಳ ಭಾವೀ ಭವಿಷ್ಯವು ಉಜ್ವಲವಾಗಲಿ, ಕಂಡ ಕನಸು ನನಸಾಗಲೆಂದು ಹಾರೈಸಿದರು.
ಹಿರಿಯ ಪ್ರಾಧ್ಯಾಪಕ ಡಾ. ಚಿದಾನಂದ ಆನೂರ ಅವರು ಮಾತನಾಡಿ, ಜೀವನ ನಿಮಗೆ ನೇರವಾಗಿ ಯಶಸ್ಸು ತಂದು ಕೊಡುವುದಿಲ್ಲ. ಅದು ನಮಗೆ ಸಾಧ್ಯತೆಗಳನ್ನು ಮತ್ತು ಅವಕಾಶಗಳನ್ನು ನೀಡುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಜ್ಞಾನ್, ಪ್ರತಿಭೆ, ಜಾಣ್ಮೆ, ಶಕ್ತಿ-ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಜಯ ಗಳಿಸಬೇಕೆಂದು ಸಲಹೆ ಹೇಳಿದರು. ಸಮಾರಂಭದಲ್ಲಿ ಪ್ರಾಂಶುಪಾಲ ಡಾ, ಎ.ಐ.ಹಂಜಗಿ, ಡಾ. ಚಂದ್ರಕಾಂತ.ಬಿ, ಮತ್ತು ಡಾ. ಮಮತಾ ಬನ್ನೂರ, ಇನ್ನಿತರರು ಸಹ ವೇದಿಕೆಯ ಮೇಲಿದ್ದರು. ಬಿ.ಕಾಂ 6 ನೇಯ ಸೆಮೆಸ್ಟರ್‌ನ ಕವಿತಾ ಕಂಟೇನವರ, ಗೀತಾ ಮಿಸ್ಕಿನ್ ಮತ್ತು ಐಶ್ವರ್ಯ ಕುಂಬಾರ ಇವರು ತಮ್ಮ ಮೂರು ವರ್ಷಗಳ ವಿದ್ಯಾರ್ಥಿ ಜೀವನದ ಸವಿ ನೆನಪುಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಡಾ. ದೇವೆಂದ್ರಗೌಡ ಪಾಟೀಲ, ಪ್ರೊ. ವಿಶ್ವನಾಥ ಕಲ್ಮೇಶರ, ಡಾ. ಎಸ್.ಡಿ.ಬಿರಾದಾರ ಇನ್ನಿತರರು ಉಪಸ್ಥತರಿದ್ದರು.
ಕವಿತಾ ಬಸರಿಗಿಡದ ್ಘ ಮದೀನಾ ತುಂಬದ ಪ್ರಾರ್ಥಿಸಿದರು. ಅಂಬಿಕಾ ಮುಳಸಾವಳಗಿ ಸ್ವಾಗತಿಸಿ, ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಗೌರಮ್ಮ ಲೋಗಾವಿ ಮಾಲಾರೆ್ಣ ಕಾರ್ಯಕ್ರಮ ನಡೆಸಿಕೊಟ್ಟರು. ಲಕ್ಷ್ಮೀ ಕೋಳಿ ಕಾರ್ಯಕ್ರಮ ನಿರೂಪಿಸಿದರು.ಸಂಗಮೇಶ ಗುಡ್ಡದ ವಂದಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಜರುಗಿದವು.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 